Viral Video : ಜುಟ್ಟು ಜುಟ್ಟು ಹಿಡಿದಾಡಿಕೊಂಡು ಹೊಡೆದಾಡಿದ ಮಹಿಳೆಯರು | Two women pull hair, slap each other during fight at Nashik toll plaza


Maharashtra : ಮಹಾರಾಷ್ಟ್ರದಲ್ಲಿ ಈ ಘಟನೆ ನಡೆದಿದೆ. ಈ ಇಬ್ಬರಲ್ಲಿ ಒಬ್ಬ ಮಹಿಳೆ ಪ್ರಯಾಣಿಕರು, ಇನ್ನೊಬ್ಬರು ಟೋಲ್​ನಲ್ಲಿರುವ ಉದ್ಯೋಗಿ. ಟೋಲ್ ಶುಲ್ಕ ಪಾವತಿಸುವ ಬಗ್ಗೆ ವಿಚಾರಿಸುವಾಗ ಈ ಜಗಳ ಶುರುವಾಗಿದೆ.

Viral Video : ಜುಟ್ಟು ಜುಟ್ಟು ಹಿಡಿದಾಡಿಕೊಂಡು ಹೊಡೆದಾಡಿದ ಮಹಿಳೆಯರು

ಹೊಡೆದಾಟಕ್ಕಿಳಿದ ಮಹಿಳೆಯರು

Viral Video : ಎಂಥ ಒತ್ತಡದ ಬದುಕಲ್ಲವಾ ಇದು? ಅದರಲ್ಲೂ ಹೆಣ್ಣುಮಕ್ಕಳಿಗೆ ಇದು ಇನ್ನೂ ಕಠಿಣ. ಮನೆಯಲ್ಲಿಯೂ ಕೆಲಸ ಮಾಡು, ಕಚೇರಿಯಲ್ಲಿಯೂ ಕೆಲಸ ಮಾಡು. ಮನೆಯ ಆಗುಹೋಗುಗಳನ್ನೂ ನೋಡಿಕೋ, ಮಕ್ಕಳನ್ನೂ ನೋಡಿಕೋ. ಎಲ್ಲವನ್ನೂ ನಿಭಾಯಿಸುವ ಹೆಣ್ಣುಮಕ್ಕಳಿಗೆ, ನೀನು ದಣಿದಿದ್ದೀಯಾ ಆರಾಮ ತಗೋ ಎಂದು ಯಾರಾದರೂ ಹೇಳುತ್ತಾರಾ? ನಿಭಾಯಿಸಿದರೂ ಅದೆಷ್ಟು ಮನೆಮಂದಿ ಆಕೆಯೊಂದಿಗೆ ಪ್ರೀತಿ, ಗೌರವದಿಂದ ನಡೆದುಕೊಳ್ಳುತ್ತಾರೆ? ಎಲ್ಲಿಯೂ ಒಂದು ಸಾಂತ್ವನ ಮತ್ತು ಸಾಥ್​ ಕೊಡುವ ವಾತಾವರಣ ಇಲ್ಲದೇ ಇದ್ದಾಗಲೇ ಹೀಗೆ ತಾಳ್ಮೆ ಕಳೆದುಕೊಳ್ಳುವುದು.

ಎಂಥ ಸಮಸ್ಯೆಯನ್ನೂ ಸರಳವಾಗಿ ಮಾತನಾಡಿ ಪರಿಹರಿಸಿಕೊಳ್ಳುವ ಸಾಧ್ಯತೆ ಇದ್ದೇ ಇರುತ್ತದೆ. ಅದರಲ್ಲೂ ಸಾರ್ವಜನಿಕ ಸ್ಥಳಗಳಲ್ಲಿ ವ್ಯವಹರಿಸುವಾಗ ಹೆಚ್ಚು ಪ್ರಜ್ಞೆಯಿಂದ ನಡೆದುಕೊಳ್ಳಬೇಕಾಗುತ್ತದೆ. ಪ್ರಚೋದನೆಗಳು ಎಲ್ಲಿಂದ ಯಾರಿಂದ ಯಾವಾಗ ಉದ್ಭವಿಸಿರುತ್ತವೆಯೋ ಗೊತ್ತಿಲ್ಲ. ಆದರೆ ಅದು ತಲೆಯಲ್ಲಿ ಕೊರೆಯುತ್ತಲೇ ಇರುತ್ತದೆ. ಭಗ್ಗನೆ ಹೊತ್ತಿ ಉರಿಯಲು ಅವಕಾಶ ಹುಡುಕುತ್ತಿರುತ್ತದೆ. ಆಗ ಹೀಗೆ ತಾಳ್ಮೆಯ ಕಟ್ಟೆ ಒಡೆದು ಹಿಂಸಾತ್ಮಕ ರೂಪಕ್ಕೆ ತಿರುಗುತ್ತದೆ. ಇದನ್ನು ನೋಡಿದಾಗ ನಿಜಕ್ಕೂ ಸಂಕಟವಾಗದೇ ಇರಲಾಗದು.

ಮಹಾರಾಷ್ಟ್ರದ ನಾಸಿಕ್​ನ ಪಿಂಪಲ್‌ಗಾಂವ್ ಟೋಲ್ ಪ್ಲಾಝಾದಲ್ಲಿ ಈ ಮಹಿಳೆಯರಿಬ್ಬರು ತೀವ್ರವಾಗಿ ಜಗಳಕ್ಕಿಳಿದಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪರಸ್ಪರರು ಕೂದಲು ಹಿಡಿದು, ತಳ್ಳಾಡಿಕೊಂಡು, ಹೊಡೆದಾಡಿಕೊಂಡು ಜಗಳವಾಡುತ್ತಿದ್ದರೆ ಸುತ್ತಲಿನವರು ಮೊಬೈಲ್​ನಲ್ಲಿ ವಿಡಿಯೋ ಮಾಡುತ್ತ ನಿಂತಿದ್ದಾರೆ! ಸ್ವಲ್ಪ ಹೊತ್ತಿನ ಮೇಲೆ ಬಿಡಿಸಬೇಕು ಎನ್ನಿಸಿದೆಯಲ್ಲ ಸದ್ಯ.

ಬುಧವಾರ ಈ ಘಟನೆ ನಡೆದಿದೆ. ಈ ಇಬ್ಬರಲ್ಲಿ ಒಬ್ಬ ಮಹಿಳೆ ಪ್ರಯಾಣಿಕರು, ಇನ್ನೊಬ್ಬರು ಟೋಲ್​ನಲ್ಲಿರುವ ಉದ್ಯೋಗಿ. ಟೋಲ್ ಶುಲ್ಕ ಪಾವತಿಸುವ ಬಗ್ಗೆ ವಿಚಾರಿಸುವಾಗ ಈ ಜಗಳ ಶುರುವಾಗಿದೆ. ಒಬ್ಬ ಹೆಣ್ಣುಮಗಳು ಸೀರೆಯನ್ನೇ ಹರಿದು ಹಾಕುವುದಾಗಿ ಬೆದರಿಸುತ್ತಿದ್ದಾರೆ. ಮರಾಠಿಯಲ್ಲಿ ಇಬ್ಬರೂ ಬೈದಾಡಿಕೊಳ್ಳುತ್ತ ಉಗ್ರ ಜಗಳಕ್ಕಿಳಿದಿದ್ದಾರೆ. ಈ ಘಟನೆಯನ್ನು ಟೈಮ್ಸ್​ ಆಫ್ ಇಂಡಿಯಾ ವರದಿ ಮಾಡಿದ್ದು, ಪೊಲೀಸರು ಈ ಪ್ರಕರಣದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

40,000 ಕ್ಕೂ ಹೆಚ್ಚು ಜನರು ಈ ವಿಡಿಯೋ ವೀಕ್ಷಿಸಿದ್ದಾರೆ. ಈ ಭಯಂಕರ ಜಗಳ ನೋಡಿ ನೆಟ್ಟಿಗರು ಬೆಚ್ಚಿಬಿದ್ದು ರೀಟ್ವೀಟ್ ಮಾಡುತ್ತಲೇ ಇದ್ದಾರೆ.

TV9 Kannada


Leave a Reply

Your email address will not be published.