Viral Video : ನೀಲಗಿರಿ ಬೆಟ್ಟಗಳಲ್ಲಿ ಪ್ಲಾಸ್ಟಿಕ್ ಚೀಲ ತಿಂದ ಆನೆ ವಿಡಿಯೋ ವೈರಲ್ | In a heartbreaking video, elephant seen chewing on plastic bottle


Elephant Chewing Plastic : ಬಂಡೀಪುರ-ಮದುಮಲೈ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅರಣ್ಯ ಪ್ರದೇಶದಲ್ಲಿ ಪ್ಲಾಸ್ಟಿಕ್​ ಬಳಕೆಯ ಕುರಿತು ನಿಷೇಧ ಹೇರಬೇಕೆಂದು ನೆಟ್ಟಿಗರು ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ.

Viral Video : ನೀಲಗಿರಿ ಬೆಟ್ಟಗಳಲ್ಲಿ ಪ್ಲಾಸ್ಟಿಕ್ ಚೀಲ ತಿಂದ ಆನೆ ವಿಡಿಯೋ ವೈರಲ್

ಪ್ಲಾಸ್ಟಿಕ್ ಬಾಟಲಿ ತಿನ್ನುತ್ತಿರುವ ಆನೆ

Viral Video : ಪ್ಲಾಸ್ಟಿಕ್​ ಬಳಕೆ, ಪ್ರವಾಸಿಗರ ಬೇಜವಾಬ್ದಾರಿತನದಿಂದಾಗಿ ಅರಣ್ಯ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಉಂಟಾಗಿ, ಕಾಡುಪ್ರಾಣಿಗಳು ಅರಿವಿಲ್ಲದೆ ಪ್ಲಾಸ್ಟಿಕ್​ ತಿನ್ನತೊಡಗಿವೆ. ಇದೀಗ ನೀಲಗಿರಿ ಬೆಟ್ಟಗಳಲ್ಲಿರುವ ಬಂಡೀಪುರ ಮತ್ತು ಮದುಮಲೈ ಪ್ರದೇಶದಲ್ಲಿ ಆನೆಯೊಂದು ಪ್ಲಾಸ್ಟಿಕ್​ ಚೀಲವನ್ನು ತಿನ್ನುತ್ತಿರುವ ವಿಡಿಯೋ ವೈರಲ್ ಆಗಿದೆ. ಪ್ಲಾಸ್ಟಿಕ್​ ಆನೆಯ ಜೀವಕ್ಕೆ ಅಪಾಯಕಾರಿ ಎಂಬ ಕಳವಳಕ್ಕೆ ನೆಟ್ಟಿಗರು ಬಿದ್ದಿದ್ದಾರೆ. ಐಪಿಎಸ್ ಅಧಿಕಾರಿ ಸುಸಾಂತ ನಂದಾ ಟ್ವಿಟರ್​ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ.

ಈ ಪೋಸ್ಟ್​​ಗೆ ಪ್ರತಿಕ್ರಿಯಿಸಿದ ಅನೇಕರು, ತ್ಯಾಜ್ಯ ನಿರ್ವಹಣೆ ಪ್ರವಾಸಿಗರ ಜವಾಬ್ದಾರಿಯೂ ಹೌದು. ಹಾಗಾಗಿ ಅರಣ್ಯ ಇಲಾಖೆಯು ಈ ಪ್ರದೇಶದಲ್ಲಿ ಪ್ಲಾಸ್ಟಿಕ್​ ಬಳಕೆ ನಿಷೇಧಿಸಬೇಕು ಎಂದಿದ್ದಾರೆ.

‘ರಾಷ್ಟ್ರೀಯ ಉದ್ಯಾನವನಗಳಲ್ಲಿ ಯಾವುದೇ ರೀತಿಯ ಪ್ಲಾಸ್ಟಿಕ್ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು. ಅದು ನೀರು ಅಥವಾ ಹಾಗೂ ಇನ್ನಿತರೇ ನೆಪದಲ್ಲಿ ಪ್ಲಾಸ್ಟಿಕ್​ ಕಾಡು ಸೇರದಂತೆ ನೋಡಿಕೊಳ್ಳಬೇಕು. ಈ ನಿಯಮ ಮುರಿದವರಿಗೆ ದಂಡ ವಿಧಿಸಬೇಕು ಆಗ ಮಾತ್ರ ಜನ ಎಚ್ಚೆತ್ತುಕೊಳ್ಳುತ್ತಾರೆ. ಮಾಡಿದ ತಪ್ಪನ್ನು ಮತ್ತೆ ಮತ್ತೆ ಮಾಡಲಾರರು’ ಎಂದು ಟ್ವಿಟರ್ ಖಾತೆದಾರರೊಬ್ಬರು ಹಂಚಿಕೊಂಡಿದ್ದಾರೆ.

ಇನ್ನೊಬ್ಬ ಖಾತೆದಾರರು, ‘ರೈಲಿನ ಸ್ವಚ್ಛತಾ ಸಿಬ್ಬಂದಿಯು ಪ್ಲಾಸ್ಟಿಕ್​ ಬಾಟಲಿ, ತ್ಯಾಜ್ಯಗಳನ್ನು ಎರಡು ಬೋಗಿಗಳ ನಡುವೆ ಇರುವ ಜಾಗದಿಂದ ರೈಲ್ವೆ ಟ್ರ್ಯಾಕ್​ ಮೇಲೆ ಎಸೆಯುವುದನ್ನು ನೋಡಿದ್ದೇನೆ. ಕಾಡಿನ ಮಧ್ಯೆ ಇರುವ ಕೆಲ ರೈಲ್ವೆ ಹಳಿಗಳ ಬಳಿ ಕಾಡುಪ್ರಾಣಿಗಳು ಓಡಾಡುವಾಗ ಈ ತ್ಯಾಜ್ಯವನ್ನು ತಿನ್ನುವ ಅಪಾಯ ಇದೆ’ ಎಂದಿದ್ದಾರೆ.

1.8 ಲಕ್ಷ ಜನರು ಈ ವಿಡಿಯೋ ನೋಡಿದ್ದಾರೆ. 323 ಜನರು ರೀಟ್ವೀಟ್ ಮಾಡಿದ್ದಾರೆ.

TV9 Kannada


Leave a Reply

Your email address will not be published.