
Image Credit source: Time Now News
ಒಂದೆರಡು ವರ್ಷಗಳ ಹಿಂದೆ, ತನ್ನ ಗಂಡ ರಾಜೇಂದ್ರ ಭೂಮಿತಾ ಎಂಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಬೇರೆಯವರಿಂದ ಆಕೆಗೆ ವಿಷಯ ಗೊತ್ತಾಗಿತ್ತು. ಆದರೆ, ಅದಕ್ಕೆ ಸಾಕ್ಷಿಗಳು ಇರಲಿಲ್ಲ.
ಇಂದೋರ್: ಮಧ್ಯಪ್ರದೇಶದ ಇಂದೋರ್ (Indore) ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರ ಜೇಬಿನಲ್ಲಿ ಪತ್ತೆಯಾದ ಕೊರೊನಾ ವ್ಯಾಕ್ಸಿನೇಷನ್ ಪ್ರಮಾಣಪತ್ರದಿಂದಾಗಿ (Covid Vaccination Certificate) ಆತನ ಅನೈತಿಕ ಸಂಬಂಧದ ವಿಷಯ ಬಯಲಾಗಿದೆ. ಹೆಂಡತಿಯ ಕೈಯಲ್ಲೇ ಸಿಕ್ಕಿಬಿದ್ದಿರುವ ಗಂಡ ಬೇರೊಬ್ಬಳೊಂದಿಗೆ ಅಕ್ರಮ ಸಂಬಂಧ (Extra Marital Affair) ಹೊಂದಿದ್ದ ಎಂಬುದು ಬಯಲಾಗಿದೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಮರಳು ವ್ಯಾಪಾರಿ ರಾಜೇಂದ್ರ ಭೀಸ್ 20 ವರ್ಷಗಳ ಹಿಂದೆ ಇಂದೋರ್ ನಿವಾಸಿಯಾದ ರೇಖಾ ಭೀಸ್ ಅವರನ್ನು ವಿವಾಹವಾಗಿದ್ದರು. ಮದುವೆಯಾದ ಒಂದೆರಡು ವರ್ಷಗಳ ನಂತರ ರಾಜೇಂದ್ರ ಮತ್ತು ಅವನ ತಂದೆ ಗಹಿನಾಥ್ ಭೀಸ್ ಸಣ್ಣಪುಟ್ಟ ವಿಷಯಗಳಿಗೆ ಅವಳನ್ನು ಹಿಂಸಿಸಲು ಪ್ರಾರಂಭಿಸಿದ್ದರು.
ತನ್ನ ಗಂಡನಿಗೆ ವಿವಾಹೇತರ ಸಂಬಂಧವಿದೆ ಎಂಬ ಅನುಮಾನದಿಂದ ಪತಿಯೊಂದಿಗೆ ಜಗಳವಾಡಿದ ನಂತರ ಅವಳು ಆಗಾಗ ಇಂದೋರ್ನಲ್ಲಿರುವ ತನ್ನ ಹೆತ್ತವರ ಮನೆಗೆ ಹಿಂತಿರುಗುತ್ತಿದ್ದಳು. ಒಂದೆರಡು ವರ್ಷಗಳ ಹಿಂದೆ, ತನ್ನ ಗಂಡ ರಾಜೇಂದ್ರ ಭೂಮಿತಾ ಎಂಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಬೇರೆಯವರಿಂದ ಆಕೆಗೆ ವಿಷಯ ಗೊತ್ತಾಗಿತ್ತು. ಆದರೆ, ಅದಕ್ಕೆ ಸಾಕ್ಷಿಗಳು ಇರಲಿಲ್ಲ. ರಾಜೇಂದ್ರನ ಜೇಬಿನಲ್ಲಿ ಭೂಮಿತಾಳ ವ್ಯಾಕ್ಸಿನೇಷನ್ ಸರ್ಟಿಫಿಕೆಟ್ ಸಿಕ್ಕಿದ ನಂತರ ಆಕೆಗೆ ತನ್ನ ಗಂಡನ ಅಕ್ರಮ ಸಂಬಂಧದ ವಿಷಯ ಸ್ಪಷ್ಟವಾಯಿತು. ಆ ಸರ್ಟಿಫಿಕೆಟ್ನಲ್ಲಿ ಭೂಮಿತಾಳ ಗಂಡನ ಹೆಸರನ್ನು ರಾಜೇಂದ್ರ ಭೀಸ್ ಎಂದು ಬರೆಯಲಾಗಿತ್ತು.