Viral Video: ಮಗುವನ್ನು ಬುಟ್ಟಿಯಲ್ಲಿಟ್ಟುಕೊಂಡು ಪ್ರವಾಹ ದಾಟಿದ ತಂದೆ; ವಿಡಿಯೋ ನೋಡಿ ಕಣ್ತುಂಬಿಕೊಂಡ ನೆಟ್ಟಿಗರು | Viral Video: Father Carries Newborn Baby In Waist Deep Water amid Assam Flood Assam Rains


Viral Video: ಮಗುವನ್ನು ಬುಟ್ಟಿಯಲ್ಲಿಟ್ಟುಕೊಂಡು ಪ್ರವಾಹ ದಾಟಿದ ತಂದೆ; ವಿಡಿಯೋ ನೋಡಿ ಕಣ್ತುಂಬಿಕೊಂಡ ನೆಟ್ಟಿಗರು

ಅಸ್ಸಾಂನಲ್ಲಿ ಪ್ರವಾಹದ ನೀರಿನಲ್ಲಿ ಮಗುವನ್ನು ಸಾಗಿಸಿದ ತಂದೆ

Image Credit source: NDTV

Assam Flood: ಬಟ್ಟೆಯಲ್ಲಿ ಸುತ್ತಿಟ್ಟಿದ್ದ ಹಸುಗೂಸನ್ನು ಪ್ಲಾಸ್ಟಿಕ್ ಬುಟ್ಟಿಯಲ್ಲಿ ಇಟ್ಟುಕೊಂಡು ಆ ಮಗುವಿನ ಅಪ್ಪ ತನ್ನ ಎದೆಯ ಮಟ್ಟಕ್ಕೆ ನಿಂತಿದ್ದ ಮಳೆ ನೀರಿನಲ್ಲಿಯೇ ನಡೆದು, ಮಗುವನ್ನು ಎತ್ತರದ ಸ್ಥಳಕ್ಕೆ ಕೊಂಡೊಯ್ಯುವ ವಿಡಿಯೋ ವೈರಲ್ ಆಗಿದೆ.

ಗುವಾಹಟಿ: ಅಸ್ಸಾಂನಲ್ಲಿ ಭೀಕರ ಪ್ರವಾಹ (Assam Floods) ಉಂಟಾಗಿದ್ದು, ಅಲ್ಲಿನ ಜನರು ಮಳೆಯ ಆರ್ಭಟಕ್ಕೆ ತತ್ತರಿಸಿಹೋಗಿದ್ದಾರೆ. ಈಗಾಗಲೇ ಅಸ್ಸಾಂನಲ್ಲಿ (Assam Rains) ಸಾವಿನ ಸಂಖ್ಯೆ 81ಕ್ಕೆ ಏರಿಕೆಯಾಗಿದೆ. ಇದರ ನಡುವೆ ಪ್ರವಾಹ ಪೀಡಿತ ಅಸ್ಸಾಂನ ಜನರ ನೋವನ್ನು ಸೆರೆಹಿಡಿಯುವ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದೀಗ ವೈರಲ್ (Viral Video) ಆಗಿರುವ ವಿಡಿಯೋದಲ್ಲಿ ತಂದೆಯೊಬ್ಬರು ತನ್ನ ನವಜಾತ ಶಿಶುವನ್ನು ಬುಟ್ಟಿಯಲ್ಲಿಟ್ಟುಕೊಂಡು, ಆ ಬುಟ್ಟಿಯನ್ನು ಹೊತ್ತುಕೊಂಡು ಪ್ರವಾಹದ ನೀರಿನಿಂದ ಆವೃತವಾದ ರಸ್ತೆಯನ್ನು ದಾಟುತ್ತಿರುವುದನ್ನು ನೋಡಬಹುದು.

ಬಟ್ಟೆ ಸುತ್ತಿಟ್ಟಿದ್ದ ಹಸುಗೂಸನ್ನು ಪ್ಲಾಸ್ಟಿಕ್ ಬುಟ್ಟಿಯಲ್ಲಿ ಇಟ್ಟುಕೊಂಡು ಆ ಮಗುವಿನ ಅಪ್ಪ ತನ್ನ ಎದೆಯ ಮಟ್ಟಕ್ಕೆ ನಿಂತಿದ್ದ ಮಳೆ ನೀರಿನಲ್ಲಿಯೇ ನಡೆದು, ಮಗುವನ್ನು ಎತ್ತರದ ಸ್ಥಳಕ್ಕೆ ಕೊಂಡೊಯ್ಯುವ ವಿಡಿಯೋ ವೈರಲ್ ಆಗಿದೆ. ಆ ಮಗುವಿನ ಜೊತೆ ಬರುತ್ತಿದ್ದವರು ಆ ಮಗುವನ್ನು ನಗಿಸುತ್ತಾ, ಮಳೆನೀರಿನಿಂದ ತುಂಬಿದ್ದ ಮನೆಯಿಂದ ಎತ್ತರದ ಸ್ಥಳಕ್ಕೆ ಮಗುವನ್ನು ತೆಗೆದುಕೊಂಡು ಹೋಗಿದ್ದಾರೆ.

ಈ ವೀಡಿಯೋವನ್ನು ಶೇರ್ ಮಾಡಿದ ನೆಟ್ಟಿಗರು ಶ್ರೀಕೃಷ್ಣನನ್ನು ಹೊತ್ತುಕೊಂಡು ಯಮುನೆಯನ್ನು ದಾಟಿದ ವಾಸುದೇವನಿಗೆ ಈ ಅಪ್ಪ-ಮಗುವಿನ ವಿಡಿಯೋವನ್ನು ಹೋಲಿಸಿದ್ದಾರೆ.

TV9 Kannada


Leave a Reply

Your email address will not be published.