Viral Video: ಗೋವಾ ಬೀಚ್​ನಲ್ಲಿ ಕಾರ್​ ರೈಡಿಂಗ್ ಮಾಡಿ ತಗಲಾಕೊಂಡ ಪ್ರವಾಸಿಗ! ಮುಂದಾಗಿದ್ದೇ ಸಂಕಷ್ಟದ ಮೇಲೊಂದು ಸಂಕಷ್ಟ! | Trending Viral video Car Ride in Goa Beach, car driver arrested


Viral Video: ಗೋವಾ ಬೀಚ್​ನಲ್ಲಿ ಕಾರ್​ ರೈಡಿಂಗ್ ಮಾಡಿ ತಗಲಾಕೊಂಡ ಪ್ರವಾಸಿಗ! ಮುಂದಾಗಿದ್ದೇ ಸಂಕಷ್ಟದ ಮೇಲೊಂದು ಸಂಕಷ್ಟ!

ಗೋವಾ ಬೀಚ್​ನಲ್ಲಿ ಪ್ರವಾಸಿಗನ ದುಸ್ಸಾಹಸ

ದೆಹಲಿಯ ಪ್ರವಾಸಿಗನೊಬ್ಬ ಗೋವಾ ಬೀಚ್​​ನಲ್ಲಿ ಕಾರು ಮೂಲಕ ಸಾಹಸ ಮಾಡಲು ಹೋಗಿ ತಗಲಾಕೊಂಡ ವಿಡಿಯೋ ವೈರಲ್ ಆಗುತ್ತಿದ್ದು, ಮುಂದೆ ಮತ್ತೊಂದು ಸಂಕಷ್ಟವನ್ನು ಆ ಕಾರು ಚಾಲಕ ಎದುರಿಸುವಂತಾಗಿದೆ. ಅದೇನೆಂದು ತಿಳಿಯಲು ಈ ಸುದ್ದಿ ಓದಿ.

ಗೋವಾ ಬೀಚ್​ಗೆ ಯಾವುದೇ ಸೀಸನ್​ನಲ್ಲೂ ಡಿಮ್ಯಾಂಡ್ ಇದ್ದೇ ಇರುತ್ತದೆ. ಈ ಬೀಚ್​ಗೆ ಬರುವ ಪ್ರವಾಸಿಗರ ಸಂಖ್ಯೆಗೇನೂ ಕಡಿಮೆ ಇಲ್ಲ. ದೇಶ ವಿದೇಶಗಳಿಂದಲೂ ಇಲ್ಲಿಗೆ ಭೇಟಿ ನೀಡುತ್ತಾರೆ. ಅದೇ ರೀತಿ ದೆಹಲಿಯ ಪ್ರವಾಸಿಗನೊಬ್ಬ ಗೋವಾ ಬೀಚ್​ಗೆ ಎಸ್​ಯುವಿ ಕಾರಿನಲ್ಲಿ ಆಗಮಿಸಿದ್ದಾನೆ. ಹೀಗೆ ಕಾರನ್ನು ಚಲಾಯಿಸುತ್ತಾ ಆನಂದಿಸುತ್ತಿದ್ದಾಗ ಪ್ರವಾಸಿಗ ಫಜೀತಿಗೆ ಸಿಲುಕಿದ ಘಟನೆ ನಡೆದಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ (Video Viral) ಆಗುತ್ತಿದ್ದು, ಕಾರು ಚಾಲಕನ ವಿರುದ್ಧ ಕ್ರಮಕ್ಕೆ  ನೆಟ್ಟಿಗರು ಒತ್ತಾಯಿಸಿದ್ದಾರೆ.

TV9 Kannada


Leave a Reply

Your email address will not be published.