Viral Video : ‘ನಮ್ಮ ಗ್ರಾಮಭಾರತದ ಅವಸ್ಥೆ’ ವಿದ್ಯುತ್ ಬದಲಾಗಿ ಎತ್ತುಗಳ ಬಳಕೆ | IAS officer shares clip of jugaad irrigation technique involving farm animals Internet is not happy


Jugaad : ‘ಗ್ರಾಮಭಾರತದ ಅನ್ವೇಷಣೆ‘ ಎಂದು ಐಎಎಸ್​ ಅಧಿಕಾರಿ ಶರಣ್ ಅವನೀಶ್ ಈ ವಿಡಿಯೋ ಟ್ವೀಟ್ ಮಾಡಿದ್ದಾರೆ. ಇದು ಪ್ರಾಣಿಹಿಂಸೆಯನ್ನು ಉತ್ತೇಜಿಸುವಂತಿದೆ ಎಂದಿದ್ದಾರೆ ನೆಟ್ಟಿಗರು.

Viral Video : ‘ನಮ್ಮ ಗ್ರಾಮಭಾರತದ ಅವಸ್ಥೆ’ ವಿದ್ಯುತ್ ಬದಲಾಗಿ ಎತ್ತುಗಳ ಬಳಕೆ

ಟ್ರೆಡ್​ಮಿಲ್​ನಂತಹ ಯಂತ್ರದೊಂದಿಗೆ ಎತ್ತು

Viral Video : ಈ ವಿಡಿಯೋದಲ್ಲಿ ಟ್ರೆಡ್​ಮಿಲ್​ನಂತಹ ಯಂತ್ರದ ಮೇಲೆ ಎತ್ತು ಸತತವಾಗಿ ನಡೆಯುತ್ತಿದೆ. ಇದಕ್ಕೆ ನೀರಿನ ಪಂಪ್ ಅನ್ನು ಜೋಡಿಸಲಾಗಿದೆ. ಎತ್ತು ಉತ್ಪಾದಿಸುವ ಶಕ್ತಿಯಿಂದ ಹೊಲಕ್ಕೆ ನೀರು ಸಿಂಪರಣೆಗೊಳ್ಳುತ್ತದೆ. ಈ ಚಮತ್ಕಾರಿಕ ದೃಶ್ಯ ಇಲ್ಲಿಗೇ ಮುಗಿಯುವುದಿಲ್ಲ. ಕ್ಯಾಮೆರಾ ಪ್ಯಾನ್ ಆಗುತ್ತಿದ್ದಂತೆ ಹೀಗೆ ಸಾಲಾಗಿಟ್ಟ ಟ್ರೆಡ್​ಮಿಲ್​ನಂಥ ಯಂತ್ರಗಳ ಮೇಲೆ ಮತ್ತಷ್ಟು ಎತ್ತುಗಳು ನಡೆಯುತ್ತಿರುತ್ತಲೇ ಇರುತ್ತವೆ. ಈ ವಿಡಿಯೋ ಅನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಾಗಿದೆ. ನೋಡಿದ ತಕ್ಷಣ ಭಾರತೀಯರು ಇಂಥ ತಂತ್ರಕೌಶಲಗಳನ್ನು ರೂಪಿಸುವಲ್ಲಿ ಸದಾ ಮುಂದು ಎಂದು ಅಚ್ಚರಿ ಉಂಟಾಗುತ್ತದೆ.

‘ಗ್ರಾಮಭಾರತದ ಅನ್ವೇಷಣೆ’ ಅದ್ಭುತ! ಎಂದು ಈ ವಿಡಿಯೋಗೆ ಶೀರ್ಷಿಕೆ ಕೊಟ್ಟು ಐಎಎಸ್​ ಅಧಿಕಾರಿ ಅವನೀಶ್ ಶರಣ್ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ ನಿಜ. ಆದರೆ ನೆಟ್ಟಿಗರು, ಈ ತಂತ್ರದ ಮೂಲಕ ಪ್ರಾಣಿಹಿಂಸೆಯನ್ನು ಬೆಂಬಲಿಸಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ. ವಿದ್ಯುತ್ ಬದಲಾಗಿ ಪ್ರಾಣಿಗಳನ್ನು ಬಳಸಿಕೊಂಡಿರುವುದರ ಬಗ್ಗೆ ತೀವ್ರವಾಗಿ ಟೀಕಿಸಿದ್ದಾರೆ. ಈ ವಿಡಿಯೋ ಅನ್ನು 52,000 ಜನರು ವೀಕ್ಷಿಸಿದ್ದಾರೆ.

ಮತ್ತಷ್ಟು ವೈರಲ್​ ವಿಡಿಯೋಗಾಗಲಿ ಕ್ಲಿಕ್ ಮಾಡಿ 

TV9 Kannada


Leave a Reply

Your email address will not be published.