Viral Video: ಅಮ್ಮನೊಂದಿಗೆ ವರ್ಕ್​ಔಟ್ ಮಾಡಿದ 5 ತಿಂಗಳ ಮಗು; ತಮಾಷೆಯ ವಿಡಿಯೋ ವೈರಲ್ | Viral Video: 5 Month Old Baby Works Out With Mother Holds a Plank Like a Pro


Viral Video: ಅಮ್ಮನೊಂದಿಗೆ ವರ್ಕ್​ಔಟ್ ಮಾಡಿದ 5 ತಿಂಗಳ ಮಗು; ತಮಾಷೆಯ ವಿಡಿಯೋ ವೈರಲ್

ಅಮ್ಮನೊಂದಿಗೆ ವರ್ಕ್​ಔಟ್ ಮಾಡುತ್ತಿರುವ ಮಗು

Image Credit source: India.com

ಈ ವಿಡಿಯೋದಲ್ಲಿ, 5 ತಿಂಗಳ ಪುಟ್ಟ ಮಗು ತನ್ನ ತಾಯಿಯೊಂದಿಗೆ ವ್ಯಾಯಾಮ ಮಾಡುತ್ತಿರುವುದನ್ನು ಕಾಣಬಹುದು. ಈ ವಿಡಿಯೋ ಕ್ಲಿಪ್ ಖಂಡಿತವಾಗಿಯೂ ನಿಮ್ಮನ್ನು ನಗಿಸುತ್ತದೆ.

ದೊಡ್ಡವರನ್ನು ನೋಡಿ ಮಕ್ಕಳು ಸಾಕಷ್ಟನ್ನು ಕಲಿಯುತ್ತವೆ. ಅಪ್ಪ-ಅಮ್ಮ ಏನೇನು ಮಾಡುತ್ತಾರೋ ಅದನ್ನೆಲ್ಲ ಅನುಕರಣೆ ಮಾಡುತ್ತವೆ. ಇಲ್ಲೊಂದು ಮಗು ತನ್ನ ತಾಯಿಯ ಜೊತೆ ತಾನೂ ವರ್ಕ್​ಔಟ್ (Workout) ಮಾಡುವ ವಿಡಿಯೋ ಭಾರೀ ವೈರಲ್ ಆಗಿದೆ. ಮಕ್ಕಳು ಹೊಸ ವಿಷಯಗಳನ್ನು ಕಲಿಯಲು ಯಾವಾಗಲೂ ಕುತೂಹಲ ತೋರಿಸುತ್ತಾರೆ. ಮಕ್ಕಳು ತಮ್ಮ ಹೆತ್ತವರನ್ನು ನೋಡುತ್ತಾರೆ ಮತ್ತು ಅವರನ್ನೇ ಅನುಸರಿಸುತ್ತಾರೆ. ಅದರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿದೆ.

ಈ ವಿಡಿಯೋದಲ್ಲಿ, 5 ತಿಂಗಳ ಪುಟ್ಟ ಮಗು ತನ್ನ ತಾಯಿಯೊಂದಿಗೆ ವ್ಯಾಯಾಮ ಮಾಡುತ್ತಿರುವುದನ್ನು ಕಾಣಬಹುದು. ಈ ವಿಡಿಯೋ ಕ್ಲಿಪ್ ಖಂಡಿತವಾಗಿಯೂ ನಿಮ್ಮನ್ನು ನಗಿಸುತ್ತದೆ. ತಾಯಿ ಹಾಗೂ 5 ತಿಂಗಳ ಮಗು ಜೋಡಿಯಾಗಿ ವರ್ಕ್​ಔಟ್ ಮಾಡುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ವ್ಯಾಯಾಮ ಮಾಡುತ್ತಿರುವ ತಾಯಿ ಆಸ್ಟಿನ್ ಎಂಬ ತನ್ನ 5 ತಿಂಗಳ ಪುಟ್ಟ ಮಗುವಿಗೆ ಅದೇ ರೀತಿ ಮಾಡಲು ಸೂಚಿಸುತ್ತಾಳೆ. ನಂತರ ಮಗು ತನ್ನ ಎಲ್ಲಾ ಶಕ್ತಿಯನ್ನು ಸೇರಿಸಿಕೊಂಡು ಕಷ್ಟಪಟ್ಟು ಅಮ್ಮ ಮಾಡಿದ ಹಾಗೆ ಮಾಡುತ್ತದೆ.

ಈ ಬಗ್ಗೆ ಇನ್‌ಸ್ಟಾಗ್ರಾಮ್ ಪುಟದಲ್ಲಿ ವಿಡಿಯೋವನ್ನು ಪೋಸ್ಟ್​ ಮಾಡಲಾಗಿದೆ. ನನ್ನ 5 ತಿಂಗಳ ಮಗು ಕೆಲವು ಹೊಸ ವಿಷಯಗಳನ್ನು ಕಲಿಯುತ್ತಿದೆ. ಆಕೆ ಕೂಡ ತಾಯಿಯಂತೆ ಬಲಶಾಲಿಯಾಗಿದ್ದಾಳೆ. ನಮ್ಮ ಮಗುವನ್ನು ನೋಡಿ ನಾನು ನಿಜವಾಗಿಯೂ ತುಂಬಾ ಹೆಮ್ಮೆಪಡುತ್ತೇನೆ ಎಂದು ಇನ್​ಸ್ಟಾಗ್ರಾಂನಲ್ಲಿ ಬರೆಯಲಾಗಿದೆ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published. Required fields are marked *