ಬಿಂದು ಕಳೆದ 10 ವರ್ಷಗಳಿಂದ ಅಂಗನವಾಡಿ ಕೇಂದ್ರದಲ್ಲಿ ಪಾಠ ಮಾಡುತ್ತಿದ್ದಾರೆ. ಮನೆ ಕೆಲಸ ಮತ್ತು ಅಂಗನವಾಡಿ ಕೆಲಸವೂ ಇರುತ್ತಿದ್ದುದರಿಂದ ಬಿಂದು ಪರೀಕ್ಷೆಯ ದಿನಾಂಕಕ್ಕೆ 6 ತಿಂಗಳಿರುವಾಗ ಅಧ್ಯಯನ ಮಾಡಲು ಪ್ರಾರಂಭಿಸುತ್ತಿದ್ದರು.

Image Credit source: NDTV
ನವದೆಹಲಿ: ಕೇರಳದ ಮಲಪ್ಪುರಂನ (Malappuram) 42 ವರ್ಷದ ಮಹಿಳೆ ಮತ್ತು ಆಕೆಯ 24 ವರ್ಷದ ಮಗ ಸಾರ್ವಜನಿಕ ಸೇವಾ ಆಯೋಗದ (PSC) ಪರೀಕ್ಷೆಯಲ್ಲಿ ಒಟ್ಟಿಗೆ ಉತ್ತೀರ್ಣರಾಗುವ ಮೂಲಕ ಗಮನ ಸೆಳೆದಿದ್ದಾರೆ. “ನಾವು ಒಟ್ಟಿಗೆ ಕೋಚಿಂಗ್ ಕ್ಲಾಸ್ಗೆ ಹೋಗಿದ್ದೆವು. ನನ್ನ ತಾಯಿಯೇ ನನ್ನನ್ನು ಪಿಎಸ್ಸಿ (PSC Exam) ಪರೀಕ್ಷೆ ಬರೆಯಲು ಪ್ರೇರೇಪಿಸಿದರು. ನಾವಿಬ್ಬರೂ ಒಟ್ಟಿಗೇ ಪಾಸ್ ಆಗಿರುವುದು ಬಹಳ ಖುಷಿ ತಂದಿದೆ” ಎಂದು ವಿವೇಕ್ ಹೇಳಿದ್ದಾರೆ.
ನಾವಿಬ್ಬರೂ ಪಿಎಸ್ಸಿ ಪರೀಕ್ಷೆ ಬರೆಯಲು ನಿರ್ಧರಿಸಿದಾಗ ನನ್ನ ತಂದೆ ನಮಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಿದರು. ನಮಗೆ ನಮ್ಮ ಶಿಕ್ಷಕರಿಂದ ಸಾಕಷ್ಟು ಪ್ರೇರಣೆ ಸಿಕ್ಕಿತು. ನಾವಿಬ್ಬರೂ ಒಟ್ಟಿಗೆ ಓದಿದರೂ ನಾವು ಒಟ್ಟಿಗೆ ತೇರ್ಗಡೆಯಾಗುತ್ತೇವೆ ಎಂದು ಎಂದಿಗೂ ಯೋಚಿಸಿರಲಿಲ್ಲ. ಈಗ ನಮಗೆ ತುಂಬಾ ಸಂತೋಷವಾಗಿದೆ ಎಂದು ವಿವೇಕ್ ಹೇಳಿದ್ದಾರೆ.
Kerala | A 42-year-old mother and her 24 years old son from Malappuram have cleared Public Service Commission (PSC) examination together pic.twitter.com/BlBKYJiDHh
— ANI (@ANI) August 10, 2022
ಬಿಂದು ಅವರ ಮಗ 10ನೇ ತರಗತಿಯಲ್ಲಿದ್ದಾಗ ಆತನೊಂದಿಗೆ ತಾನೂ ಕುಳಿತು ಪುಸ್ತಕಗಳನ್ನು ಓದಲು ಆರಂಭಿಸಿದರು. ಪಬ್ಲಿಕ್ ಎಕ್ಸಾಂ ಆದ್ದರಿಂದ ಮಗನಿಗೆ ಒಬ್ಬನೇ ಓದಲು ಹೇಳಿದರೆ ಆತನಿಗೆ ಬೋರ್ ಆಗಬಹುದು ಎಂಬ ಕಾರಣಕ್ಕೆ ಆತನೊಂದಿಗೆ ಕುಳಿತು ತಾವೂ ಪುಸ್ತಕ ಓದಲಾರಂಭಿಸಿದರು. ಆದರೆ, ಇದು ಅವರನ್ನು ಕೇರಳ PSC ಪರೀಕ್ಷೆಗಳಿಗೆ ತಯಾರಾಗಲು ಪ್ರೇರೇಪಿಸಿತು. ಅದಾಗಿ 9 ವರ್ಷಗಳ ಬಳಿಕ ಇದೀಗ ಬಿಂದು ಮತ್ತು ಅವರ ಮಗ ವಿವೇಕ್ ಒಟ್ಟಿಗೆ ಸರ್ಕಾರಿ ಕೆಲಸವನ್ನು ಪಡೆಯಲು ಸಿದ್ಧರಾಗಿದ್ದಾರೆ.