
ವೈರಲ್ ಆದ ಕಾರು
Image Credit source: Youtube
ಇಕ್ಕಟ್ಟಿನ ನಡುವೆ ಪಾರ್ಕ್ ಮಾಡಿದ್ದ ಕಾರನ್ನು ಹೊರತರುವ ಚಾಲಕನ ಕೌಶಲ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ. ವಿಡಿಯೋ ನೋಡಿದ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ.
ಹೆಚ್ಚಿನವರಿಗೆ ಕಾರು ಪಾರ್ಕಿಂಗ್ (Car Parking) ಮಾಡಿದ್ದಲ್ಲಿಂದ ಕಾರನ್ನು ಹಿಂತೆಗೆಯುವುದೇ ದೊಡ್ಡ ವಿಚಾರ, ಪಾರ್ಕಿಂಗ್ ಸ್ಥಳದಲ್ಲಿ ತುಂಬ ವಾಹನಗಳಿತ್ತೆಂದರೆ ಸಾಕು ಅಯ್ಯೋ ಹೇಗಪ್ಪಾ ಪಾರ್ಕಿಂಗ್ ಮಾಡೋದು ಅಂತ ಹೇಳುತ್ತಾರೆ. ಹೀಗಿದ್ದಾಗ ನ್ಯೂಯಾರ್ಕ್ನ ಚಾಲಕನೊಬ್ಬನ ಚಾಲನಾ ಕೌಶಲ್ಯದ ವಿಡಿಯೋ ಭಾರಿ ವೈರಲ್ (Video Viral) ಆಗುತ್ತಿದೆ. ಇಕ್ಕಟ್ಟಿನಲ್ಲಿ ಪಾರ್ಕ್ ಮಾಡಿದ್ದ ಕಾರ್ ಅನ್ನು ಹೊರತರುವ ಚಾಲಕನ ಕೌಶಲ್ಯಕ್ಕೆ ನೆಟ್ಟಿಗರು ಶಾಕ್ ಆಗಿದ್ದಾರೆ.