Viral Video: ಕಳ್ಳತನ ಮಾಡಲು ಗೋಡೆ ಕೊರೆದು ಮದ್ಯದಂಗಡಿಗೆ ನುಗ್ಗಿದ ಕಳ್ಳರು ಕಂಠಪೂರ್ತಿ ಕುಡಿದು ಸಿಕ್ಕಿಬಿದ್ದ ವಿಡಿಯೋ ವೈರಲ್ | Tamil Nadu Thieves break into liquor shop to rob it end up drinking caught Red handed by police Viral Video


ಮದ್ಯದಂಗಡಿಯನ್ನು ಪ್ರವೇಶಿಸಲು ಗೋಡೆಗೆ ದೊಡ್ಡ ರಂಧ್ರವನ್ನು ಕೊರೆದ ಕಳ್ಳರು ಒಳಗೆ ಹೋದ ನಂತರ ಅಂಗಡಿಯಲ್ಲಿ ಇಟ್ಟಿದ್ದ ಮದ್ಯವನ್ನು ಕುಡಿಯಲು ಪ್ರಾರಂಭಿಸಿದರು. ಸ್ವಲ್ಪ ಸಮಯದ ನಂತರ ಅವರು ಪ್ರಜ್ಞೆಯನ್ನು ಕಳೆದುಕೊಂಡರು.

Viral Video: ಕಳ್ಳತನ ಮಾಡಲು ಗೋಡೆ ಕೊರೆದು ಮದ್ಯದಂಗಡಿಗೆ ನುಗ್ಗಿದ ಕಳ್ಳರು ಕಂಠಪೂರ್ತಿ ಕುಡಿದು ಸಿಕ್ಕಿಬಿದ್ದ ವಿಡಿಯೋ ವೈರಲ್

ಕಳ್ಳತನ ಮಾಡಲು ಗೋಡೆ ಕೊರೆದು ಮದ್ಯದಂಗಡಿಗೆ ನುಗ್ಗಿದ ಕಳ್ಳರು

ಚೆನ್ನೈ: ಏನೇನೋ ಮಾಸ್ಟರ್ ಪ್ಲಾನ್ ಮಾಡಿ ಕಳ್ಳತನ ಮಾಡುವ ಎಷ್ಟೋ ಕಳ್ಳರಿದ್ದಾರೆ. ಆದರೆ, ತಮಿಳುನಾಡಿನ ತಿರುವಳ್ಳೂರಿನಲ್ಲಿ ಕುಡಿತದ ನಶೆಯಲ್ಲಿ ಮೈಮರೆತು ಕಳ್ಳರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಇಬ್ಬರು ಕಳ್ಳರು ಮದ್ಯದಂಗಡಿಯ ಗೋಡೆ ಕೊರೆದು, ಒಳಗೆ ನುಗ್ಗಿ ಅಲ್ಲಿದ್ದ ಮದ್ಯ ಸೇವಿಸಿದ್ದಾರೆ. ಕೊನೆಗೆ ಮೈಮೇಲೆ ಪ್ರಜ್ಞೆಯೇ ಇಲ್ಲದಂತೆ ಬಿದ್ದಿದ್ದ ಅವರನ್ನು ತಮಿಳುನಾಡಿನ ಪೊಲೀಸರು ಹೊರಗೆ ಎಳೆದು ತಂದಿದ್ದಾರೆ.

ಕದಿಯಲು ಹೋಗಿ, ಕುಡಿಯುತ್ತಾ ಕುಳಿತು ಸಿಕ್ಕಿಬಿದ್ದ ಈ ಇಬ್ಬರು ಕಳ್ಳರನ್ನು ಪಳ್ಳಿಕರಣೈ ನಿವಾಸಿ ಸತೀಶ್ ಮತ್ತು ವಿಲುಪುರಂ ಮೂಲದ ಮುನಿಯನ್ ಎಂದು ಗುರುತಿಸಲಾಗಿದೆ. ಇವರಿಬ್ಬರಿಂದ 14,000 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಕವರಾಯಪೆಟ್ಟೈನಲ್ಲಿರುವ ಸರ್ಕಾರಿ ಟಾಸ್ಮಾಕ್ ಮದ್ಯದ ಅಂಗಡಿಯ ಬಾಗಿಲು ಮುಚ್ಚಿದ ನಂತರ ಇಬ್ಬರು ಕಳ್ಳರು ಗೋಡೆ ಕೊರೆದು ಅದರೊಳಗೆ ಪ್ರವೇಶಿಸಿದ್ದರು.

TV9 Kannada


Leave a Reply

Your email address will not be published.