Viral Photo: ನಿಮ್ಮ ಕಣ್ಣಿಗೆ ಸವಾಲೊಡ್ಡುವ ಪ್ರಶ್ನೆಯಿದು; ಈ ಚಿತ್ರದಲ್ಲಿ ಬೆಕ್ಕು ಅಡಗಿದೆ! ಬೆಕ್ಕನ್ನು ಗುರುತಿಸಬಲ್ಲಿರಾ? | Viral Photo A cat is hiding in this picture can find it


Viral Photo: ನಿಮ್ಮ ಕಣ್ಣಿಗೆ ಸವಾಲೊಡ್ಡುವ ಪ್ರಶ್ನೆಯಿದು; ಈ ಚಿತ್ರದಲ್ಲಿ ಬೆಕ್ಕು ಅಡಗಿದೆ! ಬೆಕ್ಕನ್ನು ಗುರುತಿಸಬಲ್ಲಿರಾ?

ಚಿತ್ರದಲ್ಲಿ ಬೆಕ್ಕು ಅಡಗಿದೆ

ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ತಮಾಷೆ ವಿಡಿಯೊಗಳು ಹರಿದಾಡುವುದನ್ನು ನೋಡಿರುತ್ತೇವೆ. ಅದೇ ರೀತಿ ಅಚ್ಚರಿಯ ಕೆಲವು ವಿಷಯಗಳು, ಎಚ್ಚರಿಕೆಯ ಸಂದೇಶ ಸಾರುವ ದೃಶ್ಯಗಳು ಫುಲ್ ವೈರಲ್ ಆಗುತ್ತವೆ. ಅವುಗಳ ಜೊತೆಯಲ್ಲಿ ನಿಮ್ಮ ಕಣ್ಣಿಗೆ ಸವಾಲೊಡ್ಡುವ ಕೆಲವು ಚಿತ್ರಗಳೂ ಸಹ ಹರಿದಾಡುತ್ತವೆ. ಅಂತಹ ಚಿತ್ರಗಳಲ್ಲಿ ಇದೂ ಒಂದು. ಚಿತ್ರದಲ್ಲಿ ಬೆಕ್ಕೊಂದು ಅಡಗಿದೆ. ಅದನ್ನು ಗುರುತಿಸಬಲ್ಲಿರಾ? ಎಂಬ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಚಿತ್ರದಲ್ಲಿ ಗಮನಿಸುವಂತೆ ಗೋಡೆ ಮಧ್ಯೆ ಕಿಟಕಿ. ಕಿಟಕಿಯ ಬಾಗಿಲು ಮುಚ್ಚಿದೆ. ಗೋಡೆಗೆ ಕೆಂಪು ಬಣ್ಣ ಬಡಿಯಲಾಗಿದೆ. ಈ ಚಿತ್ರವನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದೆ. ಬೆಕ್ಕು ಚಿತ್ರದಲ್ಲಿದೆ ಎಂಬ ಶೀರ್ಷಿಕೆಯೊಂದಿಗೆ ಫೋಟೊ ಹಂಚಿಕೊಳ್ಳಲಾಗಿದೆ. ಆದರೆ ಬೆಕ್ಕು ಮಾತ್ರ ಕಾಣಿಸುತ್ತಿಲ್ಲ. ಈ ಚಿತ್ರ ಸುಮಾರು 4,600 ಕ್ಕೂ ಹೆಚ್ಚಿನ ಲೈಕ್ಸ್​ಗಳನ್ನು ಪಡೆದುಕೊಂಡಿದೆ. ಕೆಲವರು ಬೆಕ್ಕನ್ನು ಹುಡುಕಲು ಪ್ರಯ್ನಿಸಿದ್ದಾರೆ. ಕೆಲವರಿಗೆ ಬೆಕ್ಕನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಇನ್ನು, ಕೆಲವರು ಬೆಕ್ಕನ್ನು ಹುಡುಕಲು ಯಶಸ್ವಿಯಾಗಿದ್ದಾರೆ.

ನೆಟ್ಟಿಗರು ತಮ್ಮ ಅನಿಸಿಕೆಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ. ಒಬ್ಬ ಬಳಕೆದಾರರು, ನಾನು ಯಾವಾಗಲೂ ಈ ರೀತಿಯ ಚಾಲೆಂಜ್​ಗಳನ್ನು ಎದುರಿಸಲು ಉತ್ಸುಕನಾಗಿರುತ್ತೇನೆ ಎಂದು ಹೇಳಿದ್ದಾರೆ. ನಾನು ಬೆಕ್ಕನ್ನು ಗುರುತಿಸಿದ್ದೇನೆ, ಆ ಬೆಕ್ಕು ನನ್ನನ್ನೇ ನೋಡುತ್ತಿದೆ ಎಂದು ಮತ್ತೋರ್ವರು ಹೇಳಿದ್ದಾರೆ. ಇನ್ನು ಕೆಲವರಿಗೆ ಎಷ್ಟು ಹುಡುಕಿದರೂ ಬೆಕ್ಕು ಕಾಣಿಸುತ್ತಲೇ ಇಲ್ಲ.

ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಬೆಕ್ಕು ನಿಮಗೆ ಕಾಣಿಸುತ್ತಿಲ್ಲ ಎಂದಾದರೆ ಚಿತ್ರವನ್ನು ಜೂಮ್ ಮಾಡಿ ನೋಡಿ. ಕಿಟಕಿಯ ಕೆಳಗಡೆ ಬಲ ಭಾಗದಲ್ಲಿ, ಕಿಟಕಿಯ ಗಾಜಿನ ಹಿಂದೆ ಬೆಕ್ಕು ಇದೆ. ಅದು ನಿಮ್ಮನ್ನೇ ನೋಡುತ್ತಿದ್ದಂತೆ ಭಾಸವಾಗುತ್ತದೆ.

ಇದನ್ನೂ ಓದಿ:

Viral Photo: ನಿಮ್ಮ ಫೇವರೇಟ್​ ಆಟಗಾರ ಮಹೇಂದ್ರ ಸಿಂಗ್​ ಧೋನಿ ಈ ಚಿತ್ರದಲ್ಲಿ ಎಲ್ಲಿ ನಿಂತಿದ್ದಾರೆಂದು ಗುರುತಿಸಬಲ್ಲಿರಾ?

Viral Photo: ಈ ಫೋಟೋದಲ್ಲಿ ಎಷ್ಟು ಸಿಂಹಗಳಿವೆ ಎಂದು ಗುರುತಿಸಬಲ್ಲಿರಾ? ನಿಮ್ಮ ಕಣ್ಣಿಗೆ ಸವಾಲೊಡ್ಡುವ ಪ್ರಶ್ನೆಯಿದು

TV9 Kannada


Leave a Reply

Your email address will not be published. Required fields are marked *