
Image Credit source: Hindustan Times
ತಮ್ಮ ಅಕ್ರಮ ಸಂಬಂಧದ ವಿಡಿಯೋ ವೈರಲ್ ಆಗುತ್ತಿದ್ದಂತೆ ಮುಜುಗರಕ್ಕೀಡಾಗಿರುವ ಮಾಜಿ ಸಚಿವ ಭರತ್ಸಿನ್ಹ್ ಸೋಲಂಕಿ ಕೆಲವು ತಿಂಗಳುಗಳವರೆಗೆ ಸಕ್ರಿಯ ರಾಜಕೀಯದಿಂದ ವಿರಾಮ ತೆಗೆದುಕೊಳ್ಳುವುದಾಗಿ ಘೋಷಿಸಿದ್ದಾರೆ.
ನವದೆಹಲಿ: ಕೇಂದ್ರದ ಮಾಜಿ ಸಚಿವ ಮತ್ತು ಗುಜರಾತ್ನ ಹಿರಿಯ ಕಾಂಗ್ರೆಸ್ ನಾಯಕ ಭರತ್ಸಿನ್ಹ್ ಸೋಲಂಕಿ ( Bharatsinh Solanki) ತನ್ನ ಗರ್ಲ್ಫ್ರೆಂಡ್ ಜೊತೆ ಇದ್ದಾಗ ಹೆಂಡತಿಯ ಕೈಗೆ ರೆಡ್ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡಿದ್ದಾರೆ. ಮನೆಯೊಂದರಲ್ಲಿ ತನ್ನ ಗರ್ಲ್ಫ್ರೆಂಡ್ ಜೊತೆಗೆ ಇದ್ದ ಭರತ್ಸಿನ್ಹ್ ಸೋಲಂಕಿ ಅವರಿದ್ದ ಮನೆಗೆ ಬಂದ ಅವರ ಹೆಂಡತಿ ತನ್ನ ಗಂಡನ ಜೊತೆಗಿದ್ದ ಯುವತಿಯ ಕೂದಲು ಹಿಡಿದು ಎಳೆದಾಡಿ, ಬಾಯಿಗೆ ಬಂದಂತೆ ಬೈದಿರುವ ವಿಡಿಯೋ (Video Viral) ಇದೀಗ ವೈರಲ್ ಆಗಿದೆ.
ತಮ್ಮ ಅಕ್ರಮ ಸಂಬಂಧದ ವಿಡಿಯೋ ವೈರಲ್ ಆಗುತ್ತಿದ್ದಂತೆ ಮುಜುಗರಕ್ಕೀಡಾಗಿರುವ ಮಾಜಿ ಸಚಿವ ಭರತ್ಸಿನ್ಹ್ ಸೋಲಂಕಿ ಕೆಲವು ತಿಂಗಳುಗಳವರೆಗೆ ಸಕ್ರಿಯ ರಾಜಕೀಯದಿಂದ ವಿರಾಮ ತೆಗೆದುಕೊಳ್ಳುವುದಾಗಿ ಘೋಷಿಸಿದ್ದಾರೆ. ಕಾಂಗ್ರೆಸ್ ಪಕ್ಷ ನನ್ನ ಮೇಲೆ ಯಾವುದೇ ಒತ್ತಡ ಹೇರಿಲ್ಲ. ಇದು ನನ್ನ ವೈಯಕ್ತಿಕ ನಿರ್ಧಾರವಾಗಿದೆ ಎಂದು ಅವರು ಹೇಳಿದ್ದಾರೆ. (Source)
1999ರಲ್ಲಿ ರೇಷ್ಮಾ ಪಟೇಲ್ ಜೊತೆಗೆ ಭರತ್ಸಿನ್ಹ್ ಸೋಲಂಕಿ ಮದುವೆಯಾಗಿದ್ದರು. ರೇಷ್ಮಾ ವಿರುದ್ಧ ಹಲವಾರು ಆರೋಪಗಳನ್ನು ಮಾಡಿರುವ ಭರತ್ಸಿನ್ಹ್ ಸೋಲಂಕಿ, “ನಾವು ಅನೇಕ ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿಲ್ಲ. ನನ್ನ ಆಸ್ತಿಯನ್ನು ಕಸಿದುಕೊಳ್ಳಲು, ನನ್ನ ಮರ್ಯಾದೆಗೆ ಹಾನಿ ಮಾಡಲು ಪ್ರಯತ್ನಿಸಿದ್ದರಿಂದ ನಾನು ವಿಚ್ಛೇದನವನ್ನು ಕೋರುತ್ತಿದ್ದೇನೆ” ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ. ನನ್ನ ವಿಚ್ಛೇದನದ ಅರ್ಜಿಯನ್ನು ಜೂನ್ 15ರಂದು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಕಾಂಗ್ರೆಸ್ ನಾಯಕ ಭರತ್ಸಿನ್ಹ್ ಸೋಲಂಕಿ ಹೇಳಿದ್ದಾರೆ. ನನ್ನ ಹೆಂಡತಿ ನನ್ನ ಪ್ರಾಣವನ್ನು ತೆಗೆಯಲು ಮಾಂತ್ರಿಕನನ್ನು ಸಂಪರ್ಕಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.