Viral Video: ಈ ಅಜ್ಜಿಗೆ ಸಹಾಯ ಮಾಡಿದ ಡ್ರೈವರ್​ಗೆ ನೆಟ್ಟಿಗರು ಧನ್ಯವಾದ ಹೇಳಿದ್ಧಾರೆ | Truck driver helps elderly woman cross waterlogged street in viral video Thank you says Internet


Help : ನೀರಿನಿಂದ ಆವೃತವಾಗಿರುವ ರಸ್ತೆಯನ್ನು ದಾಟಲು ಈ ವೃದ್ಧೆಗೆ ಟ್ರಕ್ ಡ್ರೈವರ್ ಮಾಡಿದ ಉಪಾಯ ಮತ್ತು ಸಹಾಯವನ್ನು ಇಲ್ಲಿ ನೋಡಬಹುದು.

Viral Video: ಈ ಅಜ್ಜಿಗೆ ಸಹಾಯ ಮಾಡಿದ ಡ್ರೈವರ್​ಗೆ ನೆಟ್ಟಿಗರು ಧನ್ಯವಾದ ಹೇಳಿದ್ಧಾರೆ

ವೃದ್ಧೆಗೆ ಸಹಾಯ ಮಾಡುತ್ತಿರುವ ಟ್ರಕ್ ಡ್ರೈವರ್

Viral Video : ನೀರಿನಿಂದ ಆವೃತವಾಗಿರುವ ರಸ್ತೆಯನ್ನು ದಾಟಲು ಈ ಟ್ರಕ್ ಡ್ರೈವರ್ ವೃದ್ಧೆಯೊಬ್ಬರಿಗೆ ಸಹಾಯ ಮಾಡಿದ್ದಾನೆ. ನೆಟ್ಟಿಗರು ಅವನಿಗೆ ಕೃತಜ್ಞತೆ ಹೇಳಿದ್ದಾರೆ. ಅನುಕಂಪವುಳ್ಳವರು ಹೀಗೆ ಸಹಾಯ ಮಾಡಲು ಅವಕಾಶ ಹುಡುಕಿಕೊಳ್ಳುತ್ತಾರೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ. ತನ್ಸು ಯೆಗೆನ್ ಎನ್ನುವವರು ಆಗಾಗ ಇಂಥ ಹೃದಯಸ್ಪರ್ಶಿ ವಿಡಿಯೋಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಅಂಥ ವಿಡಿಯೋಗಳ ಪೈಕಿ ಸದ್ಯ ಈ ವಿಡಿಯೋ ನೆಟ್ಟಿಗರನ್ನು ಹಿಡಿದಿಟ್ಟಿದೆ. ಇನ್ನೇನು ಎಂಟು ಲಕ್ಷಕ್ಕೂ ಹೆಚ್ಚು ವೀಕ್ಷಕರನ್ನು ತಲುಪಿದೆ.

ನೀವು ಮಾಡುವ ಎಲ್ಲವನ್ನೂ ದೇವರು ನೋಡುತ್ತಿರುತ್ತಾನೆ ಎಂದು ಹೇಳುವ ಕಾಲವೊಂದಿತ್ತು. ಈಗ ಎಲ್ಲವನ್ನೂ ಸಿಸಿ ಮತ್ತು ಮೊಬೈಲ್​ ಕ್ಯಾಮೆರಾಗಳು ನೋಡುತ್ತಿರುತ್ತವೆ ಎನ್ನಬಹುದು. ಒಟ್ಟಿನಲ್ಲಿ ಈ ಡ್ರೈವರ್​ನಂಥ ಸಹಾಯ ಗುಣ ಉಳಿದವರಿಗೂ ಬರಲಿ.

TV9 Kannada


Leave a Reply

Your email address will not be published.