Viral Video: ದೈತ್ಯ ಹೆಬ್ಬಾವು ಮರ ಏರುತ್ತಿರುವ ಭಯಾನಕ ದೃಶ್ಯ ವೈರಲ್; ವಿಡಿಯೊ ನೋಡಿ | Gain python climbs tree watch viral video


Viral Video: ದೈತ್ಯ ಹೆಬ್ಬಾವು ಮರ ಏರುತ್ತಿರುವ ಭಯಾನಕ ದೃಶ್ಯ ವೈರಲ್; ವಿಡಿಯೊ ನೋಡಿ

ದೈತ್ಯ ಹೆಬ್ಬಾವು

ಹೆಬ್ಬಾವೊಂದು ಮರ ಹತ್ತುವ ಹಳೆಯ ವಿಡಿಯೊವೊಂದು ಇದೀಗ ಮತ್ತೆ ವೈರಲ್ ಆಗಿದೆ. ಉದ್ದವಾದ ದೈತ್ಯ ಹಾವು ಮರ ಏರುತ್ತಿರುವ ದೃಶ್ಯ ಭಯಾನಕವಾಗಿದೆ. ಆಗ್ನೇಯ ಏಷ್ಯಾದ ಕಡೆಗೆ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೊದಲ್ಲಿ ಗಮನಿಸುವಂತೆ ಹಾವು ರೆಟಿಕ್ಯುಲೇಡ್ ಹೆಬ್ಬಾವು ಆಗಿದ್ದು, ಇದು ವಿಶ್ವದ ಅತ್ಯಂತ ಅಪಾಯಕಾರಿ ಹಾವುಗಳಲ್ಲಿ ಒಂದಾಗಿದೆ. ಇದು ಸುಮಾರು 75 ಕೆಜಿ ತೂಕವುಳ್ಳ ಹಾವಾಗಿದೆ.

ಇಷ್ಟು ದೈತ್ಯ ಹಾವು ಮರ ಹತ್ತುವುದು ಕಷ್ಟಕರವಾಗಿದ್ದರೂ ತಂತ್ರಗಳನ್ನು ಹೂಡುತ್ತಾ ಹೆಬ್ಬಾವು ಮರ ಹತ್ತುತ್ತಿದೆ. ವಿಡಿಯೊದಲ್ಲಿ ಬೃಹತ್ ಹೆಬ್ಬಾವು ಎತ್ತರದ ಮರವನ್ನು ಏರುತ್ತಿದೆ. ಮರದ ಸುತ್ತ ಸುತ್ತಿಕೊಂಡಿರುವ ಹಾವು ಹಂತ ಹಂತವಾಗಿ ಮರ ಏರುತ್ತಿರುವುದನ್ನು ದೃಶ್ಯದಲ್ಲಿ ನೋಡಬಹುದು. ವಿಡಿಯೊ ಭಯಾನಕವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ವಿಡಿಯೊಗಳು ಹರಿದಾಡುತ್ತವೆ. ಅವುಗಳಲ್ಲಿ ಕೆಲವು ತಮಾಷೆಯಾಗಿದ್ದು ಹೊಟ್ಟೆ ಹುಣ್ಣಾಗಿಸುವಷ್ಟು ನಗು ತರಿಸಿದರೆ ಇನ್ನು ಕೆಲವು ಭಯಾನಕವಾಗಿರುತ್ತವೆ. ಹಾವಿನ ಹೆಸರು ಕೇಳಿದಾಕ್ಷಣವೇ ಭಯವಾಗುವುದು ಸತ್ಯ. ಅದರಲ್ಲಿಯೂ ದೈತ್ಯ ಹೆಬ್ಬಾವು ಮರವೇರುತ್ತಿರುವ ದೃಶ್ಯ ಭಯಾನಕವಾಗಿರುವುದಂತೂ ಸತ್ಯ. ಈ ವಿಡಿಯೊ ಸಕತ್​ ವೈರಲ್​ ಆಗಿದೆ.

ಇದನ್ನೂ ಓದಿ:

Viral Video: ಟ್ರಾಫಿಕ್ ಕ್ಯಾಮೆರಾ ಮುಂದೆ ಬಂದು ಪೋಸ್ ಕೊಟ್ಟ ಮುದ್ದಾದ ಗಿಳಿ; ವಿಡಿಯೊ ವೈರಲ್

Viral Video: ಚಾಕೊಲೇಟ್ ಬ್ರೌನಿ ವಿತ್​ ಪಾನ್! ಈ ವಿಲಕ್ಷಣ ಆಹಾರ ಸಂಯೋಜನೆ ಕಂಡು ಏನೇನ್ ನೋಡ್ಬೇಕಪ್ಪಾ ಎಂದ ನೆಟ್ಟಿಗರು

TV9 Kannada


Leave a Reply

Your email address will not be published. Required fields are marked *