
ಪರ್ವತ ಕುಸಿಯುತ್ತಿರುವ ದೃಶ್ಯ
ರಾಂಬನ್ ಸುರಂಗ ಕುಸಿತದ ಸ್ಥಳದಲ್ಲಿ 10 ಜನರು ಸಿಕ್ಕಿಬಿದ್ದಿದ್ದರು. ಅದೇ ಸ್ಥಳದಲ್ಲಿ ಇಂದು ಪರ್ವತದ ಒಂದು ಭಾಗ ಕುಸಿದುಬಿದ್ದಿರುವ ಘಟನೆ ನಡೆದಿದೆ. ಇದರ ವಿಡಿಯೋ ಭಾರೀ ವೈರಲ್ ಆಗಿದೆ.
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯ ಜಮ್ಮು- ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ (Jammu- Srinagar National High Way) ನಿನ್ನೆ ನಿರ್ಮಾಣ ಹಂತದಲ್ಲಿದ್ದ ನಾಲ್ಕು ಪಥದ ಸುರಂಗದ ಒಂದು ಭಾಗವು ಕುಸಿದು ಬಿದ್ದಿತ್ತು. ರಾಂಬನ್ ಸುರಂಗ ಕುಸಿತದ ಸ್ಥಳದಲ್ಲಿ 10 ಜನರು ಸಿಕ್ಕಿಬಿದ್ದಿದ್ದರು. ಅದೇ ಸ್ಥಳದಲ್ಲಿ ಇಂದು ಪರ್ವತದ ಒಂದು ಭಾಗ ಕುಸಿದುಬಿದ್ದಿರುವ ಘಟನೆ ನಡೆದಿದೆ. ಇದರ ವಿಡಿಯೋ ಭಾರೀ ವೈರಲ್ ಆಗಿದೆ.
15ನೇ ಬೆಟಾಲಿಯನ್ ITBPನ ಸಿಬ್ಬಂದಿ ಮತ್ತು ಪಡೆಯ ಸ್ನಿಫರ್ ಡಾಗ್ ರಕ್ಷಣಾ ಕಾರ್ಯಾಚರಣೆಯಲ್ಲಿ ಸೇರಿಕೊಂಡಿದ್ದಾರೆ ಎಂದು ITBP ಹೇಳಿಕೆ ತಿಳಿಸಿದೆ. ಈ ಸುರಂಗ ಮಾರ್ಗವು ಹೊಸದಾಗಿ ಆರಂಭವಾಗಿರುವ ಯೋಜನೆಯಾಗಿದ್ದು, ಕಳೆದ ರಾತ್ರಿ 10.15ರ ಸುಮಾರಿಗೆ ಭೂಕುಸಿತ ಸಂಭವಿಸಿದೆ. ಈ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಸಿಕ್ಕಿಬಿದ್ದಿದ್ದು, ಹಲವು ಟ್ರಕ್ಗಳು, ಅಗೆಯುವ ಯಂತ್ರಗಳು ಮತ್ತು ಇತರ ವಾಹನಗಳು ಭೂಕುಸಿತದಲ್ಲಿ ಸಂಪೂರ್ಣವಾಗಿ ಹಾನಿಗೊಳಗಾಗಿವೆ.