Viral Video: ಒಂದು ಬಾರಿ ಕುಡಿದರೆ 2 ದಿನ ಬಾಯಾರಿಕೆ ಆಗಲ್ಲ; ಕಚ್ಚಾ ಬಾದಾಮ್ ಬಳಿಕ ಲಿಂಬೆ ಜ್ಯೂಸ್ ಮಾರುವವನ ವಿಡಿಯೋ ವೈರಲ್ | Ek Baar Piyoge To.. This Man Unique Style of Selling Nimbu Juice Will Make You Laugh after Kacha Badam


Viral Video: ಒಂದು ಬಾರಿ ಕುಡಿದರೆ 2 ದಿನ ಬಾಯಾರಿಕೆ ಆಗಲ್ಲ; ಕಚ್ಚಾ ಬಾದಾಮ್ ಬಳಿಕ ಲಿಂಬೆ ಜ್ಯೂಸ್ ಮಾರುವವನ ವಿಡಿಯೋ ವೈರಲ್

ಲಿಂಬೆ ಜ್ಯೂಸ್ ಮಾರುತ್ತಿರುವ ಯುವಕ

ಮಾರಾಟಗಾರರು ಮತ್ತು ಸಣ್ಣ ವ್ಯಾಪಾರಿಗಳು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಗ್ರಾಹಕರನ್ನು ಆಕರ್ಷಿಸುವ ಮೂಲಕ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿರುವುದನ್ನು ನೀವು ಆಗಾಗ್ಗೆ ಗಮನಿಸಿರಬಹುದು. ಇತ್ತೀಚೆಗಷ್ಟೇ ರಸ್ತೆಯಲ್ಲಿ ಕಡಲೆ ಕಾಯಿ ಮಾರುವವನ ‘ಕಚ್ಚಾ ಬಾದಾಮ್‘ ಹಾಡು ಭಾರೀ ಪ್ರಸಿದ್ಧಿ ಪಡೆದಿತ್ತು. ಕೆಲವರು ತಮ್ಮ ಉತ್ಪನ್ನಗಳ ಹೆಸರನ್ನು ತಮಾಷೆಯ ಧ್ವನಿಯಲ್ಲಿ ಹೇಳುವ ಮೂಲಕ ಜನರ ಗಮನವನ್ನು ಸೆಳೆಯಲು ಪ್ರಯತ್ನಿಸುತ್ತಾರೆ, ಆದರೆ ಕೆಲವರು ಆಕರ್ಷಕವಾದ ಜಿಂಗಲ್ಸ್ ಅನ್ನು ರಚಿಸುತ್ತಾರೆ. ಭುವನ್ ಬಡ್ಯಾಕರ್ ಅವರ ‘ಕಚಾ ಬಾದಾಮ್’ (Kacha Badam) ಜಿಂಗಲ್ ಪ್ರಪಂಚದಾದ್ಯಂತ ಭಾರೀ ವೈರಲ್ ಆದ ನಂತರ, ಇದೇ ರೀತಿಯ ಮಾರಾಟಗಾರರ ವೀಡಿಯೊಗಳು ಅಂತರ್ಜಾಲದಲ್ಲಿ ಕಾಣಿಸಿಕೊಳ್ಳುತ್ತಿವೆ ಈಗ, ಲಿಂಬೆ ಸೋಡಾ ಮಾರಾಟಗಾರ ಮತ್ತು ನಿಂಬೆ ಜ್ಯೂಸ್ ಮಾರಾಟ ಮಾಡುವ ವ್ಯಕ್ತಿಯ ತಮಾಷೆಯ ವೀಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಈ ವೀಡಿಯೊದ ನಿಖರವಾದ ಸ್ಥಳ ಇನ್ನೂ ತಿಳಿದಿಲ್ಲ.

ಈ ವೈರಲ್ ವಿಡಿಯೋದಲ್ಲಿ ಆ ಮಾರಾಟಗಾರ ತನ್ನದೇ ಆದ ಸ್ಟೈಲ್​ನಲ್ಲಿ ನಿಂಬೆ ಪಾನಕವನ್ನು ತಯಾರಿಸುತ್ತಾರೆ. ಅಲ್ಲದೆ, ತಮ್ಮ ಗ್ರಾಹಕರನ್ನು ರಂಜಿಸಲು ತಮಾಷೆಯ ಜಿಂಗಲ್ ಅನ್ನು ಹಾಡುತ್ತಾರೆ. ಬಾಕಿ ನಿಂಬು ಬಾದ್ ವಿಚ್ ಪೌಂಗಾ (ನಾನು ಉಳಿದ ನಿಂಬೆಹಣ್ಣುಗಳನ್ನು ನಂತರ ಬಳಸುತ್ತೇನೆ) ಎಂದು ಹಾಡುವ ಆ ವ್ಯಕ್ತಿ ನಂತರ ನಾಟಕೀಯ ರೀತಿಯಲ್ಲಿ ಸೋಡಾ ಬಾಟಲಿಗಳನ್ನು ತೆರೆಯುತ್ತಾನೆ. ಆಗ “ಏಕ್ ಬಾರ್ ಪಿಯೋಗೆ, ತೋ ಬಾರ್ ಬಾರ್ ಮಾಂಗೋಗೆ ನಿಂಬು ಪಾನಿ, ದೋ ದಿನ್ ಪ್ಯಾಸ್ ನಹಿ ಲಗೂಗಿ. (ಒಂದು ಬಾರಿ ಕುಡಿದರೆ ಮತ್ತೆ ಮತ್ತೆ ಲಿಂಬೆ ಜ್ಯೂಸ್ ಬೇಕು ಎನ್ನುತ್ತೀರಿ, 2 ದಿನ ಬಾಯಾರಿಕೆ ಆಗೋದಿಲ್ಲ)” ಎನ್ನುತ್ತಾ ಉರಿ ಬಿಸಿಲಿನಲ್ಲಿ ಲಿಂಬೆ ಜ್ಯೂಸ್ ಕುಡಿಯುವುದರ ಉಪಯೋಗವನ್ನು ಹೇಳುತ್ತಾ ಲಿಂಬೆ ಶರಬತ್ ತಯಾರಿಸುತ್ತಾರೆ.

ಈ ವಿಡಿಯೋ ವೈರಲ್ ಆಗಿದ್ದು, 9,00,000ಕ್ಕೂ ಹೆಚ್ಚು ಲೈಕ್ಸ್ ಮತ್ತು ಹಲವಾರು ಕಾಮೆಂಟ್‌ಗಳು ಬಂದಿವೆ. ಲಿಂಬೆ ಜ್ಯೂಸ್ ಮಾರುವ ಉಲ್ಲಾಸದ ವಿಧಾನವನ್ನು ಕಂಡು ಜನರು ಖುಷಿಪಟ್ಟಿದ್ದಾರೆ. ಅನೇಕರು ಆತನ ಆತ್ಮವಿಶ್ವಾಸವನ್ನು ಶ್ಲಾಘಿಸಿದ್ದಾರೆ. “ಇವನು ‘ಕಚ್ಚಾ ಬಾದಾಮ್’ ಗಾಯಕನ ಮಗ” ಎಂದು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

TV9 Kannada


Leave a Reply

Your email address will not be published. Required fields are marked *