Viral Video: ಬೀದಿ ವ್ಯಾಪಾರಿಯ ಈ ಕೌಶಲ್ಯ ನೋಡಿದ್ರೆ ನೀವೂ ಬೆರಗಾಗ್ತೀರಾ; ವಿಡಿಯೊ ನೋಡಿ | Steer vendor stunt tosses food from wok to man watch viral video


Viral Video: ಬೀದಿ ವ್ಯಾಪಾರಿಯ ಈ ಕೌಶಲ್ಯ ನೋಡಿದ್ರೆ ನೀವೂ ಬೆರಗಾಗ್ತೀರಾ; ವಿಡಿಯೊ ನೋಡಿ

ಬೀದಿ ವ್ಯಾಪಾರಿಯ ಈ ಕೌಶಲ್ಯಕ್ಕೆ ನೀವೂ ಬೆರಗಾಗ್ತೀರಾ

ಸಾಮಾಜಿಕ ಜಾಲತಾಣದಲ್ಲಿ (Social Media) ಅದೆಷ್ಟೋ ವಿಡಿಯೊಗಳು ಹರಿದಾಡುತ್ತವೆ. ಅವುಗಳಲ್ಲಿ ಕೆಲವು ತಮಾಷೆಯಾಗಿದ್ದರೆ ಇನ್ನು ಕೆಲವು ಅಚ್ಚರಿ ಮೂಡಿಸುತ್ತವೆ. ಎಲ್ಲರನ್ನು ಬೆರಗಾಗಿಸುವ ಕೆಲವು ವಿಡಿಯೊಗಳು ಹೆಚ್ಚು ವೈರಲ್ (Viral Video) ಆಗುತ್ತವೆ. ಗ್ರಾಹಕರ ಆಕರ್ಷಣೆಗಾಗಿ ಬೀದಿ ವ್ಯಾಪಾರಿಗಳು ಬೆರಗುಗೊಳಿಸುವ ಸ್ಟಂಟ್​ಗಳನ್ನು (Stunt) ಮಾಡುತ್ತಲೇ ಇರುತ್ತಾರೆ. ಇದೀಗ ವೈರಲ್ ಆದ ವಿಡಿಯೊದಲ್ಲಿ ನೋಡುವಂತೆ ಬೀದಿ (Street Food) ವ್ಯಾಪಾರಿಯೋರ್ವ ಸ್ನ್ಯಾಕ್ಸ್ ತಯಾರಿಸುತ್ತಿದ್ದಾನೆ. ಪಾತ್ರೆಯಲ್ಲಿ ಬೇಯಿಸುತ್ತಿದ್ದ ತರಕಾರಿಯನ್ನು ಮತ್ತೊಂದು ಕಡೆ ನಿಂತಿದ್ದವನಿಗೆ ಎಸೆದಿದ್ದಾನೆ. ಆ ಕಡೆ ನಿಂತಿದ್ದ ವ್ಯಕ್ತಿಯು ಪಾತ್ರೆಯಲ್ಲಿ ಅವುಗಳನ್ನು ಹಿಡಿದಿದ್ದಾನೆ. ವ್ಯಾಪಾರಿಗಳ ಕೌಶಲ್ಯಕ್ಕೆ ನೋಡಿ ನೆಟ್ಟಿಗರು ಆಶ್ಚರ್ಯಪಟ್ಟಿದ್ದಾರೆ.

ರಸ್ತೆಯ ಒಂದು ಕಡೆ ನಿಂತು ವ್ಯಾಪಾರಿಯು ಪಾತ್ರೆಯಲ್ಲಿ ಬೀನ್ಸ್ ಫ್ರೈ ಮಾಡುತ್ತಿರುವುದನ್ನು ನೋಡಬಹುದು. ಬೀನ್ಸ್ ಫ್ರೈ ಆದಂತೆಯೇ ರಸ್ತೆಯ ಮತ್ತೊಂದು ಪಕ್ಕದಲ್ಲಿದ್ದ ವ್ಯಾಪಾರಿಗೆ ಎಸೆದಿದ್ದಾನೆ. ಆ ವ್ಯಾಪಾರಿಯು ಸರಿಯಾಗಿ ಪಾತ್ರೆಯಲ್ಲಿ ತರಕಾರಿಗಳನ್ನು ಹಿಡಿದಿದ್ದಾನೆ. ನಿಜಕ್ಕೂ ಆಶ್ಚರ್ಯವಾಗುವಂತಹ ವಿಡಿಯೊ ನೆಟ್ಟಿಗರ ಮನ ಗೆದ್ದಿದೆ. ನೆಟ್ಟಿಗರು ವ್ಯಾಪಾರಿಗಳ ಕೌಶಲ್ಯವನ್ನು ಮೆಚ್ಚಿಕೊಂಡಿದ್ದು, ಶ್ಲಾಘಿಸಿದ್ದಾರೆ.

ಈ ವಿಡಿಯೊವನ್ನು ಮೊದಲಿಗೆ ಟಿಕ್ ಟಾಕ್​ನಲ್ಲಿ ಹಂಚಿಕೊಳ್ಳಲಾಗಿದೆ. ಬಳಿಕ ಇತರ ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳಲ್ಲಿ ವಿಡಿಯೊ ವೈರಲ್ ಆಗಿದೆ. ಇಲ್ಲಿಯವರೆಗೆ ವಿಡಿಯೊ 22.8 ಮಿಲಿಯನ್​ಗೂ ಹೆಚ್ಚಿನ ವೀಕ್ಷಣೆಗಳನ್ನು ಗಳಿಸಿಕೊಂಡಿದೆ. ನೆಟ್ಟಿಗರು ವ್ಯಾಪಾರಿಗಳ ಕೌಶಲ್ಯಕ್ಕೆ ಬೆರಗಾಗಿದ್ದಾರೆ. ಅದ್ಭುತ ಎಂದು ಕಾಮೆಂಟ್ ಮಾಡುವ ಮೂಲಕ ಅನಿಸಿಕೆ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

Viral Video: ಕಲಾವಿದನ ಕೈಚಳಕದಿಂದ ಮೂಡಿದ ಕಣ್ಣಿನ ಚಿತ್ರ; ವಿಡಿಯೊ ವೈರಲ್​

Viral Video: ಅಮಾಯಕನಂತೆ ವರ್ತಿಸುತ್ತಾ ಸೈಕಲ್ ಕದ್ದು ಪರಾರಿಯಾಗಲು ಹೊರಟ ಕಳ್ಳ; ಮುಂದೇನಾಯ್ತು? ವಿಡಿಯೊ ನೋಡಿ

TV9 Kannada


Leave a Reply

Your email address will not be published. Required fields are marked *