Viral Video : ಢೋಲು ನುಡಿಸಾಣಿಕೆಗೆ ಮಾರುಹೋದ ಪಾಪ್ ಸ್ಟಾರ್ ಜಸ್ಟಿನ್ ಬೈಬರ್ | Justin Bieber’s Unbelievable Reaction to Indian Man Playing Dhol at Jagran Cracks up The Internet


Justin Bieber : ‘ಮಾತಾ ಕಾ ಜಾಗ್ರತ್’ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಢೋಲು ನುಡಿಸುತ್ತಿರುವ ವ್ಯಕ್ತಿಯೊಬ್ಬರ ವಿಡಿಯೋವನ್ನು ಜಸ್ಟಿನ್, ತನ್ನ ಸ್ನೇಹಿತ ಡ್ರಮ್ ಕಲಾವಿದ ಡೆವೊನ್ ಟೇಲರ್​ ಹಂಚಿಕೊಂಡ ಪೋಸ್ಟ್​ನಲ್ಲಿ ನೋಡಿ ಅಚ್ಚರಿಗೊಂಡಿದ್ದಾರೆ.

Viral Video : ಢೋಲು ನುಡಿಸಾಣಿಕೆಗೆ ಮಾರುಹೋದ ಪಾಪ್ ಸ್ಟಾರ್ ಜಸ್ಟಿನ್ ಬೈಬರ್

ಮಾತಾ ಕಾ ಜಾಗ್ರತ ಕಾರ್ಯಕ್ರಮದಲ್ಲಿ ಢೋಲು ನುಡಿಸುತ್ತಿರುವ ವ್ಯಕ್ತಿ

ನಮ್ಮ ಕಿವಿಗಳು ನಾದತರಂಗಗಳಿಂದ ಸಂಸ್ಕಾರಗೊಂಡಂಥವು. ಹುಟ್ಟಿನಿಂದ ಚಟ್ಟದವರೆಗೂ ಶಬ್ದವು ನಮ್ಮನ್ನು ಅನೇಕ ರೀತಿಯಲ್ಲಿ ಸಂಚಲನಕ್ಕೀಡು ಮಾಡುತ್ತದೆ. ಸ್ತಂಭೀಭೂತರನ್ನಾಗಿಸುತ್ತದೆ. ಈ ವಿಡಿಯೋವನ್ನು ಗಮನಿಸಿ, ಇದರಲ್ಲಿ ಭಾವಪರವಶರಾಗಿ ವ್ಯಕ್ತಿಯೊಬ್ಬರು ಢೋಲು ನುಡಿಸುತ್ತಿದ್ದಾರೆ. ಭಾರತದ ಬಹುಮುಖಿ ಸಂಸ್ಕೃತಿಗೆ ಮಾರುಹೋಗದವರು ಯಾರಿದ್ದಾರೆ? ಅಂತೆಯೇ ಭಾರತೀಯರೊಬ್ಬರು ಢೋಲು ನುಡಿಸುತ್ತಿರುವ ವಿಡಿಯೋವನ್ನು ಕೆನಡಿಯನ್ ಗಾಯಕ ಜಸ್ಟಿನ್ ಬೈಬರ್ (Justin Bieber) ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದೀಗ ವೈರಲ್ ಆಗಿದೆ. ‘ಮಾತಾ ಕಾ ಜಾಗ್ರತ್’ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಢೋಲು ನುಡಿಸುತ್ತಿರುವ ವ್ಯಕ್ತಿಯೊಬ್ಬರ ವಿಡಿಯೋವನ್ನು ಜಸ್ಟಿನ್, ತನ್ನ ಸ್ನೇಹಿತ ಡ್ರಮ್ ಕಲಾವಿದ ಡೆವೊನ್ ಟೇಲರ್​ ಹಂಚಿಕೊಂಡ ಪೋಸ್ಟ್​ನಲ್ಲಿ ನೋಡಿ ಅಚ್ಚರಿಗೊಂಡಿದ್ದಾರೆ. ಈ ವ್ಯಕ್ತಿ ತನ್ಮಯನಾಗಿ ಡೋಲು ನುಡಿಸುತ್ತಿದ್ದರೆ ಉಳಿದವರು ಪ್ರಾರ್ಥನೆಯಲ್ಲಿ ಮುಳುಗಿದ್ದಾರೆ.

ವಿಡಿಯೋದಲ್ಲಿ ಅಲಂಕರಿಸಿದ ತಾಯಿ ದುರ್ಗೆ, ಹನುಮಂತನ ಮೂರ್ತಿಗಳನ್ನು ಕಾಣಬಹುದು. ಅಲ್ಲಿರುವ ಜನರು ಢೋಲು ನುಡಿಸುತ್ತಿರುವವರ ಶಕ್ತಿ ಮತ್ತು ಉತ್ಸಾಹದಿಂದ ಮೂಕವಿಸ್ಮಿತರಾಗಿ ಪ್ರಾರ್ಥನೆಯಲ್ಲಿ ಮುಳುಗಿರುವುದನ್ನು ಕಾಣಬಹುದು. ಈ ವಿಡಿಯೋ ರಂಗೀಲೆ ಹರ್ಯಾನ್ವಿ ಎಂಬ ಪೇಜ್​ನಲ್ಲಿ ಕಂಡುಬಂದಿದೆ. ಸುಮಾರು 20.3 ಮಿಲಿಯನ್​ ವೀಕ್ಷಣೆ, 8,60,000 ಲೈಕ್ಸ್​ ಮತ್ತು 11,09,000 ಸಾವಿರ ಕಮೆಂಟ್​ಗಳನ್ನು ಹೊಂದಿದೆ.

TV9 Kannada


Leave a Reply

Your email address will not be published. Required fields are marked *