Garden and Kitchen : ಏನೇನೋ ಶೋಧಿಸುತ್ತಿದ್ದೇವೆ, ಆದರೆ ನಾವಿನ್ನೂ ಆತ್ಮರಕ್ಷಣೆಯ ಸಾಧ್ಯತೆಗಳನ್ನು ಹುಡುಕುವುದಕ್ಕೆ ಶುರುಮಾಡಿಲ್ಲ ಎಂದಿದ್ದಾರೆ ಒಬ್ಬರು. ನಾನಂತೂ ಈ ಸಾಧನವನ್ನು ಖರೀದಿಸುತ್ತೇನೆ ಎಂದು ಅನೇಕರು ಹೇಳಿದ್ದಾರೆ.

ಬೆರಳಿಗೆ ಈ ಸಾಧನ ಧರಿಸಿದರೆ ಹೀಗೆ ಕತ್ತರಿಸಬಹುದು ಸುಲಿಯಬಹುದು
Veg Cutter : ಮನೆಯಲ್ಲಿ ನಾಲ್ಕು ಬೆಳ್ಳುಳ್ಳಿ ಸುಲಿದು ಕೊಡು ಎಂದಾಗ ಯಾವುದೋ ಫೋನ್ ಬಂತು ಇರು ಎಂದು ಹೋಗಬೇಕಿಲ್ಲ. ಇದಿಷ್ಟು ಬೀನ್ಸ್ ಸುಲಿದು ಕೊಡು ಎಂದಾಗ ಅಯ್ಯೋ ತಲೆನೋವು ಎಂದು ನೆಪ ಹೇಳಬೇಕಿಲ್ಲ. ಶುಂಠಿ ಸಿಪ್ಪೆ ತೆಗೆದುಕೊಡು ಎಂದಾಗ ನನ್ನ ಫ್ರೆಂಡ್ ಕರೀತಿದಾರೆ ಎಂದು ಹೊರಹೋಗಬೇಕಿಲ್ಲ. ಈಗ ಯಾರೂ ಕೂಡ ಸುಲಭವಾಗಿ ಚಕಚಕನೆ ತರಕಾರಿಗಳನ್ನು ಕತ್ತರಿಸಬಹುದು, ಸೋಸಬಹುದು, ಸುಲಿಯಬಹುದು ಆದರೆ ನಿಮ್ಮ ಹೆಬ್ಬೆರಳಿಗೆ ಇಂಥದೊಂದು ಸಾಧನವಿದ್ದಲ್ಲಿ!
ಇನ್ಸ್ಟಾಗ್ರಾಮಿಗರು ಈ ವಿಡಿಯೋ ನೋಡಿ ಹುಚ್ಚೆದ್ದು ಪ್ರತಿಕ್ರಿಯಿಸುತ್ತಿದ್ದಾರೆ. ಆಹ್ ಇದು ನನ್ನ ಐದು ಬೆರಳಿಗೂ ಬೇಕು ಎಂದು ಹಲವಾರು ಜನ ತಮಾಷೆ ಮಾಡುತ್ತಿದ್ಧಾರೆ. Peter Piper picked a peck of pickled peppers from the pepper patch ಎಂದು ಒಬ್ಬರು ಟಂಗ್ ಟ್ವಿಸ್ಟರ್ ನೆನಪಿಸಿಕೊಂಡಿದ್ದಾರೆ. ಏನೇನೋ ಶೋಧಿಸುತ್ತಿದ್ದೇವೆ, ಆದರೆ ನಾವಿನ್ನೂ ಆತ್ಮರಕ್ಷಣೆಯ ಸಾಧ್ಯತೆಗಳನ್ನು ಹುಡುಕುವುದಕ್ಕೆ ಶುರುಮಾಡಿಲ್ಲ ಎಂದಿದ್ದಾರೆ ಇನ್ನೂ ಒಬ್ಬರು. ನಾನಂತೂ ಈ ಸಾಧನವನ್ನು ಖರೀದಿಸುತ್ತೇನೆ ಎಂದು ಅನೇಕರು ಹೇಳಿದ್ದಾರೆ.