Viral Video: ದಾಖಲೆಯ ಮಳೆಯ ನಂತರ ಬೆಚ್ಚಿಬೀಳಿಸುವಂತೆ ಗರ್ಜಿಸಿದ ಜಲಪಾತ, ಸೇತುವೆ ಮೇಲಿಂದ ಚಿಮ್ಮಿದ ನೀರು! | Viral Video meghalaya roaring waterfall after record rain in mawsynram


Viral Video: ದಾಖಲೆಯ ಮಳೆಯ ನಂತರ ಬೆಚ್ಚಿಬೀಳಿಸುವಂತೆ ಗರ್ಜಿಸಿದ ಜಲಪಾತ, ಸೇತುವೆ ಮೇಲಿಂದ ಚಿಮ್ಮಿದ ನೀರು!

ಭೋರ್ಗರೆದ ಜಲಪಾತ

ಮೇಘಾಲಯ ಮೌಸಿನ್ರಾಮ್‌ನಲ್ಲಿ ದಾಖಲೆಯ ಮಳೆಯ ನಂತರ ಬೆಚ್ಚಿಬೀಳಿಸುವಂತೆ ಜಲಪಾತವೊಂದು ಭೋರ್ಗರೆದಿದೆ. ಇದರ ವಿಡಿಯೋ ವೈರಲ್ ಆಗುತ್ತಿದ್ದು, ಈ ಸುದ್ದಿ ಮೂಲಕ ವಿಡಿಯೋ ವೀಕ್ಷಣೆ ಮಾಡಿ.

ಮೇಘಾಲಯ ಮೌಸಿನ್ರಾಮ್‌ (Mawsynram)ನಲ್ಲಿ ದಾಖಲೆಯ ಮಳೆಯ ನಂತರ ಬೆಚ್ಚಿಬೀಳಿಸುವಂತೆ ಗರ್ಜಿಸುವ ಜಲಪಾತ (Waterfall)ದ ವಿಡಿಯೋ ವೈರಲ್ (Video Viral) ಆಗುತ್ತಿದೆ. ಒಂದು ವಾರದಿಂದ ಈಶಾನ್ಯ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಜೂನ್ 16 ರಂದು ಬೆಳಿಗ್ಗೆ ಆರಂಭವಾದ ಮಳೆ ನಿರಂತರವಾಗಿ 24 ಗಂಟೆಗಳ ಕಾಲ ಧಾರಾಕಾರವಾಗಿ ಸುರಿದಿದೆ. ಈ ಅವಧಿಯಲ್ಲಿ ಭೂಮಿಯ ಮೇಲಿನ ಅತ್ಯಂತ ತೇವಭರಿತ ಸ್ಥಳವಾದ ಮೇಘಾಲಯದ ಮೌಸಿನ್​ರಾಮ್​ನಲ್ಲಿ ದಾಖಲೆಯ 100 ಸೆಂ.ಮೀ ಮಳೆಯಾಗಿದ್ದು, ಜಲಪಾತವೊಂದು ಭೋರ್ಗರೆದಿದೆ.

ಮೌಸಿನ್​ರಾಮ್​ ಪಟ್ಟಣದಲ್ಲಿ ಸುರಿದ ಭಾರಿ ಮಳೆಗೆ ಜಲಪಾತ ಗರ್ಜಿಸಲು ಪ್ರಾರಂಭಿಸಿದ್ದು, ನೀರಿನ ರಭಸ ಎಷ್ಟಿತ್ತೆಂದರೆ ಸೇತುವೆ ಮೇಲಿನಿಂದ ನೀರು ಚಿಮ್ಮಿದೆ. ಜಲಪಾತದ ಭೂರ್ಗರೆತ ಹಾಗೂ ಸೇತುವೆ ಮೇಲಿಂದ ನೀರು ಚಿಮ್ಮುವ ದೃಶ್ಯವನ್ನು ವಾಹನ ಸವಾರರು ಸೆರೆಹಿಡಿದಿದ್ದಾರೆ.

TV9 Kannada


Leave a Reply

Your email address will not be published.