Viral Video: ಜನಪ್ರಿಯ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ ಕ್ರಿಕೆಟಿಗನ ಪತ್ನಿ | Yuzvendra Chahal’s wife Dhanashree Verma dances to superhit Telugu song


Dhanashree Verma: ಈ ಹಿಂದೆ ಧನಶ್ರೀ ವರ್ಮಾ ಶ್ರೇಯಸ್ ಅಯ್ಯರ್, ವಿರಾಟ್ ಕೊಹ್ಲಿ, ಶಿಖರ್ ಧವನ್ ಜೊತೆ ಸೇರಿ ಡ್ಯಾನ್ಸ್ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಲ್​ಚಲ್ ಎಬ್ಬಿಸಿದ್ದರು.

ಟೀಮ್ ಇಂಡಿಯಾ (Team India) ಸ್ಪಿನ್ನರ್ ಯುಜ್ವೇಂದ್ರ ಚಹಾಲ್ (Yuzvendra Chahal) ಅವರ ಪತ್ನಿ ಧನಶ್ರೀ ವರ್ಮಾ (Dhanashree Verma) ಅವರು ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುತ್ತಾರೆ ಎಂಬುದು ಗೊತ್ತಿರುವ ವಿಷಯ. ಅಷ್ಟೇ ಅಲ್ಲದೆ ಟೀಮ್ ಇಂಡಿಯಾ ಹಾಗೂ ಐಪಿಎಲ್ ಪಂದ್ಯಗಳ ವೇಳೆ ಪತ್ನಿಯನ್ನು ಹುರಿದುಂಬಿಸಲು ಕ್ರೀಡಾಂಗಣದಲ್ಲೂ ಆಗಾಗ್ಗೆ ಕಾಣಿಸಿಕೊಳ್ಳುತ್ತಾರೆ. ಇನ್ನು ಬಿಡುವಿನ ವೇಳೆಯಲ್ಲಿ ಡ್ಯಾನ್ಸ್ ಹಾಗೂ ಇನ್ನಿತರೆ ಚಟುವಟಿಕೆಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಹೀಗೆ ಧನಶ್ರೀ ವರ್ಮಾ ಮಾಡಿದ ಡ್ಯಾನ್ಸ್​ವೊಂದು ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿಸಿದೆ.

ಇತ್ತೀಚೆಗೆ ಧನಶ್ರೀ ವರ್ಮಾ ತೆಲುಗು ಹಾಡಿಗೆ ಭರ್ಜರಿ ಹೆಜ್ಜೆಗಳನ್ನು ಹಾಕಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಟಾಲಿವುಡ್ ನಟ ನಿತಿನ್ ಹೀರೋ ಆಗಿ ನಟಿಸಿದ್ದ ಮಾಚರ್ಲ ನಿಯೋಜಕವರ್ಗಂ ಚಿತ್ರದ ಮಾಸ್​ ಬೀಟ್​ಗೆ ಧನಶ್ರೀ ಡ್ಯಾನ್ಸ್​ ಮಾಡಿದ್ದು, ಈ ಸಿನಿಮಾದಲ್ಲಿನ ‘ರಾನು ರಾನುಅಂತುನೆ ಚಿನ್ನದೋ.. ಚಿನ್ನದೋ’ ಹಾಡುಗಳಿಗೆ ಸಖತ್ ಸ್ಟೆಪ್ಸ್ ಹಾಕಿದ್ದಾರೆ.

ಚಾಹಲ್ ಪತ್ನಿಯ ಈ ಡ್ಯಾನ್ಸ್ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿದ್ದು, ನಿಮ್ಮ ಎನರ್ಜಿ  ಸೂಪರ್ ಮತ್ತು ಪವರ್ ಪ್ಯಾಕ್ಡ್ ಡ್ಯಾನ್ಸ್ ಎಂದು ಅಭಿಮಾನಿಗಳು ಕಮೆಂಟಿಸುತ್ತಿದ್ದಾರೆ. ಈ ಹಿಂದೆ ಧನಶ್ರೀ ವರ್ಮಾ ಶ್ರೇಯಸ್ ಅಯ್ಯರ್, ವಿರಾಟ್ ಕೊಹ್ಲಿ, ಶಿಖರ್ ಧವನ್ ಜೊತೆ ಸೇರಿ ಡ್ಯಾನ್ಸ್ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಲ್​ಚಲ್ ಎಬ್ಬಿಸಿದ್ದರು.

ಇದೀಗ ಮತ್ತೊಮ್ಮೆ ಸೌತ್ ಸಿನಿರಂಗದ ಸೂಪರ್ ಹಿಟ್​ ಹಾಡಿಗೆ ಮೈ ಬಳುಕಿಸುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿಸಿದ್ದಾರೆ.

TV9 Kannada


Leave a Reply

Your email address will not be published. Required fields are marked *