Viral Video: ಪರ್ಫೆಕ್ಟ್​ ಬೌಲಿಂಗ್​, ಪರ್ಫೆಕ್ಟ್ ಕ್ಯಾಚ್, ವ್ಹಾಟ್ ಎ ಮ್ಯಾಚ್​! | This little boy’s bowling skill has impressed the Internet Watch viral video


Cricket : ಕದಲದೆ ಬ್ಯಾಟಿಂಗ್ ಮಾಡಿದ ಈ ವ್ಯಕ್ತಿ! 5 ಲಕ್ಷ ನೆಟ್ಟಿಗರು ನೋಡಿದ ಈ ವಿಡಿಯೋ ಖಂಡಿತ ನಿಮ್ಮನ್ನು ಬಾಲ್ಯಕ್ಕೆ ಎಳೆದೊಯ್ಯುತ್ತದೆ.

Viral Video: ಪರ್ಫೆಕ್ಟ್​ ಬೌಲಿಂಗ್​, ಪರ್ಫೆಕ್ಟ್ ಕ್ಯಾಚ್, ವ್ಹಾಟ್ ಎ ಮ್ಯಾಚ್​!

ಹೇಗೆ ಬೌಲಿಂಗ್!

Cricket : ಕ್ರಿಕೆಟ್​ನ ಹುಚ್ಚು ಒಮ್ಮೆ ಹೊಕ್ಕಿತೆಂದರೆ ಮುಗಿಯಿತು. ಅದರಲ್ಲೂ ಚಿಕ್ಕಮಕ್ಕಳು ಆಡುವ ಹುಚ್ಚಿಗೆ ಬಿದ್ದರಂತೂ ಅವರನ್ನು ಆ ಧ್ಯಾನದಿಂದ ಕದಲಿಸಲು ಸಾಧ್ಯವೇ ಇಲ್ಲ. ಊಟ ತಿಂಡಿ ನಿದ್ರೆ ಮರೆತು ನಿಂತಲ್ಲೇ ಬ್ಯಾಟಿಂಗ್, ಬೌಲಿಂಗ್​ ಎಲ್ಲವೂ… ನಿಮಗೂ ನಿಮ್ಮ ಬಾಲ್ಯ ನೆನಪಾಗುತ್ತಿರಬೇಕಲ್ಲ? ಅದರಲ್ಲೂ ಗಲ್ಲಿ ಕ್ರಿಕೆಟ್​ನ ಸ್ವಾರಸ್ಯ, ಆ ಕೀಟಲೆ, ದಾಂಧಲೆ, ರೋಮಾಂಚನ ಇನ್ನೂ ಏನೆಲ್ಲಾ. ಹಾಗಿದ್ದರೆ ಈ ವಿಡಿಯೋ ನೋಡಿ. ಗಲ್ಲಿ ಕ್ರಿಕೆಟ್​ ಮಜಾ ಅನುಭವಿಸಿದವರಿಗೆ ಈ ವಿಡಿಯೋ ಖಂಡಿತ ಖುಷಿ ಕೊಡುತ್ತದೆ. ಅಮೆರಿಕದಲ್ಲಿ ಈ ಹುಡುಗ ಬ್ಯಾಟಿಂಗ್ ಸ್ಟ್ಯಾಚ್ಯೂಗೆ ಬೌಲ್​ ಮಾಡಿದ ಪರಿಗೆ ಪರ್ಫೆಕ್ಟ್​ ಬೌಲಿಂಗ್ ಎಂದು ಅಚ್ಚರಿಪಟ್ಟಿದ್ದಾರೆ ನೆಟ್ಟಿಗರು. ಅಷ್ಟೇ ಅಲ್ಲ ದಾರಿಹೋಕನೊಬ್ಬ ಪರ್ಫೆಕ್ಟ್ ಕ್ಯಾಚ್​ ಮಾಡಿದ್ದು ಈ ವಿಡಿಯೋದ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಪುಟ್ಟವಿಡಿಯೋವನ್ನು ಈಗಾಗಲೇ 5 ಲಕ್ಷ ಜನ ವೀಕ್ಷಿಸಿದ್ದಾರೆ.

ಬಾರ್ಮಿ ಆರ್ಮಿ ಎನ್ನುವವರು ಟ್ವಿಟರ್​ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ರಸ್ತೆಯಲ್ಲಿ ಇನ್​ಸ್ಟಾಲ್ ಮಾಡಲಾದ ಬ್ಯಾಟಿಂಗ್ ಪ್ರತಿಕೃತಿ ಅದೆಷ್ಟು ನಿಖರ ಫಲಿತಾಂಶವನ್ನು ನೀಡಿದೆ. ದಾರಿಹೋಕ ಅದೆಷ್ಟು ಸಹಜವಾಗಿ ಕ್ಯಾಚ್ ಮಾಡಿದ್ದಾನೆ. ಈ ಹುಡುಗ ಅದೆಷ್ಟು ಪುಳಕ ಅನುಭವಿಸಿರಬಹುದು!

TV9 Kannada


Leave a Reply

Your email address will not be published.