
ಬಾಲಕಿಗೆ ವೈದ್ಯರು ಚಿಕಿತ್ಸೆ ನೀಡುತ್ತಿರುವುದು
ನಾಲ್ಕು ಕೈಗಳು ಹಾಗೂ ನಾಲ್ಕು ಕಾಲುಗಳನ್ನು ಹೊಂದಿದ ಬಿಹಾರ ಮೂಲದ ಬಾಲಕಿಯ ಚಿಕಿತ್ಸೆಗೆ ನಟ ಸೋನು ಸೂದ್ ಅವರು ಧಾವಿಸಿದ್ದು, ವೈದ್ಯರು ಬಾಲಕಿಗೆ ಚಿಕಿತ್ಸೆ ನೀಡುತ್ತಿರುವ ಫೋಟೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಬಿಹಾರ: ನಾಲ್ಕು ಕೈಗಳು ಮತ್ತು ನಾಲ್ಕು ಕಾಲುಗಳನ್ನು ಹೊಂದಿರುವ ಬಾಲಕಿ (Girl)ಯ ವಿಡಿಯೋ (Video) ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗುತ್ತಿದೆ. ಬಿಹಾರದ ನೆವಾಡಾ ಜಿಲ್ಲೆಯ ಬಡ ಕುಟುಂಬವೊಂದಕ್ಕೆ ಸೇರಿದ ಎರಡೂವರೆ ವರ್ಷದ ಬಾಲಕಿಯೋರ್ವಳು ನಾಲ್ಕು ಕೈ ಹಾಗೂ ನಾಲ್ಕು ಕಾಲುಗಳನ್ನು ಹೊಂದಿದ್ದಾಳೆ. ಈಕೆಯ ಚಿಕಿತ್ಸೆಗೆ ಹಣಕಾಸಿನ ಕೊರತೆ ಎದುರಾದ ಹಿನ್ನೆಲೆ ಬಾಲಿವುಡ್ ನಟ, ರಿಯಲ್ ಹೀರೋ ಖ್ಯಾತಿಯ ಸೋನು ಸೂದ್ (Sonu Sood) ಅವರು ನೆರವಿಗೆ ಧಾವಿಸಿದ್ದಾರೆ.