Viral Photo: ಸೇನಾಧಿಕಾರಿಯೊಬ್ಬರು ಮಗುವಿಗೆ ಹಾಲುಣಿಸುವ ಹೃದಯಸ್ಪರ್ಶಿ ಫೋಟೋ ವೈರಲ್​ | Army Officer Seen Feeding Baby Photo gone Viral


Viral Photo: ಸೇನಾಧಿಕಾರಿಯೊಬ್ಬರು ಮಗುವಿಗೆ ಹಾಲುಣಿಸುವ ಹೃದಯಸ್ಪರ್ಶಿ ಫೋಟೋ ವೈರಲ್​

ಯೋಧ ಮಗುವಿಗೆ ಹಾಲುಣಿಸುತ್ತಿರುವುದು

ಸೇನಾಧಿಕಾರಿಯೊಬ್ಬರು ಮಗುವಿಗೆ ಹಾಲುಣಿಸುವ ಹೃದಯಸ್ಪರ್ಶಿ ಫೋಟೋ ಸಾಮಾಜಿಕ  ಜಾಲತಾಣದಲ್ಲಿ ವೈರಲ್ ಆಗಿದೆ.

ದೇಶದ ಯಾವುದೇ ಸ್ಥಳಗಳಲ್ಲಿ ಏನೆ ಅಪಾಯ ಎದುರಾದು ತಕ್ಷಣ ಧಾವಿಸಿ ನೆರವಿಗೆ ನಿಲ್ಲಿತ್ತಾರೆ. ಕೇವಲ ಪ್ರದೇಶ ಮಾತ್ರವಲ್ಲ ವ್ಯಕ್ತಿಗಳು ತೊಂದರೆಯಾದರು ತಕ್ಷಣ ಧಾವಸಿ ಅವರ ತೊಂದರೆಗಳನ್ನು ನಿವಾರಸಿದ್ದನ್ನು ನಾವು ನೋಡಬಹುದಾಗಿದೆ. ಅದೆ ರೀತಿಯಾಗಿ ಈಗ ಸದ್ಯ ವೈರಲ್​ ಆಗುತ್ತಿರುವ ಪೊಟೋದಲ್ಲೂ ಯೋಧರೊಬ್ಬರು ಕರ್ತವ್ಯದ ಜೊತೆಗೆ ಮಾನವಿಯತೆಯನ್ನು ಮೆರೆದಿದ್ದಾರೆ.

ಇದನ್ನು ಓದಿ: ವ್ಯಕ್ತಿಗೆ ವಿದ್ಯುತ್ ಟ್ರ್ಯಾಕ್‌ ಶಾಕ್, ಪ್ರಾಣ ಉಳಿಸಿದವನಿಗೆ ಸನ್ಮಾನ

ಸೇನಾಧಿಕಾರಿಯೊಬ್ಬರು ಮಗುವಿಗೆ ಹಾಲುಣಿಸುವ ಹೃದಯಸ್ಪರ್ಶಿ ಫೋಟೋ ಸಾಮಾಜಿಕ  ಜಾಲತಾಣದಲ್ಲಿ ವೈರಲ್ ಆಗಿದೆ. ಸೇನಾಧಿಕಾರಿಯು ಆಂಬ್ಯುಲೆನ್ಸ್‌ನ ಹಿಂಭಾಗದಲ್ಲಿ ಕುಳಿತು ತನ್ನ ತೋಳುಗಳಲ್ಲಿ ಮಗುವನ್ನು ಹಿಡಿದಿರುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಮುಂದಿನ ಚಿತ್ರವು ಮಗುವಿಗೆ ಆಹಾರವನ್ನು ನೀಡಲು ಪ್ರಯತ್ನಿಸುತ್ತಿರುವ ಅಧಿಕಾರಿಯನ್ನು ತೋರಿಸುತ್ತದೆ. ಅಷ್ಟರಲ್ಲಿ ಮತ್ತೊಬ್ಬ ಅಧಿಕಾರಿ ಕೈಯಲ್ಲಿ ಬಟ್ಟೆ ಹಿಡಿದು ನಿಂತಿರುವುದು ಕಾಣಿಸುತ್ತದೆ. ಹೃದಯಸ್ಪರ್ಶಿ ಚಿತ್ರವನ್ನು ನೆಟ್ಟಿಗರು ಅಧಿಕಾರಿಯ ದಯೆಗಾಗಿ ಶ್ಲಾಘಿಸಿದರು.

ಗೃಹ ಸಚಿವ (ರಾಜ್ಯ) ಹರ್ಷ ಸಾಂಘವಿ ಅವರು ಟ್ವಿಟರ್‌ನಲ್ಲಿ ಫೋಟೋವನ್ನು ಪೋಸ್ಟ್ ಮಾಡಿ ಅದು “ಭಾವನೆಗಳು ಮತ್ತು ಕರ್ತವ್ಯವು ಒಟ್ಟಿಗೆ ಹೋದಾಗ. ಹ್ಯಾಟ್ಸ್ ಆಫ್ ಇಂಡಿಯನ್ ಆರ್ಮಿ ಬರೆದುಕೊಂಡಿದ್ದಾರೆ.

ಇದನ್ನು ಓದಿ: ಬೇಟೆಯಾಡಲು ಬಂದ ಹುಲಿರಾಯನಿಗೆ ಚಳ್ಳೆಹಣ್ಣು ತಿನ್ನಿಸಿದ ಬಾತುಕೋಳಿ!

ಪೋಸ್ಟ್ ವೈರಲ್ ಆಗಿದ್ದು ಮತ್ತು ಜನರು ಕಾಮೆಂಟ್ ವಿಭಾಗದಲ್ಲಿ ಎಮೋಜಿಗಳು ಮತ್ತು ಮೆಚ್ಚುಗೆಯೊಂದಿಗೆ ತುಂಬಿದ್ದಾರೆ . ಒಬ್ಬ ಬಳಕೆದಾರ “ನಿಜವಾಗಿಯೂ ಹೃದಯ ಸ್ಪರ್ಶಿಸುವ ಕ್ಷಣ, ಸೆಲ್ಯೂಟ್ ಯು ಕ್ಯಾಪ್ಟನ್ ಸಾಬ್” ಎಂದು ಬರೆದರೆ, ಮತ್ತೊಬ್ಬರು, “ಸಾವಿರ ಪದಗಳ ಮೆಚ್ಚುಗೆಗೆ ಯೋಗ್ಯವಾದ ಚಿತ್ರ.

ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published.