
ಚಿಪ್ಸ್ ಪ್ಯಾಕೆಟ್ ಕದಿಯುತ್ತಿರುವ ಕೋತಿ
ನಾಯಿ- ಕೋತಿ ಪಾರ್ಟನರ್ಶಿಪ್ನಲ್ಲಿ ನಡೆದ ಈ ಕಳ್ಳತನದ ವಿಡಿಯೋ ಭಾರೀ ವೈರಲ್ ಆಗಿದೆ. ಮಂಗವು ನಾಯಿಯ ಬೆನ್ನಿನ ಮೇಲೆ ನಿಂತು ಅಂಗಡಿಯಿಂದ ಚಿಪ್ಸ್ ಪ್ಯಾಕೆಟ್ ಕದಿಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ನಾಯಿ ಅತ್ಯಂತ ಬುದ್ಧಿವಂತ ಪ್ರಾಣಿ ಮತ್ತು ನಿಯತ್ತಿನ ಪ್ರಾಣಿ. ಮನುಷ್ಯನೊಂದಿಗಿನ ನಾಯಿಯ ಅದೆಷ್ಟೋ ವಿಡಿಯೋಗಳು ನೆಟ್ಟಿಗರ ಮನಸು ಕದ್ದಿವೆ. ಆದರೆ, ಎಲ್ಲರಿಗೂ ಗೊತ್ತಿರುವ ಹಾಗೆ ನಾಯಿ (Dog) ಮತ್ತು ಮಂಗ (Monkey) ಎರಡೂ ಶತ್ರುಗಳು. ಅಪ್ಪಿತಪ್ಪಿ ತನ್ನ ಮನೆಯ ಬಳಿ ಕೋತಿ ಕಾಣಿಸಿಕೊಂಡರೆ ಅದರ ಬೆನ್ನತ್ತುವ ನಾಯಿ ಆ ಕೋತಿ ಇನ್ನೆಂದೂ ಆ ಮನೆಯ ಕಡೆ ತಲೆಹಾಕದಂತೆ ಕಾಟ ಕೊಟ್ಟು ಓಡಿಸುತ್ತದೆ. ಆದರೆ, ಇಲ್ಲೊಂದು ನಾಯಿ ಕೋತಿಯೊಂದಿಗೆ ಗೆಳೆತನ ಮಾಡಿಕೊಂಡು, ಆ ಕೋತಿಗೆ ಅಂಗಡಿಯೊಂದರಿಂದ ಚಿಪ್ಸ್ ಪ್ಯಾಕೆಟ್ ಕದಿಯಲು ಸಹಾಯ ಮಾಡಿದೆ!
ನಾಯಿ- ಕೋತಿ ಪಾರ್ಟನರ್ಶಿಪ್ನಲ್ಲಿ ನಡೆದ ಈ ಕಳ್ಳತನದ ವಿಡಿಯೋ ಭಾರೀ ವೈರಲ್ ಆಗಿದೆ. ಅಂಗಡಿಯೊಂದರ ಬಳಿ ಹೋಗುವ ನಾಯಿ ಮತ್ತು ಮಂಗ ಉಪಾಯವಾಗಿ ಆ ಅಂಗಡಿಯಿಂದ ಚಿಪ್ಸ್ ಪ್ಯಾಕ್ ಕದಿಯುವುದನ್ನು ವಿಡಿಯೋದಲ್ಲಿ ನೋಡಬಹುದು.
The 🐒 trying to pick up a packet of chips with the help of 🐕 is the cutest thing you will watch today ❣️❣️. #goodmorning #dog #dogs #monkey #monkeys #animal #AnimalLovers #cute #lovable #adorable #friendship #bond #team pic.twitter.com/bkMAEU13NC
— Tarana Hussain (@hussain_tarana) May 8, 2022
ಈ ವಿಡಿಯೋ ಹಳೆಯದಾಗಿದ್ದು, ಕಳೆದ ವರ್ಷ ಡಿಸೆಂಬರ್ನಲ್ಲಿ ಪೋಸ್ಟ್ ಮಾಡಲಾಗಿತ್ತು. ಆದರೆ ಅದೀಗ ಮತ್ತೆ ವೈರಲ್ ಆಗುತ್ತಿದೆ. ಮಂಗವು ನಾಯಿಯ ಬೆನ್ನಿನ ಮೇಲೆ ನಿಂತು ಅಂಗಡಿಯಿಂದ ಚಿಪ್ಸ್ ಪ್ಯಾಕೆಟ್ ಕದಿಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಇದನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಲಾಗಿದೆ. “ಮಂಗ ಮತ್ತು ನಾಯಿ ಒಳ್ಳೆಯ ಸ್ನೇಹಿತರಲ್ಲ ಎಂದು ಯಾರು ಯಾರಾದರೂ ಹೇಳಲು ಸಾಧ್ಯವೇ?” ಎಂದು ಈ ವಿಡಿಯೋಗೆ ಕ್ಯಾಪ್ಸನ್ ನೀಡಲಾಗಿದೆ.