Viral Video: ಕಡಲ ತೀರದಲ್ಲಿ ಅಲೆಗಳ ಜೊತೆ ಆಟವಾಡುತ್ತಿದ್ದ ನಾಗರ ಹಾವು! | King cobra playing with waves of sea video viral in social media


Viral Video: ಕಡಲ ತೀರದಲ್ಲಿ ಅಲೆಗಳ ಜೊತೆ ಆಟವಾಡುತ್ತಿದ್ದ ನಾಗರ ಹಾವು!

ನಾಗರ ಹಾವು

ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ವಿಡಿಯೊಗಳು ಹರಿದಾಡುತ್ತವೆ. ಅವುಗಳಲ್ಲಿ ಕೆಲವು ಶಾಕಿಂಗ್ ವಿಡಿಯೊಗಳಾಗಿದ್ದರೆ, ಇನ್ನು ಕೆಲವು ತಮಾಷೆಯ ದೃಶ್ಯಗಳಾಗಿರುತ್ತವೆ. ಕೆಲವರು ಅಪರೂಪದಲ್ಲಿ ಅಪರೂಪದ ದೃಶ್ಯಗಳು ಸಹ ಆಶ್ಚರ್ಯವನ್ನುಂಟು ಮಾಡುತ್ತವೆ. ಪ್ರಾಣಿಗಳ ತುಂಟಾಟ ಮೋಜು ಮಸ್ತಿಯ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ (Social Media) ಫುಲ್ ವೈರಲ್ ಆಗುತ್ತವೆ. ಇದೀಗ ವೈರಲ್ ಆದ ವಿಡಿಯೊದಲ್ಲಿ ಗಮನಿಸುವಂತೆ ನಾಗರ ಹಾವು (King Cobra) ಕಡಲ ತೀರದಲ್ಲಿ ಅಲೆಗಳೊಂದಿಗೆ ಆಟವಾಡುತ್ತಿದೆ. ಈ ವಿಡಿಯೊ (Viral Video) ಇದೀಗ ಸಕತ್ ವೈರಲ್ ಆಗಿದೆ.

ವೈರಲ್ ಆಗುತ್ತಿರುವ ವಿಡಿಯೊದಲ್ಲಿ ಗಮನಿಸುವಂತೆ ದೈತ್ಯಾಕಾರದ ನಾಗರಹಾವು ಕಡತ ತೀರದಲ್ಲಿ ಆಟವಾಡುತ್ತಿದೆ. ನೀರಿನ ಅಲೆಗಳ ಜೊತೆ ಮೋಜು ಮಾಡುತ್ತಿರುವುದನ್ನು ದೃಶ್ಯದಲ್ಲಿ ನೋಡಬಹುದು. ಹಾವು ಧೈರ್ಯದಿಂದ ಅಲೆಗಳಿದ್ದಲ್ಲಿಯೇ ಮುನ್ನುಗ್ಗುತ್ತಿದೆ. ಈ ವಿಡಿಯೊ ಕ್ಯಾಮರಾದಲ್ಲಿ ಸೆರೆಯಾಗಿದ್ದು ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೊ ಹಂಚಿಕೊಳ್ಳಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ವಿಡಿಯೊವನ್ನು ಹೆಚ್ಚು ಇಷ್ಟಪಟ್ಟಿದ್ದಾರೆ. ಅನೇಕರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ವಿಭಾಗದಲ್ಲಿ ತಿಳಿಸಿದ್ದಾರೆ. ನಿರಂತರ ಪರಿಶ್ರಮದಿಂದ ನಾವು ನಮ್ಮ ಗುರಿಯನ್ನು ಸಾಧಿಸಬೇಕು ಎಂದು ಓರ್ವರು ಹೇಳಿದ್ದಾರೆ. ಹಾವು ನಿಜಕ್ಕೂ ಅಪಾಯಕಾರಿ ಇಷ್ಟು ಹತ್ತಿರದಿಂದ ವಿಡಿಯೊ ಮಾಡಿದವರ್ಯಾರು? ಎಂದು ಓರ್ವರು ಪ್ರಶ್ನಿಸಿದ್ದಾರೆ.

ವಿಡಿಯೊವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳಲಾಗಿದೆ. ರಾಯಲ್ ಫೈಥಾನ್ ಎಂಬ ಇನ್​ಸ್ಟಾಗ್ರಾಮ್​ ಖಾತೆಯಿಂದ ವಿಡಿಯೊ ಹಂಚಿಕೊಳ್ಳಲಾಗಿದೆ. ಹಾವು ಅಲೆಗಳೊಂದಿಗೆ ಆಟವಾಡುತ್ತಿದೆ ಎಂಬ ಶೀರ್ಷಿಕೆ ನೀಡುವ ಮೂಲಕ ವಿಡಿಯೊ ಹಂಚಿಕೊಳ್ಳಲಾಗಿದೆ. ಸಾವಿರಾರು ವೀಕ್ಷಣೆಗಳನ್ನು ವಿಡಿಯೊ ಗಳಿಸಿಕೊಂಡಿದೆ.

ಇದನ್ನೂ ಓದಿ:

Viral Video: ತಿಂಡಿ ಪ್ಯಾಕೇಟ್​ ಕದಿಯಲು ಹೋಗಿ ಸಿಸಿ ಕ್ಯಾಮರಾ ಮುಂದೆ ಕಳ್ಳನ ಬ್ರೇಕ್ ಡಾನ್ಸ್! ವಿಡಿಯೊ ಮಜವಾಗಿದೆ ನೀವೇ ನೋಡಿ

Viral Video: ಘಟಂ ತಾಳವಾದ್ಯದ ಜೊತೆ ಮನಿಕೆ ಮಗೆ ಹಿತೆ ಹಾಡು; ವೈರಲ್ ಆಯ್ತು ವಿಡಿಯೊ

TV9 Kannada


Leave a Reply

Your email address will not be published. Required fields are marked *