Viral Video: ಪ್ರೀತಿಯ ನಾಯಿಗಾಗಿ ಹೆಬ್ಬಾವಿನೊಂದಿಗೆ ಸೆಣಸಾಡುತ್ತಿರುವ ಈ ಹುಡುಗರು | 3 boys fight off python to save their pet dog in viral video. Watch


Python Video : ಹೆಬ್ಬಾವೊಂದು ನಾಯಿಯನ್ನು ಸುತ್ತುಹಾಕಿಕೊಂಡಿದೆ. ಮೂವರು ಹುಡುಗರು ಆ ಹೆಬ್ಬಾವನ್ನು ಎಳೆದೆಳೆದು ತಮ್ಮ ಮುದ್ದಿನ ನಾಯಿಯ್ನ ರಕ್ಷಿಸಲು ನೋಡುತ್ತಿದ್ದಾರೆ. ವಿಡಿಯೋ ನೋಡಿ ಮುಂದೇನಾಗುತ್ತದೆ ಎಂದು.

Viral Video: ಪ್ರೀತಿಯ ನಾಯಿಗಾಗಿ ಹೆಬ್ಬಾವಿನೊಂದಿಗೆ ಸೆಣಸಾಡುತ್ತಿರುವ ಈ ಹುಡುಗರು

ಹೆಬ್ಬಾವಿನಿಂದ ನಾಯಿಯನ್ನು ಬಿಡಿಸುತ್ತಿರುವುದು

Viral : ತಮ್ಮ ಸಾಕುಪ್ರಾಣಿಗಳಿಗಾಗಿ ತಮ್ಮ ಜೀವದ ಹಂಗನ್ನೇ ತೊರೆದು ಬದುಕಿದ ಬದುಕುತ್ತಿರುವ ಉದಾಹರಣೆಗಳು ನಮ್ಮ ಮುಂದಿವೆ. ಅದರಲ್ಲೂ ನಾಯಿಯ ವಾತ್ಸಲ್ಯಕ್ಕೆ ಎಣೆಯೇ ಇಲ್ಲ. ಇಲ್ಲಿ ಮೂರು ಹುಡುಗರು ತಾವು ಸಾಕಿದ ನಾಯಿಗಾಗಿ ಹೇಗೆ ತಮ್ಮ ಪ್ರಾಣವನ್ನೇ ಒತ್ತೆ ಇಟ್ಟಿದ್ಧಾರೆ ನೋಡಿ. ಆನ್​ಲೈನ್​ನಲ್ಲಿ ವೈರಲ್​ ಆಗಿರುವ ಈ ವಿಡಿಯೋ ಕ್ಲಿಪ್​ನಲ್ಲಿ ಹೆಬ್ಬಾವೊಂದು ನಾಯಿಯನ್ನು ಸುತ್ತಿಕೊಂಡಿದೆ. ಯಾರಾದರೂ ಆಗಿದ್ದರೆ ಭಯದಿಂದ ದೂರ ಓಡಿಹೋಗುತ್ತಿದ್ದರು. ಆದರೆ ಈ ಮಕ್ಕಳಿಗೆ ಯಾವ ಭಯವೂ ಆವರಿಸದೆ, ತಮ್ಮ ನಾಯಿಯನ್ನು ಉಳಿಸಿಕೊಳ್ಳಬೇಕೆಂಬ ಒಂದೇ ಒಂದು ಗುರಿಯಿಂದ ಈ ಸಾಹಸಕ್ಕೆ ಇಳಿದಿದ್ದಾರೆ. ಇದು ಎಲ್ಲಿ ನಡೆದಿದೆ ಎಂದು ತಿಳಿದುಬಂದಿಲ್ಲ. ಆದರೆ ಈ ಹೆಬ್ಬಾವಿನೊಂದಿಗೆ ಹೋರಾಟ ನಡೆಸಿ ನಾಯಿಯನ್ನು ಉಳಿಸಿಕೊಂಡಿರುವುದು ಎಂಥ ಪ್ರೀತಿ ಇರಬಹುದು? ಪ್ರೀತಿ ಇದ್ದಲ್ಲಿ ಧೈರ್ಯ, ಹೋರಾಟ ಇದ್ದೇ ಇರುತ್ತದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.

ನಾಯಿಯ ಹಿಂಭಾಗವನ್ನು ಪೂರ್ತಿಯಾಗಿ ಸುತ್ತಿಕೊಂಡಿರುವ ಈ ದೈತ್ಯಹೆಬ್ಬಾವನ್ನು ಕೋಲಿನಿಂದ ತಿವಿಯುವುದಲ್ಲದೇ ಹಗ್ಗವನ್ನು ಎಳೆದಂತೆ ಎಳೆದೆಳೆದು ಬಿಡಿಸಿಕೊಂಡಷ್ಟೂ ಅದು ಮತ್ತೂ ಸುತ್ತಿಕೊಳ್ಳುತ್ತಲೇ ಹೋಗಿದೆ.  ಅಂತೂ ಯಶಸ್ವಿಯಾಗಿ ನಾಯಿಯನ್ನು ಹೆಬ್ಬಾವಿನಿಂದ ಕಾಪಾಡಿದ್ದಾರೆ ಈ ಹುಡುಗರು. ಯಾರಿಗೂ ಇದರಲ್ಲಿ ಅನಾಹುತವಾಗಿಲ್ಲವೆನ್ನುವುದೇ ಅದೃಷ್ಟ.

ಈ ವಿಡಿಯೋ ಈತನಕ 11 ಲಕ್ಷಕ್ಕಿಂತಲೂ ಹೆಚ್ಚು ವೀಕ್ಷಣೆಗೆ ಒಳಪಟ್ಟಿದೆ. ಹುಡುಗರ ಶೂರ್ಯಕ್ಕೆ ನೆಟ್ಟಮಂದಿ ಶಭಾಷ್ ಎಂದಿದ್ದಾರೆ.

ಇನ್ನಷ್ಟು ವೈರ್ ವಿಡಿಯೋ ನೋಡಲು ಕ್ಲಿಕ್ ಮಾಡಿ

TV9 Kannada


Leave a Reply

Your email address will not be published. Required fields are marked *