
Image Credit source: times now
ಆಧುನಿಕ ಮನುಷ್ಯರ ಪುರಾತನ ಸಂಬಂಧಿಗಳು ಆಗ್ನೇಯ ಏಷ್ಯಾದಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಇದೀಗ 1,60,000ರಿಂದ 1,30,000 ವರ್ಷಗಳಷ್ಟು ಹಳೆಯ ಹಲ್ಲು ಈ ಪ್ರದೇಶದಲ್ಲಿ ಸಿಕ್ಕಿರುವುದು ಅವರು ಇಲ್ಲೇ ವಾಸಿಸುತ್ತಿದ್ದರು ಎಂಬುದಕ್ಕೆ ಸಿಕ್ಕ ಮೊದಲ ಪುರಾವೆಯಾಗಿದೆ.
ಲಾವೋಸ್ನ (Laos) ಗುಹೆಯಲ್ಲಿ ಸುಮಾರು 1,30,000 ವರ್ಷಗಳಷ್ಟು ಹಳೆಯದಾದ ಮಗುವಿನ ಹಲ್ಲನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಈ ಹಲ್ಲುಗಳು ಹೆಣ್ಣು ಮಗುವಿನ ಹಲ್ಲಾಗಿರಬಹುದು ಎಂದು ವಿಜ್ಞಾನಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಇದು ಡೆನಿಸೋವಾನ್ಸ್ ಅಥವಾ ಡೆನಿಸೋವಾ ಹೋಮಿನಿನ್ಗಳೆಂದು (Denisova hominins) ಕರೆಯಲ್ಪಡುವ ಮನುಷ್ಯರ ಅಳಿವಿನಂಚಿನಲ್ಲಿರುವ ಜಾತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಲು ಸಹಾಯ ಮಾಡುತ್ತದೆ ಎನ್ನಲಾಗಿದೆ.
ಆಧುನಿಕ ಮನುಷ್ಯರ ಪುರಾತನ ಸೋದರಸಂಬಂಧಿಗಳು ಆಗ್ನೇಯ ಏಷ್ಯಾದಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಇದೀಗ 1,60,000ರಿಂದ 1,30,000 ವರ್ಷಗಳಷ್ಟು ಹಳೆಯದಾದ ಪ್ರಾಚೀನ ಹಲ್ಲು ಈ ಪ್ರದೇಶದಲ್ಲಿ ಸಿಕ್ಕಿರುವುದು ಅವರು ಇಲ್ಲೇ ವಾಸಿಸುತ್ತಿದ್ದರು ಎಂಬುದಕ್ಕೆ ಸಿಕ್ಕ ಮೊದಲ ಭೌತಿಕ ಪುರಾವೆಯಾಗಿದೆ.
The first unambiguous Middle Pleistocene Homo specimen from mainland Southeast Asia—and it’s a Denisovan?!?! https://t.co/SwrU6OVaD3 pic.twitter.com/FjZlU1krnf
— Paige Madison (@FossilHistory) May 17, 2022
ಇತಿಹಾಸಪೂರ್ವ ಮಾನವ ಸೋದರಸಂಬಂಧಿಗಳು ಸುಮಾರು 5,00,000 ವರ್ಷಗಳ ಹಿಂದೆ ಪಳೆಯುಳಿಕೆ ದಾಖಲೆಗಳಲ್ಲಿ ಕಾಣಿಸಿಕೊಂಡಿದ್ದರು. ಅವರು 30,000 ವರ್ಷಗಳ ಹಿಂದೆ ವಾಸಿಸಿದ್ದರು ಎಂದು ನಂಬಲಾಗಿದೆ. ಸೈಬೀರಿಯಾದ ಡೆನಿಸೋವನ್ ಗುಹೆಯಲ್ಲಿ ಸುಮಾರು 40,000 ವರ್ಷಗಳಷ್ಟು ಹಿಂದಿನ ಮತ್ತೊಂದು ಹಲ್ಲು ಮತ್ತು ಬೆರಳಿನ ಮೂಳೆ ಪತ್ತೆಯಾದಾಗ 2010ರವರೆಗೆ ಈ ಪ್ರಭೇದವು ವಿಜ್ಞಾನಕ್ಕೆ ತಿಳಿದಿರಲಿಲ್ಲ.