Viral Video: ನಾನಾ ನೀನಾ ನೋಡೇ ಬಿಡೋಣ; ಪರಸ್ಪರ ಗುದ್ದಾಡಿಕೊಂಡ ಜಿಂಕೆಗಳು | Viral Video Two deers fighting video goes viral


ಎರಡು ಜಿಂಕೆಗಳು ಮೇಯುತ್ತಿರುವಾಗಲೇ ನಾನ ನೀನಾ ನೋಡೇ ಬಿಡೋಣ ಎಂದು ಪರಸ್ಪರ ಗುದ್ದಾಡಿಕೊಂಡಿವೆ. ಇದರ ವಿಡಿಯೋ ವೈರಲ್ ಆಗುತ್ತಿದೆ.

Viral Video: ನಾನಾ ನೀನಾ ನೋಡೇ ಬಿಡೋಣ; ಪರಸ್ಪರ ಗುದ್ದಾಡಿಕೊಂಡ ಜಿಂಕೆಗಳು

ಪರಸ್ಪರ ಹೊಡೆದಾಡಿಕೊಂಡ ಎರಡು ಜಿಂಕೆಗಳು

ಭೂಮಿಯ ಮೇಲಿನ ಅತ್ಯಂತ ಶಾಂತಿಯುತ ಪ್ರಾಣಿಗಳಲ್ಲಿ ಜಿಂಕೆಗಳು ಒಂದಾಗಿವೆ. ಇವುಗಳು ವಾಸ್ತವವಾಗಿ ಶಾಂತ ಮತ್ತು ಸೌಮ್ಯ ಪ್ರಾಣಿಗಳಿಗೆ ಹೆಸರುವಾಸಿಯಾಗಿದೆ. ಯಾರ ತಂಟೆಗೂ ಹೋಗದೆ ತನ್ನಷ್ಟಕ್ಕೆ ತಾನಿದ್ದು ಹೊಟ್ಟೆ ತುಂಬಿಸಿಕೊಳ್ಳುವ ಈ ಪ್ರಾಣಿಗಳು ಪರಸ್ಪರ ಹೊಡೆದಾಡಿಕೊಳ್ಳುವುದನ್ನು ನೋಡಿದರೆ ಅಚ್ಚರಿಯಾಗದೆ ಇರುತ್ತದೆಯೇ? ಇಂತಹ ಒಂದು ಅಪರೂಪದ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದು, ಸದ್ಯ ವೈರಲ್ ಪಡೆದುಕೊಂಡಿದೆ. ವೈರಲ್ ವಿಡಿಯೋ (Viral Video)ದಲ್ಲಿ, ಮೂರ್ನಾಲ್ಕು ಜಿಂಕೆಗಳು ವಿಶಾಲವಾದ ಮೈದಾನದಲ್ಲಿ ಮೇಯುತ್ತಿರುತ್ತವೆ. ಈ ವೇಳೆ ಎರಡು ಜಿಂಕೆಗಳು ತನ್ನ ಹಿಂಬದಿ ಕಾಲುಗಳ ಮೇಲೆ ನಿಂತು ಮುಂಭಾಗದ ಕಾಲುಗಳಿಂದ ಪರಸ್ಪರ ಹೊಡೆದಾಡಿಕೊಳ್ಳುವುದನ್ನು ಕಾಣಬಹುದು. ವಿಡಿಯೋ ನೋಡಿದ ನೆಟ್ಟಿಗರು ಜಿಂಕೆಗಳ ಜಗಳವನ್ನು ಇಬ್ಬರು ಸ್ನೇಹಿತರು ಒಂದೇ ಗೆಳತಿಯನ್ನು ಬಯಸಿದಾಗ ಮಾಡುವ ಜಗಳಕ್ಕೆ ಹೋಲಿಕೆ ಮಾಡಿದ್ದಾರೆ.

ಐಎಫ್‌ಎಸ್ ಅಧಿಕಾರಿ ಸುಶಾಂತ ನಂದಾ ಅವರು ಇತ್ತೀಚೆಗೆ ಟ್ವಿಟರ್‌ನಲ್ಲಿ ಎರಡು ಜಿಂಕೆಗಳು ಪರಸ್ಪರ ಜಗಳವಾಡುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. “ಡೀರ್ ಬಾಕ್ಸಿಂಗ್” ಎಂದು ಶೀರ್ಷಿಕೆ ನೀಡಿದ್ದಾರೆ. ಸದ್ಯ ಈ ವಿಡಿಯೋ 1.18 ಲಕ್ಷಕ್ಕೂ ಅಧಿಕ ವೀಕ್ಷಣೆಗಳೊಂದಿಗೆ ವೈರಲ್ ಪಡೆದುಕೊಂಡಿದ್ದು, 4 ಸಾವಿರಕ್ಕೂ ಹೆಚ್ಚು ಲೈಕ್​ಗಳು ಬಂದಿವೆ.

ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ನೆಟ್ಟಿಗರೊಬ್ಬರು ಹಾಸ್ಯವಾಗಿ ಪ್ರತಿಕ್ರಿಯಿಸಿ, “ಇಬ್ಬರು ಉತ್ತಮ ಸ್ನೇಹಿತರು ಒಂದೇ ಗೆಳತಿಯನ್ನು ಬಯಸಿದಾಗ” ಎಂದು ಹೇಳಿದ್ದಾರೆ. ಇನ್ನೊಬ್ಬರು, “ಇದು ಕಾಂಗರೂಗಳ ಜಗಳದಂತೆ ಕಾಣುತ್ತದೆ” ಎಂದಿದ್ದಾರೆ. ಮತ್ತೊಬ್ಬರು ಪ್ರತಿಕ್ರಿಯಿಸಿ, “ಇದು ಉಲ್ಲಾಸಕರವಾಗಿದೆ” ಎಂದಿದ್ದಾರೆ. ಮಗದೊಬ್ಬರು ಇಬ್ಬರು ಯುವತಿಯರು ಹೊಡೆದಾಡಿಕೊಳ್ಳುವ ಜಿಫ್ ಅನ್ನು ಹಂಚಿಕೊಂಡು “ಅದೇ ಶಕ್ತಿ” ಎಂದು ಹೇಳಿಕೊಂಡಿದ್ದಾರೆ.

ಮತ್ತಷ್ಟು ವೈಲ್ ವಿಡಿಯೋಗಳನ್ನು ವೀಕ್ಷಣೆ ಮಾಡಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published.