Viral News pet dog kills a man by rifle shooting in US | ಅಪರಾಧಿ ನಾಯಿ? ಸಾಕುನಾಯಿಯೊಂದು ಮನುಷ್ಯನಿಗೆ ಗುಂಡು ಹಾರಿಸಿ ಕೊಂದಿದೆ


Dog : ಅಮೆರಿಕದಲ್ಲಿ ಬೇಟೆ ವಿಹಾರಕ್ಕೆ ಹೊರಟಾಗ ಈ ಆಕಸ್ಮಿಕ ದುರ್ಘಟನೆ ನಡೆದಿದೆ. ಬೇಟೆ ಟ್ರಕ್​ ಅನ್ನು ಹಿಂದಿನಿಂದ ನಾಯಿ ಏರುವಾಗ ಅಕಸ್ಮಾತ್ ಆಗಿ ಬಂದೂಕಿನ ಮೇಲೆ ಕಾಲಿಟ್ಟಿದೆ. ಮುಂದೆ ಕುಳಿತಿದ್ದ ವ್ಯಕ್ತಿಗೆ ಗುಂಡು ತಗುಲಿದೆ.

ಅಪರಾಧಿ ನಾಯಿ? ಸಾಕುನಾಯಿಯೊಂದು ಮನುಷ್ಯನಿಗೆ ಗುಂಡು ಹಾರಿಸಿ ಕೊಂದಿದೆ

ಪ್ರಾತಿನಿಧಿಕ ಚಿತ್ರ

Viral News : ನಾಯಿಯು ಬಂದೂಕಿನಿಂದ ಮನುಷ್ಯನಿಗೆ ಗುಂಡುಹಾರಿಸಿತೆ? ಹೌದು. ಇದು ಅಮೆರಿಕದಲ್ಲಿ ನಡೆದಿದೆ. ವಿಚಿತ್ರವಾದರೂ ಇದು ಸತ್ಯ. ಇಲ್ಲಿಯ ಕಾಡಿನಲ್ಲಿ ಪ್ರವಾಸಿಗರನ್ನು ಬೇಟೆವಿಹಾರಕ್ಕೆಂದು ಕರೆದೊಯ್ಯುವ ಟ್ರಕ್​ನಲ್ಲಿ ಈ ಅಚಾತುರ್ಯ ನಡೆದಿದೆ. ನಾಯಿಯು ಹಿಂದಿನಿಂದ ವಿಹಾರದ ಟ್ರಕ್​ ಹತ್ತಿದಾಗ ಅಲ್ಲಿಟ್ಟಿದ್ದ ಬಂದೂಕಿನ ಮೇಲೆ ಕಾಲಿಟ್ಟಿದೆ. ಆಗ ಮುಂದಿನ ಸೀಟಿನಲ್ಲಿ ಕುಳಿತಿದ್ದ ಪ್ರಯಾಣಿಕರ ಮೇಲೆ ಅಕಸ್ಮಾತ್ ಆಗಿ ಗುಂಡು ಹಾರಿದೆ. 30 ವರ್ಷದ ಆ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಆದರೆ ಮೃತಪಟ್ಟ ವ್ಯಕ್ತಿ ನಾಯಿಯ ಪೋಷಕನೇ ಎನ್ನುವುದು ತಿಳಿದು ಬಂದಿಲ್ಲ.

TV9 Kannada


Leave a Reply

Your email address will not be published. Required fields are marked *