Violation of Code of Conduct: 48 ಗಂಟೆಗಳ ಕಾಲ ಚುನಾವಣೆ ಪ್ರಚಾರ ಮಾಡದಂತೆ ತೆಲಂಗಾಣ ಸಚಿವರಿಗೆ ಚುನಾವಣಾ ಆಯೋಗ ನಿರ್ಬಂಧ – Violation of Code of Conduct: Election Commission bans BRS leader from campaigning for 48 hours


ಬಿಆರ್‌ಎಸ್ ಅಭ್ಯರ್ಥಿಗೆ ಮತ ನೀಡದಿದ್ದರೆ ಎಲ್ಲಾ ಕಲ್ಯಾಣ ಯೋಜನೆಗಳನ್ನು ನಿಲ್ಲಿಸುವುದಾಗಿ ಸಚಿವರು ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಜಗದೀಶ್ ರೆಡ್ಡಿ ವಿರುದ್ಧ ಬಿಜೆಪಿಯ ಕಪಿಲವಾಯಿ ದಿಲೀಪ್ ಕುಮಾರ್ ಅವರು ಅಕ್ಟೋಬರ್ 26 ರಂದು ದೂರು ದಾಖಲಿಸಿದ್ದಾರೆ.

ತೆಲಂಗಾಣ:ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು  ಚುನಾವಣಾ ಆಯೋಗ ತೆಲಂಗಾಣ ಇಂಧನ ಸಚಿವ ಜಿ ಜಗದೀಶ್ ರೆಡ್ಡಿ ಅವರನ್ನು 48 ಗಂಟೆಗಳ ಕಾಲ ಮುನುಗೋಡು ವಿಧಾನಸಭಾ ಉಪಚುನಾವಣೆಯಲ್ಲಿ ಪ್ರಚಾರ ಮಾಡದಂತೆ ಚುನಾವಣಾ ಆಯೋಗ ನಿರ್ಬಂಧಿಸಿದೆ.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದಕ್ಕಾಗಿ ತೆಲಂಗಾಣದ ಇಂಧನ ಸಚಿವ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕ ಜಿ ಜಗದೀಶ್ ರೆಡ್ಡಿ ಅವರಿಗೆ ಚುನಾವಣಾ ಆಯೋಗವು ಅವರಿಗೆ ನೋಟಿಸ್ ನೀಡಿದೆ. ಅಕ್ಟೋಬರ್ 25ರಂದು ಮುನುಗೋಡು ಉಪಚುನಾವಣೆ ಸಲುವಾಗಿ ನಡೆಸಿದ ಪ್ರಚಾರದಲ್ಲಿ ಸಾರ್ವಜನಿಕ ಭಾಷಣದಲ್ಲಿ ಜಗದೀಶ್ ರೆಡ್ಡಿ ಅವರು ಕಾರ್ ಚಿಹ್ನೆಗೆ (ಬಿಆರ್‌ಎಸ್ ಚುನಾವಣಾ ಚಿಹ್ನೆ) ಮತ ನೀಡದಿದ್ದರೆ ಕಲ್ಯಾಣ ಯೋಜನೆಗಳನ್ನು ನಿಲ್ಲಿಸಲಾಗುವುದು ಎಂದು ಹೇಳಿದರು.

ಬಿಆರ್‌ಎಸ್ ಅಭ್ಯರ್ಥಿಗೆ ಮತ ನೀಡದಿದ್ದರೆ ಎಲ್ಲಾ ಕಲ್ಯಾಣ ಯೋಜನೆಗಳನ್ನು ನಿಲ್ಲಿಸುವುದಾಗಿ ಸಚಿವರು ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಜಗದೀಶ್ ರೆಡ್ಡಿ ವಿರುದ್ಧ ಬಿಜೆಪಿಯ ಕಪಿಲವಾಯಿ ದಿಲೀಪ್ ಕುಮಾರ್ ಅವರು ಅಕ್ಟೋಬರ್ 26 ರಂದು ದೂರು ದಾಖಲಿಸಿದ್ದಾರೆ.

ಚುನಾವಣೆ ಕೂಸುಕುಂಟ್ಲ ಪ್ರಭಾಕರ ರೆಡ್ಡಿ ಮತ್ತು ರಾಜಗೋಪಾಲ್ ರೆಡ್ಡಿ ನಡುವೆ ಅಲ್ಲ, ಇದು 2 ಸಾವಿರ ಪಿಂಚಣಿ ಮುಂದುವರಿಸಬೇಕೋ ಬೇಡವೋ ಎಂಬುದಕ್ಕೆ ಚುನಾವಣೆ, ರೈತ ಬಂಧು ಮುಂದುವರಿಸಬೇಕೋ ಬೇಡವೋ, 24 ಗಂಟೆ ಉಚಿತ ಕರೆಂಟ್ ಮುಂದುವರಿಸಬೇಕೋ ಬೇಡವೋ ಎಂಬುದಕ್ಕೆ ಚುನಾವಣೆ. ಅಂಗವಿಕಲರಿಗೆ 3,000 ರೂಪಾಯಿ ಪಿಂಚಣಿ ಮುಂದುವರಿಸಬೇಕೋ ಬೇಡವೋ, ಯೋಜನೆ ಮುಂದುವರಿಸಲು ಇಚ್ಛಿಸುವವರು ಕಾರಿಗೆ ಮತ ನೀಡಿ ಕೆಸಿಆರ್ ಜೊತೆ ನಿಲ್ಲಬಹುದು. ಮೋದಿ ಜೀ 3,000 ರೂಪಾಯಿ ಪಿಂಚಣಿ ಬೇಡ ಎಂದಿದ್ದು, ಖಂಡಿತ ಕೊಡುತ್ತೇನೆ ಎಂದು ಕೆಸಿಆರ್ ಹೇಳಿದರು. ಯಾರಿಗಾದರೂ ಪಿಂಚಣಿ ಬಗ್ಗೆ ಆಸಕ್ತಿಯಿಲ್ಲದಿದ್ದರೆ ಅವರು ಮೋದಿಗೆ ಮತ ಹಾಕಬಹುದು, ಯಾರಿಗಾದರೂ ಈ ಯೋಜನೆಗಳು ಬೇಕಿದ್ದರೆ ಕೆಸಿಆರ್‌ಗೆ ಮತ ನೀಡಿ ಎಂದು ಸಚಿವರು ಹೇಳಿದರು.

ಅಕ್ಟೋಬರ್ 29ರ ಶನಿವಾರ ಮಧ್ಯಾಹ್ನ 3 ಗಂಟೆಯೊಳಗೆ ಮೇಲಿನ ಹೇಳಿಕೆಗೆ ಸಂಬಂಧಿಸಿದಂತೆ ತಮ್ಮ ನಿಲುವನ್ನು ವಿವರಿಸಲು ರೆಡ್ಡಿ ಅವರಿಗೆ EC ಕೇಳಿದೆ, ನೀಡದಿದ್ದರೆ ಸಚಿವರಿಗೆ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ನೋಟಿಸ್ ಜಾರಿ ಮಾಡಿದೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.