Viral Video: ಬಲೂನ್ ಆಟವಾಡುತ್ತಿದ್ದ ಕೋತಿ; ಮುಂದೇನಾಯ್ತು? ತಮಾಷೆ ವಿಡಿಯೊ ನೋಡಿ | Monkey play with balloon watch what happened next viral video


Viral Video: ಬಲೂನ್ ಆಟವಾಡುತ್ತಿದ್ದ ಕೋತಿ; ಮುಂದೇನಾಯ್ತು? ತಮಾಷೆ ವಿಡಿಯೊ ನೋಡಿ

ಬಲೂನ್ ಹಿಡಿದು ಆಟವಾಡುತ್ತಿದ್ದ ಕೋತಿ

ಪ್ರಾಣಿಗಳ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹರಿದಾಡುತ್ತವೆ. ಕೆಲವು ಪ್ರಾಣಿಗಳ ತುಂಟಾಟಗಳು ಹೆಚ್ಚು ಇಷ್ಟವಾಗುತ್ತವೆ. ಹೊಟ್ಟೆ ಹುಣ್ಣಾಗಿಸುವಷ್ಟು ನಗು ತರಿಸುವ ವಿಡಿಯೊಗಳು ಮನ ಗೆಲ್ಲುವುದಂತೂ ಸತ್ಯ. ಅಂತಹ ದೃಶ್ಯಗಳನ್ನು ಮತ್ತೆ ಮತ್ತೆ ನೋಡಬೇಕು ಅನ್ನಿಸುವಷ್ಟು ಇಷ್ಟವಾಗುತ್ತವೆ. ಅಂತಹುದೇ ಒಂದು ವಿಡಿಯೊ ಇದಾಗಿದ್ದು ಮಂಗನ ಚೇಷ್ಟೆ ಇದೀಗ ಫುಲ್ ವೈರಲ್ ಆಗಿದೆ.

ಮಂಗಗಳು ಮನುಷ್ಯನಂತೆಯೇ ವರ್ತಿಸಲು ಪ್ರಯತ್ನಿಸುತ್ತವೆ. ಈ ಹಿಂದೆ ಅಂತಹ ಅನೇಕ ವಿಡಿಯೊಗಳು ವೈರಲ್ ಆಗಿದ್ದವು. ಪಾತ್ರೆ ತೊಳೆಯುವುದು, ಬ್ರೆಶ್ ಹಿಡಿದು ಬಟ್ಟೆ ತೊಳೆಯುವುದು, ತನ್ನ ಮರಿಗಳಿಗೆ ಸ್ನಾನ ಮಾಡಿಸುವುದು ಹೀಗೆ ಅನೇಕ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದ್ದವು. ಇದೀಗ ವೈರಲ್ ಆಗಿರುವ ವಿಡಿಯೊದಲ್ಲಿ ಕೋತಿಯು ಬಲೂನ್ ಹಿಡಿದು ಆಟವಾಡುತ್ತಿದೆ. ಬಲೂನ್ ಒಡದೇ ಬಿಟ್ಟಿದೆ. ಎಲ್ಲೋಯ್ತಪ್ಪಾ ಬಲೂನ್? ಎಂದು ಕೋತಿಯು ಹುಡುಕುತ್ತಿರುವ ತಮಾಷೆಯ ವಿಡಿಯೊ ಮಜವಾಗಿದೆ.

ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ಸಾವಿರಾರು ವೀಕ್ಷಣೆಗಳನ್ನು ಗಳಿಸಿಕೊಂಡಿದೆ. ಈ ತಮಾಷೆಯ ವಿಡಿಯೊ ಭಾರೀ ವೈರಲ್ ಆಗಿದೆ. ಜನರು ಸಹ ತಮಾಷೆಯ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ. ನಾನು ಬಾಲ್ಯದಲ್ಲಿದ್ದಾಗ ನನಗೂ ಹೀಗೆ ಆಗಿತ್ತು ಎಂದು ಓರ್ವರು ಹೇಳಿದ್ದಾರೆ. ವಿಡಿಯೊ ಮಜವಾಗಿದೆ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ:

Viral Video: ಮುದ್ದಾದ ಪುಟ್ಟ ನಾಯಿ ಮರಿಯೊಂದಿಗೆ ನೃತ್ಯ ಮಾಡಿದ ಯುವಕ! ಕ್ಯೂಟ್ ವಿಡಿಯೊ ನೀವೂ ನೋಡಿ

Viral Video: ಯುವತಿ ಚರಂಡಿ ಬಳಿ ನಿಂತು ಸ್ಟಂಟ್ ಮಾಡೋಕೆ ಹೋಗಿ ಆಗಿದ್ದೇ ಬೇರೆ! ಏನಾಯ್ತು ಅನ್ನೋದನ್ನಾ ವಿಡಿಯೊದಲ್ಲೇ ನೋಡಿ

TV9 Kannada


Leave a Reply

Your email address will not be published. Required fields are marked *