
ಪ್ರಾತಿನಿಧಿಕ ಚಿತ್ರ
ಆತನ ತಲೆಯಲ್ಲಿ ಕೂದಲಿಲ್ಲ ಎಂಬುದನ್ನು ವಧುವಿನ ಮನೆಯವರಿಂದ ಮುಚ್ಚಿಡಲಾಗಿತ್ತು. ವರನಿಗೆ ತಲೆ ಬೋಳಾಗಿದೆ ಎಂದು ತಿಳಿದ ತಕ್ಷಣ ವಧು ಈ ಮದುವೆಯಾಗಲು ನಿರಾಕರಿಸಿದಳು.
ಭಾರತದಲ್ಲಿ ಮದುವೆ ಮನೆಯಲ್ಲಿ ಅನೇಕ ಹೈಡ್ರಾಮಾಗಳು ನಡೆಯುತ್ತಲೇ ಇರುತ್ತದೆ. ವರ ತಡವಾಗಿ ಬಂದ ಎಂದು ಮದುವೆಯನ್ನು (Marriage) ಕ್ಯಾನ್ಸಲ್ ಮಾಡಿದ ವಧು, ವರ ಕುಡಿಯುತ್ತಾನೆಂದು ಮಂಟಪದಿಂದ ಕೆಳಗಿಳಿದು ಹೋದ ವಧು ಹೀಗೆ ನಾನಾ ಕಾರಣದಿಂದ ಮಂಟಪದಲ್ಲೇ ಮದುವೆ ನಿಂತುಹೋದ ಉದಾಹರಣೆಗಳಿವೆ. ಇದೀಗ ಉತ್ತರ ಪ್ರದೇಶದ (Uttar Pradesh) ಉನ್ನಾವೋದಲ್ಲಿ ಯುವತಿಯೊಬ್ಬಳು ವಿಚಿತ್ರ ಕಾರಣದಿಂದಾಗಿ ತನ್ನ ಮದುವೆಯನ್ನು ರದ್ದು ಮಾಡಿಕೊಂಡಿದ್ದಾಳೆ.
ಆ ಮದುವೆಯಲ್ಲಿ ಮದುವೆಯ ಅರ್ಧದಷ್ಟು ಶಾಸ್ತ್ರಗಳು ಪೂರ್ಣಗೊಂಡಿತ್ತು. ವರ ಮಂಟಪಕ್ಕೆ ಕಾಲಿಡುವ ಮೊದಲು ಆತನಿಗೆ ತಲೆ ತಿರುಗಿ ಕೆಳಗೆ ಬಿದ್ದಿದ್ದ. ಆತನನ್ನು ಸಮಾಧಾನಪಡಿಸಿ, ಆತ ಸುಧಾರಿಸಿಕೊಂಡ ಬಳಿಕ ಮಂಟಪಕ್ಕೆ ಕರೆತರಲಾಯಿತು. ಈ ವೇಳೆ ಆತನಿಗೆ ಹಾರ ಹಾಕುವಾಗ ಆತನ ತಲೆಯಿಂದ ವಿಗ್ ಕೆಳಗೆ ಬಿದ್ದಿತು. ಆತನ ತಲೆಯಲ್ಲಿ ಕೂದಲಿಲ್ಲ, ಆತನದ್ದು ಬೋಳು ತಲೆ ಎಂಬುದು ಬಯಲಾಯಿತು.
ಆತನ ತಲೆಯಲ್ಲಿ ಕೂದಲಿಲ್ಲ ಎಂಬುದನ್ನು ವಧುವಿನ ಮನೆಯವರಿಂದ ಮುಚ್ಚಿಡಲಾಗಿತ್ತು. ವರನಿಗೆ ತಲೆ ಬೋಳಾಗಿದೆ ಎಂದು ತಿಳಿದ ತಕ್ಷಣ ವಧು ಈ ಮದುವೆ ಸಮಾರಂಭದಲ್ಲಿ ಮುಂದುವರಿಯಲು ನಿರಾಕರಿಸಿದಳು. ಆಕೆಯ ಮನೆಯವರು ಆಕೆಯನ್ನು ಓಲೈಸಲು ನೋಡಿದರೂ ಕೇಳದ ಆಕೆ ತಾನು ಈ ಮದುವೆಯಾಗುವುದಿಲ್ಲ ಎಂದು ಹಠ ಹಿಡಿದಳು.