Trending : ಯಾವ ಕ್ಷಣದಲ್ಲಿ ಏನಾಗುತ್ತದೆಯೋ ಯಾರು ಬಲ್ಲರು? ಕ್ಷಣಕ್ಷಣವೂ ಸಿಸಿಟಿವಿಯಲ್ಲಿ ಸೆರೆಯಾಗುವ ಈ ಕಾಲದಲ್ಲಿ…

ಸದ್ಯ ಬಚಾವ್!
Trending : ಈ ವಿಡಿಯೋದಲ್ಲಿ ಈ ಮನುಷ್ಯ ಪಾದಚಾರಿ ರಸ್ತೆಯಿಂದ ಅಂಗಡಿಗೆ ಕಾಲಿಡುವ ಅಂತರದಲ್ಲಿಯೇ ಆ ಕಲ್ಲುಹಾಸು ಚರಂಡಿಯೊಳಗೆ ಕುಸಿತ ಕಂಡಿದೆ. ಸಣ್ಣ ಅಂತರದಲ್ಲಿ ತಪ್ಪಿಸಿಕೊಂಡ ಈ ಮನುಷ್ಯ ದಿಗ್ಭ್ರಮೆಗೆ ಒಳಗಾಗಿ ಕೆಲ ಕ್ಷಣ ಅಲ್ಲಿ ನಿಂತಿದ್ದಾನೆ. ಅಂಗಡಿಯ ಒಳಗಿನಿಂದ ಮನುಷ್ಯನೊಬ್ಬ ಬರುವತನಕ ಅದೇ ಸ್ಥಿತಿಯಲ್ಲಿ ನಿಂತಿದ್ದಾನೆ. ಈ ವಿಡಿಯೋವನ್ನು ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. 30ಸೆಕೆಂಡುಗಳ ಈ ವಿಡಿಯೋ ಅಂಗಡಿಯ ಹೊರಗೆ ಅಳವಡಿಸಲಾದ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. 2365 ಜನರು ಈ ವಿಡಿಯೋ ರೀಟ್ವೀಟ್ ಮಾಡಿದ್ದಾರೆ. 22,700 ಲೈಕ್ ಮಾಡಿದ್ದಾರೆ. ಯಾವಾಗ ಏನೂ ಆಗಬಹುದು. ಆದರೆ ಏನೇ ಆದರೂ ಬದುಕುಳಿಯುವ ಆ ಕ್ಷಣ ಇದೆಯಲ್ಲ! ಅದು ನಮ್ಮ ಕೈಯಲ್ಲಿಲ್ಲ.
I’m going to spend the weekend trying to figure out what message the Universe was sending this man. What would you be thinking if you were him? pic.twitter.com/U55PDCZPry
— anand mahindra (@anandmahindra) August 5, 2022
ಒಂದೇ ಕ್ಷಣ ತಡವಾಗಿದ್ದರೆ!, ಸದ್ಯ ಬಚಾವಾದ, ಅದೃಷ್ಟವಂತ ಹೀಗೆ ಅನೇಕರು ಪ್ರತಿಕ್ರಿಯಿಸಿದ್ದಾರೆ.