
Image Credit source: times now
ಏಪ್ರಿಲ್ನಲ್ಲಿ ಸಾರಾ ರಜೆಗೆ ಊರಿಗೆ ಹೋಗಿದ್ದಾಗ ತಮಾಷೆಗಾಗಿ ಆಕೆಯ ಗಂಡ ರಾಬಿ ಫೇಸ್ಬುಕ್ನಲ್ಲಿ ವೈಫ್ ಫಾರ್ ಸೇಲ್ ಎಂದು ಪೋಸ್ಟ್ ಮಾಡಿದ್ದ. ಮೋಜಿಗಾಗಿ ಆತ ಹಾಕಿದ ಈ ಪೋಸ್ಟ್ ಭಾರೀ ವೈರಲ್ ಆಗಿತ್ತು.
ಗಂಡ-ಹೆಂಡತಿ ನಡುವೆ ಜಗಳಗಳು, ಮುನಿಸು ಸಾಮಾನ್ಯ. ಆದರೆ, ಇಲ್ಲೊಬ್ಬ ಕಿಡಿಗೇಡಿ ಗಂಡ ತನ್ನ ಪತ್ನಿ ರಜೆಗೆ ಬೇರೆ ಊರಿಗೆ ಹೋಗಿದ್ದಾಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ‘ನನ್ನ ಹೆಂಡತಿ ಮಾರಾಟಕ್ಕಿದ್ದಾಳೆ’ ಎಂದು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದ. ರಾಬಿ ಮೆಕ್ಮಿಲ್ಲೆನ್ ಎಂಬ 38 ವರ್ಷದ ವ್ಯಕ್ತಿ ಮತ್ತು 39 ವರ್ಷದ ಅವರ ಪತ್ನಿ ಸಾರಾಗೆ ಮದುವೆಯಾಗಿ 20 ವರ್ಷವಾಗಿತ್ತು. ಅವರಿಗೆ ಇಬ್ಬರು ಮಕ್ಕಳಿದ್ದಾರೆ.
ಏಪ್ರಿಲ್ನಲ್ಲಿ ಸಾರಾ ರಜೆಗೆ ಊರಿಗೆ ಹೋಗಿದ್ದಾಗ ತಮಾಷೆಗಾಗಿ ಆಕೆಯ ಗಂಡ ರಾಬಿ ಫೇಸ್ಬುಕ್ನಲ್ಲಿ ವೈಫ್ ಫಾರ್ ಸೇಲ್ ಎಂದು ಪೋಸ್ಟ್ ಮಾಡಿದ್ದ. ಮೋಜಿಗಾಗಿ ಆತ ಹಾಕಿದ ಈ ಪೋಸ್ಟ್ ಭಾರೀ ವೈರಲ್ ಆಗಿತ್ತು. ಅದರಲ್ಲಿ ಸಾರಾಳ ಫೋಟೋವನ್ನು ಕೂಡ ಹಾಕಲಾಗಿತ್ತು.
“ನನ್ನ ಪತ್ನಿ ಮಾರಾಟಕ್ಕಿದ್ದಾಳೆ. ಆಕೆಯ ಕಂಡೀಷನ್ ಚೆನ್ನಾಗಿದೆ. ಉತ್ತಮ ಹೆಡ್ಲೈಟ್ಗಳು, ಫ್ಲಿಪ್ ಪೇಂಟ್ವರ್ಕ್, ವಾರದಲ್ಲಿ ಬಿಳಿ ಬಣ್ಣದಿಂದ ವಾರಾಂತ್ಯದಲ್ಲಿ ಕಿತ್ತಳೆ ಬಣ್ಣಕ್ಕೆ ಬದಲಾಗುತ್ತದೆ. ಸ್ವಲ್ಪ ಕೆಟ್ಟ ವಾಸನೆಯನ್ನು ಹೊಂದಿದ್ದಾಳೆ. ಪ್ರತಿದಿನ ಬೆಳಿಗ್ಗೆ ನೀವು ಕಿಟಕಿ ತೆರೆದಾಗ ಆ ವಾಸನೆ ದೂರ ಹೋಗುತ್ತದೆ.” ಎಂದು ತಮಾಷೆಯಾಗಿ ಅವರು ಪೋಸ್ಟ್ ಮಾಡಿದ್ದರು.