Gift : ಗೆಳೆಯನ ಹುಟ್ಟುಹಬ್ಬದ ದಿನ ಗೆಳತಿ ಕೊಟ್ಟ ಉಡುಗೊರೆ ನೋಡಿ ಆತ ಕಣ್ಣೀರಾಗಿದ್ದು ಯಾಕೆ? ಈ ವಿಡಿಯೋದಲ್ಲಿರುವ ಅಮೂಲ್ಯವಾದ ಉಡುಗೊರೆ ಏನಿರಬಹುದು?

ಗೆಳತಿ ಅಂಥ ಗಿಫ್ಟ್ ಏನು ಕೊಟ್ಟಿದ್ದು?
Viral Gift Video : ತನ್ನ ಗೆಳೆಯನ ಹುಟ್ಟುಹಬ್ಬಕ್ಕೆ ಈಕೆ ವಿಶೇಷವಾದ ಉಡುಗೊರೆಯೊಂದನ್ನು ನೀಡಿದ್ದಾಳೆ. ಅದನ್ನು ತೆರೆಯುತ್ತಿದ್ದಂತೆ ಅವನ ಕಣ್ಣುಗಳು ಉಕ್ಕಿಬಂದಿವೆ. ಹುಟ್ಟುಹಬ್ಬದ ದಿನ ಹೀಗೆ ಅವ ದುಃಖಿಸಲು ಕಾರಣವೇನಿರಬಹುದು? ಎಂದು ಇದನ್ನು ಓದುತ್ತಿರುವ ನಿಮಗೂ ಅನುಮಾನ ಬಂದಿರಲು ಸಾಕು. ಪ್ರೀತಿಪಾತ್ರರನ್ನು ಕಳೆದುಕೊಂಡ ನೋವು ಅವರವರಿಗೇ ಗೊತ್ತು, ಸ್ವಲ್ಪಮಟ್ಟಿಗೆ ಅವರನ್ನು ಪ್ರೀತಿಸುವವರಿಗೂ ಗೊತ್ತು. ಕಳೆದುಕೊಂಡಿದ್ದನ್ನು ಯಾರೂ ಎಂದೂ ಮರಳಿಸಿ ಸರಿದೂಗಿಸಲು ಸಾಧ್ಯವೇ ಇಲ್ಲ. ಹೃದಯದಲ್ಲಿ ಅದೊಂದು ವಿಷಾದದ ಅಲೆ ಸದಾ ಅಚ್ಚೊತ್ತಿಬಿಡುತ್ತದೆ. ಜಗತ್ತಿನ ಯಾವ ಸುಖ ಸಂತೋಷಗಳೂ ಅವರನ್ನು ಸಂತೈಸಲಾರವು. ಇಂಥ ಸತ್ಯ ಗೊತ್ತಿದ್ದ ಈ ಹುಡುಗನ ಗೆಳತಿ ಅಪರೂಪದ ಗಿಫ್ಟ್ ಕೊಟ್ಟಿದ್ದಾಳೆ. ಆಕೆ ಕೂಡ ಎಂಥ ಸಹೃದಯಿ ಅಲ್ವಾ?
ವಿಡಿಯೋ ನೋಡಿ
ಕ್ರಿಸ್ಟಲ್ ಕೇಸ್ವುಳ್ಳ ತ್ರಿಡಿ ಹೊಲೊಗ್ರಾಫಿಕ್ನೊಳಗೆ ನಾಯಿಯ ಪ್ರತಿಕೃತಿ ಇರುವ ಮೌಲ್ಯಯುತ ಈ ಉಡುಗೊರೆಗಿಂತ, ಲಾನಿ ತನ್ನ ಗೆಳೆಯ ಜಯರ್ನ ಭಾವನೆಯನ್ನು ಅದೆಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾಳೆ ಎಂದು ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಸುಮಾರು 25 ಸಾವಿರ ಲೈಕ್ಸ್ ಹೊಂದಿದೆ. 600 ಪ್ರತಿಕ್ರಿಯೆಗಳನ್ನು ಪಡೆದಿದೆ.