Viral Video : ಕೆಳಗೆ ಜ್ವಾಲಾಮುಖಿ, ಹಗ್ಗದ ಮೇಲೆ ನಡಿಗೆಯ ಸಾಹಸ | Adventure lovers complete slackline walk over active volcano.


Slackline Walk : ಕೆಳಗೆ ಕಡಿದಾದ ಕಣಿವೆಯೋ ನೀರೋ ಇದ್ದು ನಡುವಿನ ಅಂತರದಲ್ಲಿ ಹಗ್ಗದ ಮೇಲೆ ನಡೆಯುವ ಸಾಹಸ ಗೊತ್ತಿರುವುದೇ. ಆದರೆ ಕೆಳಗೆ ಜ್ವಾಲಾಮುಖಿ ಭುಗಿಲೇಳುತ್ತಿರುವಾಗ ಈ ಸಾಹಸಕ್ಕಿಳಿಯುವುದೆಂದರೆ…

Viral Video : ಕೆಳಗೆ ಜ್ವಾಲಾಮುಖಿ, ಹಗ್ಗದ ಮೇಲೆ ನಡಿಗೆಯ ಸಾಹಸ

ಸಾಹಸದಲ್ಲಿ ನಿರತ ಮಹಿಳೆ

Viral Video : ರಾಫೆಲ್​ ಝುಗ್ನೋ ಬ್ರಿಡಿ ಮತ್ತು ಅಲೆಕ್ಸಾಂಡರ್ ಶುಲ್ಝ್​ ಎಂಬ ಸಾಹಸಪ್ರಿಯರು ತಮ್ಮ ಸಾಹಸಮಯ ವಿಡಿಯೋ ಅನ್ನು ಇನ್​ಸ್ಟಾಗ್ರಾಮ್​ನ ಗಿನ್ನೀಸ್​ ವರ್ಲ್ಡ್​ ರೆಕಾರ್ಡ್ಸ್​ ಪುಟದಲ್ಲಿ ಪೋಸ್ಟ್ ಮಾಡಿದ ನಂತರ ನೆಟ್ಟಿಗರು ಅಚ್ಚರಿಗೆ ಒಳಗಾಗಿದ್ದಾರೆ. ಕೆಳಗೆ ಜ್ವಾಲಾಮುಖಿ ಭುಗಿಲೇಳುತ್ತಿದ್ದರೂ ಅಂತರದಲ್ಲಿ ಕಟ್ಟಿದ ಹಗ್ಗದ ಮೇಲೆ ನಿಧಾನ ಲಯದಲ್ಲಿ ನಡೆದು ಗುರಿತಲುಪುವ ಸಾಹಸ ಮಾಡಿದ್ದಾರೆ. ಕ್ಷಣ ಎಚ್ಚರತಪ್ಪಿದರೂ ಮುಂದೇನಾಗುತ್ತದೆ ಎಂದು ಹೇಳಬೇಕಿಲ್ಲ.

261 ಮೀಟರ್​ ಉದ್ದದ ಹಗ್ಗದ ಮೇಲೆ ನಡೆದುಕೊಂಡು ಹೋಗಿರುವ ಈ ದೃಶ್ಯ ಭಯ ತರಿಸುವಂತಿಲ್ಲವೆ? ಈ ಪೋಸ್ಟ್​ ಕುರಿತು ಮಾಹಿತಿಯನ್ನು ಅವರು ಹಂಚಿಕೊಂಡಿದ್ದಾರೆ, ‘ರಾಫೆಲ್ ಮತ್ತು ಅಲೆಕ್ಸ್, ವನುವಾಟೋವಿನ ಯುಸೂರ್ ಪರ್ವತದಲ್ಲಿ 42 ಮೀ ಎತ್ತರದಲ್ಲಿ ಈ ನಿಧಾನ ನಡಿಗೆ ಪೂರ್ಣಗೊಳಿಸಿದ್ದಾರೆ’ ಎಂದು. ಸುಮಾರು 12 ಗಂಟೆಗಳ ಹಿಂದೆ ಈ ಪೋಸ್ಟ್ ಮಾಡಲಾಗಿದೆ. ಈತನಕ 1.4 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಈ ವಿಡಿಯೋ ಪಡೆದಿದೆ. 12,000ಕ್ಕೂ ಹೆಚ್ಚು ಜನರು ಈ ವಿಡಿಯೋ ಮೆಚ್ಚಿದ್ದಾರೆ. ವಿವಿಧ ರೀತಿಯಲ್ಲಿ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

ಅತ್ಯದ್ಭುತವಾಗಿದೆ ಎಂದು ಒಬ್ಬರು ಪ್ರತಿಕ್ರಿಯಿಸಿದರೆ, ಇನ್ನೊಬ್ಬರು, ಈಗಾಗಲೇ ಇದು ದಾಖಲೆಯಾಗಿದೆ ಎಂದು ಹೇಳಿದ್ದಾರೆ.

ಆದರೂ ಇದಕ್ಕೆಲ್ಲ ಎದೆಗುಂಡಿಗೆ ಎಷ್ಟು ಗಟ್ಟಿಯಾಗಿರಬೇಕಲ್ಲವೆ?

TV9 Kannada


Leave a Reply

Your email address will not be published.