Viral News: ರಸ್ತೆ ಮಧ್ಯೆ ಅಡ್ಡ ನಿಂತ ಆನೆ; ಆ್ಯಂಬುಲೆನ್ಸ್​ನಲ್ಲೇ ಗರ್ಭಿಣಿಗೆ ಹೆರಿಗೆ! | Viral News: Pregnant Woman Gives Birth In Ambulance As Elephant Blocks Road In Tamil Nadu


Viral News: ರಸ್ತೆ ಮಧ್ಯೆ ಅಡ್ಡ ನಿಂತ ಆನೆ; ಆ್ಯಂಬುಲೆನ್ಸ್​ನಲ್ಲೇ ಗರ್ಭಿಣಿಗೆ ಹೆರಿಗೆ!

ಆನೆ

ಈರೋಡ್: ಹಳ್ಳಿಯೊಂದರ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಆ್ಯಂಬುಲೆನ್ಸ್​ನಲ್ಲಿ (Ambulance) ಆ ಮಹಿಳೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಆದರೆ, ರಸ್ತೆಯ ಮಧ್ಯೆ ಆನೆಯೊಂದು ಆ್ಯಂಬುಲೆನ್ಸ್​ಗೆ ಅಡ್ಡ ಬಂದಿದ್ದರಿಂದ ಆ್ಯಂಬುಲೆನ್ಸ್​ ಮುಂದೆ ಹೋಗಲು ಸಾಧ್ಯವಾಗಲಿಲ್ಲ. ಈ ವೇಳೆ ಆ ಮಹಿಳೆಗೆ ಆ್ಯಂಬುಲೆನ್ಸ್​ನಲ್ಲಿಯೇ ಹೆರಿಗೆಯಾಗಿದೆ. ಆನೆ ರಸ್ತೆಯಿಂದ ದೂರ ಹೋದ ಬಳಿಕ ಆ ಮಹಿಳೆ ಮತ್ತು ಮಗುವನ್ನು ಆಸ್ಪತ್ರೆಗೆ ಸೇರಿಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ ಕಾಡಾನೆಯೊಂದು ಘಾಟ್ ರಸ್ತೆಯನ್ನು ನಿರ್ಬಂಧಿಸಿದ ಕಾರಣ 24 ವರ್ಷದ ಬುಡಕಟ್ಟು ಮಹಿಳೆ ಆಂಬ್ಯುಲೆನ್ಸ್‌ನಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಆರೋಗ್ಯ ಅಧಿಕಾರಿಗಳ ಪ್ರಕಾರ, ಗುರುವಾರ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆಕೆಯ ಸಂಬಂಧಿಕರು ಅವಳನ್ನು ಆಸ್ಪತ್ರೆಗೆ ಕರೆದೊಯ್ಯಲು ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದರು. ಆದರೆ, ಆನೆಯು ಕಾಡಿನಿಂದ ಹೊರಬಂದು ಘಾಟ್ ರಸ್ತೆಯ ಮಧ್ಯದಲ್ಲಿ ನಿಂತಿದ್ದರಿಂದ ಆ್ಯಂಬುಲೆನ್ಸ್​ ಮುಂದೆ ಸಾಗಲು ಸಾಧ್ಯವಾಗಲಿಲ್ಲ. ಆಂಬ್ಯುಲೆನ್ಸ್‌ನ ಚಾಲಕ ವಾಹನವನ್ನು ನಿಲ್ಲಿಸಿ ಅರ್ಧ ಗಂಟೆಗೂ ಹೆಚ್ಚು ಕಾಲ ಕಾಯುತ್ತಿದ್ದರೂ ಆನೆ ಮುಂದೆ ಚಲಿಸಲಿಲ್ಲ.

ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ…

ಇದೇ ವೇಳೆ ಮಹಿಳೆಗೆ ಹೆರಿಗೆ ನೋವು ಜೋರಾಗಿದ್ದು, ಆಂಬ್ಯುಲೆನ್ಸ್‌ನಲ್ಲಿದ್ದ ತಂಡ ಅದೇ ವಾಹನದಲ್ಲಿ ಆ ಮಹಿಳೆಗೆ ಹೆರಿಗೆ ಮಾಡಲು ಸಹಾಯ ಮಾಡಿದೆ. ಆಕೆ ಆ್ಯಂಬುಲೆನ್ಸ್​ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಕೆಲವು ನಿಮಿಷಗಳ ನಂತರ ಆನೆ ರಸ್ತೆಯಿಂದ ಹೊರಟುಹೋಯಿತು. ಬಳಿಕ, ಆರೋಗ್ಯ ಅಧಿಕಾರಿಗಳು ಮಹಿಳೆ ಮತ್ತು ಮಗುವನ್ನು ಗ್ರಾಮೀಣ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ತಾಯಿ- ಮಗಳ ಆರೋಗ್ಯ ಚೆನ್ನಾಗಿದೆ.

TV9 Kannada


Leave a Reply

Your email address will not be published. Required fields are marked *