
ಶಿಕ್ಷಕಿಗೆ ಬೀಳ್ಕೊಡುಗೆ
Image Credit source: Instagram
ಒಂದೇ ಶಾಲೆಯಲ್ಲಿ 50 ವರ್ಷಗಳ ಕಾಲ ಪಾಠ ಮಾಡಿ ಇದೀಗ ನಿವೃತ್ತಿ ಹೊಂದಿದ ಶಿಕ್ಷಕಿಯನ್ನು ಇಡೀ ಶಾಲೆಯೇ ಬೀಳ್ಕೊಡುವ ಕ್ಷಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಪ್ರತಿಯೊಬ್ಬರಿಗೂ ಅದೊಂದು ಕಾಲ ಬರುತ್ತದೆ. ಅದ್ಯಾವುದು ಎಂದರೆ, ವೃತ್ತಿ ಜೀವನದಿಂದ ನಿವೃತ್ತಿ ಹೊಂದುವುದು. ಈ ಕ್ಷಣ ಒಂದು ಕಡೆ ಸಂತೋಷ ನೀಡಿದರೆ ಇನ್ನೊಂದೆಡೆ ದುಃಖವನ್ನೂ ನೀಡುತ್ತದೆ. ಇಂಥ ಕ್ಷಣವೊಂದು 50 ವರ್ಷದ ಶಿಕ್ಷಕಿ (Teacher)ಯೊಬ್ಬರಿಗೂ ಬಂದಿದ್ದು, ಇವರನ್ನು ವಿಶೇಷವಾಗಿ ಬೀಳ್ಕೊಡುವ ವಿಡಿಯೋ (Video) ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಹೃದಯ ಗೆದ್ದಿದೆ.
ಒಂದೇ ಶಾಲೆಯಲ್ಲಿ 50 ವರ್ಷಗಳ ಕಾಲ ಪಾಠ ಮಾಡಿ ಇದೀಗ ಶಿಕ್ಷಕಿ ನಿವೃತ್ತಿ ಹೊಂದಿದ್ದು, ಈ ವೇಳೆ ಸಹೋದ್ಯಯೋಗಿಗಳು, ವಿದ್ಯಾರ್ಥಿಗಳು ಬೀಳ್ಕೊಡುವ ಕ್ಷಣದ ವಿಡಿಯೋವನ್ನು ಶಿಕ್ಷಕಿಯ ಮಗಳು ‘ಕ್ಯಾಥರೀನ್’ ಶುಕ್ರವಾರ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.