Viral Video: ನಿರೂಪಕಿಯ ಪ್ರಶ್ನೆಗೆ ನೇರ ಪ್ರಸಾರದಲ್ಲೇ ಎಂಜಲು ಉಗುಳಿದ ಪಾಕ್ ಮಾಜಿ ಸಚಿವ; ವಿಡಿಯೋ ವೈರಲ್ | Viral Video: Former Pakistan Minister Sheikh Rasheed Ahmad spits on live TV during debate Kannada News


Pakistan News: ಟಿವಿ ನಿರೂಪಕಿ ಕೇಳಿದ ಪ್ರಶ್ನೆಗೆ ಪಾಕಿಸ್ತಾನದ ಸಚಿವ ರಾಣಾ ಸನಾವುಲ್ಲಾ ಬಗ್ಗೆ ಮಾತನಾಡುವಾಗ ಶೇಖ್ ರಶೀದ್ ಅಹ್ಮದ್ ನೇರ ಪ್ರಸಾರದ ವೇಳೆ ಉಗುಳಿದ್ದಾರೆ.

Viral Video: ನಿರೂಪಕಿಯ ಪ್ರಶ್ನೆಗೆ ನೇರ ಪ್ರಸಾರದಲ್ಲೇ ಎಂಜಲು ಉಗುಳಿದ ಪಾಕ್ ಮಾಜಿ ಸಚಿವ; ವಿಡಿಯೋ ವೈರಲ್

ಶೇಖ್ ರಶೀದ್ ಅಹ್ಮದ್

Image Credit source: times now

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಸಚಿವ ಶೇಖ್ ರಶೀದ್ ಅಹ್ಮದ್ (Sheikh Rasheed Ahmad) ಟಿವಿ ಚರ್ಚೆಯ ನೇರ ಪ್ರಸಾರದ ವೇಳೆ ಕ್ಯಾಮೆರಾದ ಎದುರು ಉಗುಳಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ಟಿವಿ ನಿರೂಪಕಿ ಕೇಳಿದ ಪ್ರಶ್ನೆಗೆ ಪಾಕಿಸ್ತಾನದ ಸಚಿವ ರಾಣಾ ಸನಾವುಲ್ಲಾ (Rana Sanaullah) ಬಗ್ಗೆ ಮಾತನಾಡುವಾಗ ಶೇಖ್ ರಶೀದ್ ಅಹ್ಮದ್ ನೇರ ಪ್ರಸಾರದ ವೇಳೆ ಉಗುಳಿದ್ದಾರೆ. ಲೈವ್ ಟಿವಿ ಪ್ರಸಾರದಲ್ಲಿ ಈ ರೀತಿ ವರ್ತಿಸಿರುವುದಕ್ಕೆ ಅವರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಟಿವಿಯಲ್ಲಿ ಚರ್ಚೆ ವೇಳೆ ಅಹ್ಮದ್ ಅವರಿಗೆ ಫೋನ್ ಮಾಡಿದ ನಿರೂಪಕಿ ಪಾಕಿಸ್ತಾನದ ಸಚಿವ ರಾಣಾ ಸನಾವುಲ್ಲಾ ಬಗ್ಗೆ ಪ್ರಶ್ನೆ ಕೇಳಿದರು. ಆಗ ಮಾಜಿ ಸಚಿವ ಅಹ್ಮದ್ ಸನಾವುಲ್ಲಾ ವಿರುದ್ಧ ವಾಗ್ದಾಳಿ ನಡೆಸಿದರು. “ರಾಣಾ ಸನಾವುಲ್ಲಾನನ್ನು ನಿಯಂತ್ರಿಸಲು ನಾನು ಜನರಲ್ ಕಮರ್ ಬಾಜ್ವಾ ಅವರನ್ನು ಒತ್ತಾಯಿಸುತ್ತೇನೆ. ಯಾರಾದರೂ ಅವನಿಗೆ ಗೌರವದಿಂದ ಸೆಲ್ಯೂಟ್ ಮಾಡಲು ಸಾಧ್ಯವೇ? ಭದ್ರತಾ ಪಡೆಗಳು ಅವನಿಗೆ ಸೆಲ್ಯೂಟ್ ಮಾಡುತ್ತಾರೆಯೇ? ಭದ್ರತಾ ಪಡೆಗಳು ಕೂಡ ಸನಾವುಲ್ಲಾಗೆ ಥೂ ಎಂದು ಉಗುಳುತ್ತವೆ” ಎಂದು ಹೇಳುತ್ತಾ ಅಹ್ಮದ್ ಟಿವಿ ಕ್ಯಾಮೆರಾ ಎದುರು ಎಂಜಲನ್ನು ಉಗುಳಿದ್ದಾರೆ.

TV9 Kannada


Leave a Reply

Your email address will not be published. Required fields are marked *