Viral Video: ಫೋಟೋ ತೆಗೆಯುತ್ತಿದ್ದಾಗ ಬಾಲಕಿಗೆ ಸೊಂಡಿಲಿನಿಂದ ಹೊಡೆದ ಆಫ್ರಿಕನ್ ಆನೆ, ವಿಡಿಯೋ ವೈರಲ್ | African elephant hitting a girl while taking a photo


Viral Video: ಫೋಟೋ ತೆಗೆಯುತ್ತಿದ್ದಾಗ ಬಾಲಕಿಗೆ ಸೊಂಡಿಲಿನಿಂದ ಹೊಡೆದ ಆಫ್ರಿಕನ್ ಆನೆ, ವಿಡಿಯೋ ವೈರಲ್

ಹುಡುಗಿಗೆ ಆಫ್ರಿಕಾ ಆನೆ ಹೊಡೆಯುತ್ತಿರುವುದು

ಆಫ್ರಿಕಾ ಆನೆಯ ಫೋಟೋ ತೆಗೆಯುತ್ತಿದ್ದಾಗ ಉದ್ರೇಕಗೊಂಡ ಆನೆ ಬಾಲಕಿಗೆ ಸೊಂಡಿಲಿನಿಂದ ಹೊಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಮೃಗಾಲಯದಲ್ಲಿ ಪ್ರಾಣಿಗಳನ್ನು ವೀಕ್ಷಣೆ ಮಾಡಲು ಪ್ರವಾಸಿಗರು ಬರುವುದು ಸಾಮಾನ್ಯ. ಅದರೆ ಕೆಲವೊಮ್ಮೆ ನೋಡುನೋಡುತ್ತಲೇ ಪ್ರಾಣಿಗಳು ಪ್ರವಾಸಿಗರ ಮೇಲೆ ದಾಳಿ ನಡೆಸುತ್ತವೆ. ಇಂಥ ಘಟನೆಗಳು ಈ ಹಿಂದೆ ಹಲವು ಬಾರಿ ನಡೆದಿರುವುದನ್ನು ನೋಡಿದ್ದೇವೆ. ಇದೀಗ ಆಫ್ರಿಕಾ ಆನೆ (African Elephant)ಯ ಫೋಟೋ ತೆಗೆಯುತ್ತಿದ್ದಾಗ ಬಾಲಕಿಗೆ ಆನೆ ಸೊಂಡಿಲಿನಿಂದ ಹೊಡೆದ ಘಟನೆ ನಡೆದಿದೆ. ಇದರ ವಿಡಿಯೋ (Video) ಮೊಬೈಲ್​ನಲ್ಲಿ ಸೆರೆಯಾಗಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral) ಆಗುತ್ತಿದೆ.

ವೈರಲ್ ವಿಡಿಯೋದಲ್ಲಿ ಇರುವಂತೆ, ಆನೆಯ ಆವರಣದ ಹೊರಗೆ ಜನರ ಗುಂಪೊಂದು ನಿಂತಿರುತ್ತದೆ. ಇದರಲ್ಲಿ ಕೆಲವರು ಆನೆಯ ಸೊಂಡಿಲು ಮುಟ್ಟಲು ಪ್ರಯತ್ನಿಸುತ್ತಾರೆ. ಒಂದು ಹುಡುಗಿ ತನ್ನ ಮೊಬೈಲ್ ಮೂಲಕ ಆನೆಯ ಫೋಟೋ ಕ್ಲಿಕ್ ಮಾಡಲು ಮುಂದಾಗುತ್ತಾಳೆ. ಆರಂಭದಲ್ಲಿ ಸುಮ್ಮನಿದ್ದ ಆನೆ, ನಂತರ ಉದ್ರೇಕಗೊಂಡು ಆಕ್ರಮಣಕಾರಿಯಾಗಿ ತಿರುಗಿ ಸೊಂಡಿಲಿನಿಂದ ಹುಡುಗಿಗೆ ಹೊಡೆಯುತ್ತದೆ.

TV9 Kannada


Leave a Reply

Your email address will not be published. Required fields are marked *