Viral: ಹೊತ್ತಿ ಉರಿದ ವಿಮಾನ, ಭಯಬಿದ್ದ ನೆಟ್ಟಿಗರು | Viral Video Plane crashes, goes up in flames on freeway as cars drive by


Airplane crash in California : ನೋಡನೋಡುತ್ತಿದ್ದಂತೆಯೇ ವಿಮಾನ ಆಕಾಶದಿಂದ ನೆಲಕ್ಕಪ್ಪಳಿಸುತ್ತದೆ. ಬೆಂಕಿ ಭುಗಿಲೆದ್ದರೂ ಯಾರೊಬ್ಬರಿಗೂ ಗಾಯವಾಗಿಲ್ಲ ಎನ್ನುವುದೇ ಪವಾಡ.

Viral: ಹೊತ್ತಿ ಉರಿದ ವಿಮಾನ, ಭಯಬಿದ್ದ ನೆಟ್ಟಿಗರು

ಪ್ರಾತಿನಿಧಿಕ ಚಿತ್ರ

Plane Crashes : ಫ್ರೀವೇನಲ್ಲಿ ಕಾರುಗಳು ಚಲಿಸುತ್ತಿವೆ. ಆಕಾಶದಲ್ಲಿದ್ದ ವಿಮಾನವೊಂದು ಇದ್ದಕ್ಕಿದ್ದಂತೆ ಬಿದ್ದು ಬೆಂಕಿ ಹೊತ್ತಿಕೊಳ್ಳುತ್ತದೆ. ಇದು ನಡೆದಿದ್ದು ಕ್ಯಾಲಿಫೋರ್ನಿಯಾದಲ್ಲಿ. ಲ್ಯಾಂಡಿಂಗ್ ಮಾಡಿದ ಬಳಿಕ ಸಿಂಗಲ್​ ಎಂಜಿನ್ ಹೊಂದಿದ ವಿಮಾನ ಬೆಂಕಿಗೆ ಆಹುತಿಯಾಗುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ. ಆಗಸ್ಟ್​ 9ರಂದು ಈ ದುರ್ಘಟನೆ ನಡೆದಿದೆ. ಕೆಲ ಹೊತ್ತು ಸಂಚಾರ ಅಸ್ತವ್ಯಸ್ತಗೊಂಡಿದ್ದು, ಸದ್ಯ ಯಾರಿಗೂ ಈ ಅವಘಡದಲ್ಲಿ ಅಪಾಯ ಸಂಭವಿಸಿಲ್ಲ. ನೆಟ್ಟಿಗರು ಈ ದೃಶ್ಯ ನೋಡಿ ಭಯಕ್ಕೀಡಾಗಿದ್ದಾರೆ.

ಈ ವಿಮಾನ ಅಪಘಾತಕ್ಕೆ ಎಂಜಿನ್ ವೈಫಲ್ಯವೇ ಕಾರಣ ಎಂದು ತಿಳಿದುಬಂದಿದೆ. Pipe PA-32 ವಿಮಾನವು 45 ನಿಮಿಷಗಳ ಕಾಲ ಲಾಸ್ ಎಂಜಲೀಸ್​ಗೆ ಪ್ರಯಾಣಿಸುವುದಿತ್ತು. ಕರೋನಾ ಮುನ್ಸಿಪಲ್ ಏರ್​ಪೋರ್ಟ್​ಗೆ ಹೋಗುವಾಗ ಮಧ್ಯಾಹ್ನ ಫ್ರೀವೇನಲ್ಲಿ ಈ ಅಪಘಾತ ಸಂಭವಿಸಿತು. ಎಂಜಿನ್ ಸಮಸ್ಯೆಯಿಂದ ತುರ್ತಾಗಿ ಲ್ಯಾಂಡ್​ ಆಗಬೇಕೆಂಬ ಪೈಲಟ್​ ಪ್ರಯತ್ನ ಕೊನೆಗೂ ವಿಫಲವಾಯಿತು. ಸದ್ಯ ಯಾರಿಗೂ ಗಾಯ ನೋವು ಆಗಿಲ್ಲ.

TV9 Kannada


Leave a Reply

Your email address will not be published. Required fields are marked *