Viral Video: ಟ್ರಾಫಿಕ್ ಕ್ಯಾಮೆರಾ ಮುಂದೆ ಬಂದು ಪೋಸ್ ಕೊಟ್ಟ ಮುದ್ದಾದ ಗಿಳಿ; ವಿಡಿಯೊ ವೈರಲ್ | Viral Video bird pose infront of traffic camera video goes viral


Viral Video: ಟ್ರಾಫಿಕ್ ಕ್ಯಾಮೆರಾ ಮುಂದೆ ಬಂದು ಪೋಸ್ ಕೊಟ್ಟ ಮುದ್ದಾದ ಗಿಳಿ; ವಿಡಿಯೊ ವೈರಲ್

ಟ್ರಾಫಿಕ್ ಕ್ಯಾಮೆರಾ ಮುಂದೆ ಬಂದು ಪೋಸ್ ಕೊಟ್ಟ ಮುದ್ದಾದ ಗಿಳಿ

ಸಾಮಾಜಿಕ ಜಾಲತಾಣದಲ್ಲಿ ತಮಾಷೆಯ ವಿಡಿಯೊಗಳು ಹೆಚ್ಚು ವೈರಲ್ ಆಗುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೊದಲ್ಲಿ ಮುದ್ದಾದ ಗಿಳಿ ಟ್ರಾಫಿಕ್ ಕ್ಯಾಮೆರಾ ಮುಂದೆ ಬಂದು ಪೋಸ್ ಕೊಡುತ್ತಿರುವುದನ್ನು ನೋಡಬಹುದು. ವಿಡಿಯೊವನ್ನು ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳಲಾಗಿದ್ದು ದೃಶ್ಯ ಫುಲ್ ವೈರಲ್ ಆಗಿದೆ. ವಿಡಿಯೊ ಇದುವರೆಗೆ ಸುಮಾರು 1,300 ಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಗಳಿಸಿಕೊಂಡಿದೆ.

ಈ ಘಟನೆ ಬ್ರೆಜಿಲ್​ನಲ್ಲಿ ನಡೆದಿದೆ. ಟ್ರಾಫಿಕ್ ಕ್ಯಾಮೆರಾದ ಎದುರು ಮುದ್ದಾದ ಗಿಳಿಯು ಹಾರಾಡುತ್ತಿದೆ. ಕ್ಯಾಮೆರಾ ಬಳಿ ಬಂದು ಇಣುಕಿ ಇಣುಕಿ ನೋಡುತ್ತಿದೆ. 13 ಸೆಕೆಂಡುಗಳಿರುವ ವಿಡಿಯೊದಲ್ಲಿ ಮುದ್ದಾದ ಗಿಳಿ ಕ್ಯಾಮೆರಾವನ್ನು ನೋಡುತ್ತಿದ್ದು ದೃಶ್ಯ ರೆಕಾರ್ಡ್ ಆಗಿದೆ. ತಮಾಷೆಯೆಂದರೆ, ಗಿಳಿಯ ದೊಡ್ಡದಾದ ಕಣ್ಣುಗಳು ಕಾಣಿಸುತ್ತಿವೆ. ಕ್ಯಾಮೆರಾ ಒಳಗೆ ಏನಿದೆ ಎಂದು ಕಂಡು ಹಿಡಿಯಲು ಗಿಳಿಯು ಪ್ರಯತ್ನಿಸುತ್ತಿದೆ.

ಈ ಹಿಂದೆ ಕ್ಯಾಮೆರಾವನ್ನು ಹೊತ್ತೊಯ್ದ ಗಿಳಿಯು ಊರೆಲ್ಲಾ ಸುತ್ತಾಡಿಕೊಂಡು ಬಂದ ದೃಶ್ಯ ಕ್ಯಾಮೆರಾದಲ್ಲಿ ರೆಕಾರ್ಟ್​ ಆಗಿತ್ತು. ಆ ವಿಡಿಯೊ ಫುಲ್​ ವೈರಲ್​ ಆಗಿದ್ದು ಮುದ್ದಾದ ಗಿಳಿ ನೋಡು ನೆಟ್ಟಿಗರು ಸಂತೋಷ ಪಟ್ಟಿದ್ದರು. ಇದೀಗ ಕ್ಯಾಮೆರಾದ ಮುಂದೆ ಬಂದು ಇಣುಕಿ ನೋಡುತ್ತಿರುವ ಮುದ್ದಾದ ಗಿಳಿಯ ವಿಡಿಯೊ ಫುಲ್​ ವೈರಲ್​ ಆಗಿದೆ. ಅಂದವಾದ ಗಿಳಿಯನ್ನು ನೆಟ್ಟಿಗರು ಇಷ್ಟಪಟ್ಟಿದ್ದಾರೆ.

ಇದನ್ನೂ ಓದಿ:

Viral Video: ವೇದಿಕೆಯ ಮೇಲೆ ವಧು ವರರ ಜಬರ್ದಸ್ತ್ ಡಾನ್ಸ್; ವಿಡಿಯೊ ನೋಡಿದ್ರೆ ಫಿದಾ ಆಗ್ತೀರಾ

Viral Video: ಅಮೆಜಾನ್ ವ್ಯಾನ್​ನಿಂದ ರಹಸ್ಯವಾಗಿ ಹೊರಬಂದ ಯುವತಿಯ ವಿಡಿಯೊ ವೈರಲ್; ಚಾಲಕನನ್ನು ಕೆಲಸದಿಂದ ವಜಾಗೊಳಿಸಿದ ಕಂಪನಿ

TV9 Kannada


Leave a Reply

Your email address will not be published. Required fields are marked *