Viral Video: ಚಿನ್ನದ ಅಂಗಡಿಯಲ್ಲಿ ಸರ ಕದ್ದು ಪರಾರಿಯಾಗಲು ಸಿದ್ಧರಾಗಿದ್ದ ದಂಪತಿ; ಅಟ್ಟಾಡಿಸಿಕೊಂಡು ಹೋದ ಶ್ವಾನದ ವಿಡಿಯೋ ವೈರಲ್ | The couple theft gold chain dog attacked his video goes viral

Viral Video: ಚಿನ್ನದ ಅಂಗಡಿಯಲ್ಲಿ ಸರ ಕದ್ದು ಪರಾರಿಯಾಗಲು ಸಿದ್ಧರಾಗಿದ್ದ ದಂಪತಿ; ಅಟ್ಟಾಡಿಸಿಕೊಂಡು ಹೋದ ಶ್ವಾನದ ವಿಡಿಯೋ ವೈರಲ್

ಚಿನ್ನದ ಸರ ಕದ್ದು ಪರಾರಿಯಾಗಲು ಪ್ರಯತ್ನಿಸುತ್ತಿದ್ದ ದಂಪತಿ ಮೇಲೆ ಶ್ವಾನ ದಾಳಿ ನಡೆಸಿದ ದೃಶ್ಯ

ಕಳ್ಳರು ಕದಿಯಲು ಅದೆಷ್ಟೋ ಹೊಸ ಹೊಸ ಪ್ಲ್ಯಾನ್ ಮಾಡುತ್ತಲೇ ಇರುತ್ತಾರೆ. ಕದಿಯಲು ಹೋಗಿ ಮಾಲೀಕರ ಬಳಿ ಸಿಕ್ಕಿ ಪರದಾಡಿದ ಅದೆಷ್ಟೋ ಕಳ್ಳತನದ ಸುದ್ದಿಗಳನ್ನು ನೀವು ಕೇಳಿರಬಹುದು. ಅಂಗಡಿಗಳಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದ ಅದೆಷ್ಟೋ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿರುತ್ತವೆ. ಆ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತವೆ. ಇದೀಗ ಅಚ್ಚರಿಯ ವಿಷಯವೆಂದರೆ ಕಳ್ಳತನ ಮಾಡಿ ಓಡಿ ಹೋಗಲು ಪ್ಲ್ಯಾನ್ ಮಾಡಿದ್ದ ದಂಪತಿಯ ಮೇಲೆ ಶ್ವಾನ ದಾಳಿ ಮಾಡಿದೆ. ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ.

ದಂಪತಿ ಚಿನ್ನ ಖರೀದಿಸುವ ನೆಪದಲ್ಲಿ ಅಂಗಡಿಯನ್ನು ಪ್ರವೇಶಿಸಿದ್ದಾರೆ. ಮೊದಲಿಗೆ ಉಂಗುರ, ಚಿನ್ನದ ಸರ ಎಲ್ಲವನ್ನೂ ನೋಡುತ್ತಿದ್ದಾರೆ. ತಾವು ತಂದಿದ್ದ ಗಿಫ್ಟ್ ಬಾಕ್ಸ್​ನೊಳಗೆ ಚಿನ್ನದ ಸರ ತುಂಬಿಕೊಳ್ಳಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲಿ ಮಾಲೀಕನಿಗೆ ಅನುಮಾನ ಬಂದಿದೆ. ಇದನ್ನು ತಿಳಿದ ಮಹಿಳೆ ಪತಿಯ ಕೈಯಲ್ಲಿ ಗಿಫ್ಟ್ ಬಾಕ್ಸ್ ಕೊಟ್ಟು ಪರಾರಿಯಾಗಲು ಪ್ರಯತ್ನಿಸಿದ್ದಾಳೆ. ಅಲ್ಲೇ ಪಕ್ಕದಲ್ಲಿ ದೃಶ್ಯವನ್ನು ನೋಡುತ್ತಾ ಕುಳಿತಿದ್ದ ಶ್ವಾನ ಕಳ್ಳನ ಮೇಲೆ ದಾಳಿ ನಡೆಸಿದೆ.

ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಇನ್​ಸ್ಟಾಗ್ರಾಂ ಸೇರಿದಂತೆಯೇ ಇತರರ ಸೋಷಿಯಲ್ ಮಿಡಿಯಾಗಳಲ್ಲಿಯೂ ಸಹ ವಿಡಿಯೋ ಹರಿದಾಡುತ್ತಿದೆ. ಕಳ್ಳರ ಕಾಟದಿಂದ ಮಾಲೀಕರು ಎಷ್ಟು ಎಚ್ಚರವಾಗಿದ್ದರೂ ಸಾಲದು ಎಂಬ ಪ್ರತಿಕ್ರಿಯೆಗಳು ಕೇಳಿ ಬಂದಿವೆ. ಎಲ್ಲವನ್ನೂ ನೋಡುತ್ತಾ ಚಾಣಕ್ಷತನದಿಂದ ಕಳ್ಳನ ಮೇಲೆ ದಾಳಿ ನಡೆಸಿದ ಶ್ವಾನಕ್ಕೆ ಸ್ಥಳದಲ್ಲಿ ಏನು ನಡೆಯುತ್ತಿದೆ ಎಂಬುದು ಅರ್ಥವಾಗಿದೆ ಎಂದು ಮತ್ತೋರ್ವರು ಹೇಳಿದ್ದಾರೆ.

ಇದನ್ನೂ ಓದಿ:

Viral Video: ಉಕ್ಕಿ ಹರಿಯುತ್ತಿದ್ದ ಕಾಲುವೆಗೆ ಧುಮುಕಿ ತಾಯಿ-ಮಗುವನ್ನು ಕಾಪಾಡಿದ ಪೊಲೀಸ್; ವಿಡಿಯೋ ವೈರಲ್

Viral Video: ಬಟ್ಟೆ ತೊಳೆಯಲು ದೇಸಿ ವಾಶಿಂಗ್​ ಮಷೀನ್​ ಕಂಡುಹಿಡಿದ ವಿದ್ಯಾರ್ಥಿ! ವಿಡಿಯೋ ಮಿಸ್​ ಮಾಡ್ಕೊಳ್ಬೇಡಿ

TV9 Kannada

Leave a comment

Your email address will not be published. Required fields are marked *