Viral Video: ಪಾದ ಮುಟ್ಟಿ ನಮಸ್ಕರಿಸಿದ ಬಿಜೆಪಿ ನಾಯಕನಿಗೆ ಸನ್ನೆಯಲ್ಲೇ ಪಾಠ ಮಾಡಿದ ಪ್ರಧಾನಿ ನರೇಂದ್ರ ಮೋದಿ | Uttar Pradesh BJP leader touches P Narendra Modi feet PM gives him lesson without saying a word Watch Viral Video


Viral Video: ಪಾದ ಮುಟ್ಟಿ ನಮಸ್ಕರಿಸಿದ ಬಿಜೆಪಿ ನಾಯಕನಿಗೆ ಸನ್ನೆಯಲ್ಲೇ ಪಾಠ ಮಾಡಿದ ಪ್ರಧಾನಿ ನರೇಂದ್ರ ಮೋದಿ

ಬಿಜೆಪಿ ನಾಯಕನಿಗೆ ವೇದಿಕೆಯಲ್ಲೇ ಬುದ್ಧಿ ಹೇಳಿದ ನರೇಂದ್ರ ಮೋದಿ

ಭಾನುವಾರ ಉತ್ತರ ಪ್ರದೇಶದಲ್ಲಿ ಚುನಾವಣಾ ರ್ಯಾಲಿಯಲ್ಲಿ (Uttar Pradesh Election Rally) ಪಾಲ್ಗೊಂಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರ ಪಾದಗಳಿಗೆ ನಮಸ್ಕಾರ ಮಾಡಲು ಬಾಗಿದ ಉನ್ನಾವೋ ಜಿಲ್ಲೆಯ ಬಿಜೆಪಿ ಅಧ್ಯಕ್ಷರಿಗೆ ವೇದಿಕೆಯಲ್ಲೇ ಪ್ರಧಾನಿ ಮೋದಿ ಪಾಠ ಮಾಡಿದ್ದಾರೆ. ಪ್ರಧಾನಿ ಮೋದಿ ರ್ಯಾಲಿಗೆ ಆಗಮಿಸುತ್ತಿದ್ದಂತೆ ಬಿಜೆಪಿಯ ಉತ್ತರ ಪ್ರದೇಶ ಮುಖ್ಯಸ್ಥ ಸ್ವತಂತ್ರ ದೇವ್ ಸಿಂಗ್ ಮತ್ತು ಬಿಜೆಪಿಯ ಉನ್ನಾವೊ ಜಿಲ್ಲಾಧ್ಯಕ್ಷ ಅವಧೇಶ್ ಕಟಿಯಾರ್ ಮೋದಿಗೆ ಶ್ರೀರಾಮನ ವಿಗ್ರಹವನ್ನು ನೀಡಿ ಸ್ವಾಗತಿಸಿದ್ದಾರೆ. ಈ ವೇಳೆ ಅವಧೇಶ್ ಕಟಿಯಾರ್ ಅವರು ಕೆಳಗೆ ಬಾಗಿ ಪ್ರಧಾನಿ ನರೇಂದ್ರ ಮೋದಿಯವರ ಪಾದಗಳನ್ನು ಮುಟ್ಟಿ ನಮಸ್ಕರಿಸಲು ಮುಂದಾಗಿದ್ದಾರೆ. ಆದರೆ, ಅವರನ್ನು ಹಿಡಿದು ನಿಲ್ಲಿಸಿದ ಪ್ರಧಾನಿ ಮೋದಿ ತಮ್ಮ ಪಾದಗಳನ್ನು ಮುಟ್ಟದಂತೆ ಸೂಚಿಸಿದ್ದಾರೆ.

ತಮ್ಮ ಕಾಲಿಗೆ ನಮಸ್ಕರಿಸಲು ಮುಂದಾದ ಬಿಜೆಪಿ ನಾಯಕನನ್ನು ತಡೆದ ಪ್ರಧಾನಿ ನರೇಂದ್ರ ಮೋದಿ ಒಂದೂ ಮಾತನಾಡದೆ ಸನ್ನೆಯ ಮೂಲಕವೇ ಆ ರೀತಿ ಮಾಡಬಾರದೆಂದು ಸೂಚಿಸಿದ್ದಾರೆ. ಹಾಗೇ, ತಾವು ಕೂಡ ಕೆಳಗೆ ಬಾಗಿ ಕಟಿಯಾರ್ ಅವರಿಗೆ ಪ್ರಧಾನಿ ಮೋದಿ ಧನ್ಯವಾದ ತಿಳಿಸಿದ್ದಾರೆ.

ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಬಿಜೆಪಿಯಿಂದ ಉನ್ನಾವೊ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡ ಅವಧೇಶ್ ಕಟಿಯಾರ್ ಅವರು ಈ ಹಿಂದೆ ಉನ್ನಾವೊದಲ್ಲಿ ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಉನ್ನಾವೊ ಜಿಲ್ಲೆಯು ಆರು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, ಫೆಬ್ರವರಿ 23ರಂದು ಉತ್ತರ ಪ್ರದೇಶ ಚುನಾವಣೆಯ ನಾಲ್ಕನೇ ಹಂತದ ಮತದಾನ ನಡೆಯಲಿದೆ.

ಉತ್ತರ ಪ್ರದೇಶದ 403 ಸದಸ್ಯ ಬಲದ ವಿಧಾನಸಭೆಗೆ ಏಳು ಹಂತಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಮಾರ್ಚ್ 7ರಂದು ಕೊನೆಯ ಹಂತದ ಮತದಾನ ನಡೆಯಲಿದೆ. ಮಾರ್ಚ್ 10ರಂದು ಮತ ಎಣಿಕೆ ನಡೆಯಲಿದೆ.

TV9 Kannada


Leave a Reply

Your email address will not be published. Required fields are marked *