Viral Video: ಅಭಿ ಲಡ್ಕೋ ಕಾ ಭೀ ಫಾರ್ಮ್ ಆಗಾಯ.. ‘ಮಾರೋ ಮುಜೆ‘ ಖ್ಯಾತಿಯ ಯುವಕನಿಗೆ ಪಠಾಣ್ ಪ್ರತ್ಯುತ್ತರ | Viral Video IND vs PAK Asia cup 2022 Maro Mujhe Maro Mujhe fame young man met former Indian cricketer Irfan Pathan here is the funny video


ಪಠಾಣ್ ಭಾಯ್, ಭಾರತ ಭಾನುವಾರ ಸೋಲುತ್ತಾ? ಎಂದು ಮಾರೋ ಮುಜೆ ಖ್ಯಾತಿಯ ಯುವಕ ಪ್ರಶ್ನಿಸಿದ್ದಾನೆ. “ವೋ ಏಕ್ ಬಾರ್ ಹೋಗಯಾ ಯಾರ್, ಬಾರ್ ಬಾರ್ ನೆಹಿ ಹೋಗಾ” ಎಂದು ಇರ್ಫಾನ್ ಪಠಾಣ್ ಪ್ರತ್ಯುತ್ತರಿಸಿದ್ದಾರೆ.

Viral Video: ಅಭಿ ಲಡ್ಕೋ ಕಾ ಭೀ ಫಾರ್ಮ್ ಆಗಾಯ.. ‘ಮಾರೋ ಮುಜೆ‘ ಖ್ಯಾತಿಯ ಯುವಕನಿಗೆ ಪಠಾಣ್ ಪ್ರತ್ಯುತ್ತರ

ಅಭಿ ಲಡ್ಕೋ ಕಾ ಭೀ ಫಾರ್ಮ್ ಆಗಾಯ.. ‘ಮಾರೋ ಮುಜೆ‘ ಯುವಕನಿಗೆ ಪಠಾಣ್ ಪ್ರತ್ಯುತ್ತರ

ಏಷ್ಯಾಕಪ್‌-2022ರಲ್ಲಿ ಭಾರತ ಎರಡನೇ ಬಾರಿಗೆ ಸಾಂಪ್ರದಾಯಿಕ ಶತ್ರು ರಾಷ್ಟ್ರ ಪಾಕಿಸ್ತಾನವನ್ನು ಎದುರಿಸುತ್ತಿದ್ದು, ಈ ಬಾರಿ ಸೂಪರ್ 4 ಹಂತದಲ್ಲಿದೆ. ಈ ಪಂದ್ಯದ ಊಹಾಪೋಹದ ಮಾತುಗಳು ಹರಿದಾಡುತ್ತಿರುವ ನಡುವೆ ಸಾಮಾಜಿಕ ಜಾಲತಾಣದಲ್ಲಿ ‘ಮಾರೋ ಮುಜೆ ಮಾರೋ’ ಖ್ಯಾತಿಯ ಪಾಕಿಸ್ತಾನದ ಮೊಮಿನ್ ಸಾಕಿಬ್ ಎಂಬ ಯುವಕನ ವಿಡಿಯೋ ಕಾಣಿಸಿಕೊಂಡಿದೆ. ಕ್ರಿಕೆಟ್ ಮೈದಾನದಲ್ಲಿ ಆ ಯುವಕ ಕ್ರಿಕೆಟ್ ಟೀಂ ಇಂಡಿಯಾದ ಮಾಜಿ ಆಟಗಾರ ಇರ್ಫಾನ್ ಪಠಾಣ್ ಅವರನ್ನು ಭೇಟಿಯಾಗಿ ಮಾತನಾಡಿಸಿದ್ದಾನೆ. ಇದರ ವಿಡಿಯೋವನ್ನು ಆತ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾನೆ.

“ಭಾರತ ಕಂಡ ಅತ್ಯುತ್ತಮ ಸ್ವಿಂಗ್ ಬೌಲರ್ ಇರ್ಫಾನ್ ಪಠಾಣ್ ಅವರನ್ನು ಭೇಟಿಯಾಗಲು ಸಂತೋಷವಾಗಿದೆ. ಆದರೂ ಇರ್ಫಾನ್ ಭಾಯ್, ನೀವು ಒಪ್ಪಿ ಇಲ್ಲವೇ ಬಿಡಿ, ಏಷ್ಯಾ ಕಪ್ ನಮ್ಮದೇ” ಎಂದು ವಿಡಿಯೋ ಹಂಚಿಕೊಳ್ಳುವಾಗ ಶೀರ್ಷಿಕೆಯನ್ನು ಬರೆದುಕೊಂಡಿದ್ದಾನೆ.

ವೀಡಿಯೊದಲ್ಲಿ ಇರುವಂತೆ, ನೀವು 2006ರಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಸಾಧನೆ ಮಾಡಿದ್ದೀರಿ. ಭಾಯ್ ನೀವು ಹೇಗಿದ್ದೀರಿ? ಎಂದು ಪ್ರಶ್ನಿಸಿದಾಗ ಚೆನ್ನಾಗಿರುವುದಾಗಿ ಪಠಾಣ್ ಹೇಳಿದ್ದಾರೆ. ಮುಂದುವರೆದು ಮಾತನಾಡಿದ ಮೊಮಿನ್, ಭಾನುವಾರದ ಇಂಡಿಯಾ-ಪಾಕಿಸ್ತಾನದ ಪಂದ್ಯವನ್ನು ಉಲ್ಲೇಖಿಸಿದ್ದಾನೆ.

ಭಾನುವಾರ ಪಾಕಿಸ್ತಾನ-ಭಾರತ ಪಂದ್ಯ ನಡೆಯಲಿದೆ, ನಿಮಗೆ ಏನು ಅನಿಸುತ್ತಿದೆ? ಎಂದು ಮೊಮಿನ್ ಕೇಳಿದಾಗ ಉತ್ತರಿಸಿದ ಪಠಾಣ್, ಗೆಲುವು ಪುನರಾವರ್ತನೆಯಾಗಲಿದೆ ಎಂದಿದ್ದಾರೆ. ಇದಕ್ಕೆ 2021ರಲ್ಲಿ ದುಬೈನಲ್ಲಿ ನಡೆದ ಟಿ-20 ವಿಶ್ವಕಪ್ ಆರಂಭಿಕ ಪಂದ್ಯದಲ್ಲಿ ಭಾರತ ಪಾಕ್ ವಿರುದ್ಧ ಸೋಲು ಅನುಭವಿಸಿದ್ದನ್ನು ಉಲ್ಲೇಖಿಸಿದ್ದಾನೆ, ಇದಕ್ಕೆ ಉತ್ತರಿಸುವ ಆರಂಭದಲ್ಲಿ ಇಬ್ಬರೂ ನಕ್ಕರು. ನಂತರ ಉತ್ತರಿಸಿದ ಪಠಾಣ್, ಅದು ಒಂದು ಬಾರಿ ಅಷ್ಟೆ, ಪದೇಪದೇ ಆಗುವುದಿಲ್ಲ, ಈಗ ಹುಡುಗರು ಫಾರ್ಮ್​ಗೆ ಬಂದಿದ್ದಾರೆ ಎಂದು ಹೇಳಿದ್ದಾರೆ.

ದುಬೈನಲ್ಲಿ ನಡೆದ ಏಷ್ಯಾಕಪ್‌ನ ಆರಂಭಿಕ ಪಂದ್ಯದಲ್ಲಿ ಭಾರತ ಐದು ವಿಕೆಟ್‌ಗಳಿಂದ ಪಾಕಿಸ್ತಾನವನ್ನು ಸೋಲಿಸಿತು. ಇಂದು ಮತ್ತೆ ಭಾರತ ಪಾಕಿಸ್ತಾನ ಕಣಕ್ಕಿಳಿಯಲಿದ್ದು, ಸಂಜೆ 7.30ಕ್ಕೆ ಆರಂಭಗೊಳ್ಳಲಿರುವ ಹೈ ಓಲ್ಟೇಜ್ ಪಂದ್ಯ ವೀಕ್ಷಣೆ ಮಾಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

ಮತ್ತಷ್ಟು ಟ್ರೆಂಡಿಂಗ್ ವಿಡಿಯೋಗಳನ್ನು ವೀಕ್ಷಣೆ ಮಾಡಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published.