Viral Video: ಮದುವೆಯ ದಿನ ವಧು ಸಂತೋಷದಿಂದ ಕುಣಿದು ಕುಪ್ಪಳಿಸಿದ ವಿಡಿಯೊ ನೋಡಿ | Bride dance in wedding stage video goes viral in social media


Viral Video: ಮದುವೆಯ ದಿನ ವಧು ಸಂತೋಷದಿಂದ ಕುಣಿದು ಕುಪ್ಪಳಿಸಿದ ವಿಡಿಯೊ ನೋಡಿ

ವಧು ಡಾನ್ಸ್​

ಮದುವೆಯಲ್ಲಿ ನಡೆಯುವ ಕಾರ್ಯಕ್ರಮದ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಹರಿದಾಡುತ್ತವೆ. ಅವುಗಳಲ್ಲಿ ಕೆಲವು ದೃಶ್ಯಗಳು ಹೆಚ್ಚು ಇಷ್ಟವಾಗಿಬಿಡುತ್ತವೆ. ದೃಶ್ಯವನ್ನು ಪದೇ ಪದೇ ನೋಡೋಣ ಅನ್ನುವಷ್ಟು ಮನಸ್ಸಿಗೆ ಇಷ್ಟವಾಗುತ್ತವೆ. ಅಂಥಹುದೇ ವಿಡಿಯೊ ಇದಾಗಿದ್ದು ಫುಲ್ ವೈರಲ್ ಆಗಿದೆ. ವಧು ಸುಂದರವಾಗಿ ರೆಡಿ ಆಗಿ ವೇದಿಕೆ ಮೇಲೆ ಸಂತೋಷದಿಂದ ಕುಣಿಯುತ್ತಿದ್ದಾಳೆ. ವಧುವಿನ ನೃತ್ಯ ನೋಡಿ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

ವಿಡಿಯೊದಲ್ಲಿ ಗಮನಿಸುವಂತೆ ವಧು ಲೆಹೆಂಗಾ ತೊಟ್ಟು ಸುಂದರವಾಗಿ ರೆಡಿ ಆಗಿದ್ದಾಳೆ. ಸುಂದರವಾಗಿ ಕಾಣಿಸುತ್ತಿದ್ದಾಳೆಯೂ ಕೂಡಾ. ಅವಳ ಸ್ನೇಹಿತರೊಂದಿಗೆ ಹಿಂದಿ ಹಾಡಿಗೆ ನೃತ್ಯ ಮಾಡಿದ್ದಾಳೆ. ಸುತ್ತಲೂ ನಿಂತ ಅತಿಥಿಗಳು ಅವಳನ್ನು ಪ್ರೋತ್ಸಾಹಿಸುತ್ತಿದ್ದಾರೆ. ಈ ನೃತ್ಯವನ್ನು ಸಾಮಾಜಿಕ ಜಾಲತಾಣ ಬಳಕೆದಾರರು ಇಷ್ಟಪಟ್ಟಿದ್ದು, ವಿಡಿಯೊ ಸಕತ್ ವೈರಲ್ ಆಗಿದೆ.

ಮೊದಲಿಗೆ ವಿಡಿಯೊವನ್ನು ಇನ್ಸ್ಟಾಗ್ರಾನ್​ನಲ್ಲಿ ಹಂಚಿಕೊಳ್ಳಲಾಗಿದೆ. ಬಳಿಕ ಇತರ ಆನ್ಲೈನ್ ಪ್ಲಾಟ್ ಫಾರ್ಮ್​ಗಳಲ್ಲಿಯೂ ವಿಡಿಯೊ ಹರಿದಾಡುತ್ತಿದೆ. ವಿಡಿಯೊ ಇದುವರೆಗೆ ಸಾವಿರಾರು ಲೈಕ್ಸ್​ಗಳು ಮತ್ತು ಕಾಮೆಂಟ್ಸ್​ಗಳು ಲಭ್ಯವಾಗಿದೆ. ವಿಡಿಯೊವನ್ನು ಹಲವರು ಇಷ್ಟಪಟ್ಟಿದ್ದು ಕಾಮೆಂಟ್ ವಿಭಾಗದಲ್ಲಿ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ನೃತ್ಯ ತುಂಬಾ ಸುಂದರವಾಗಿದೆ ಎಂದು ಓರ್ವರು ಹೇಳಿದ್ದಾರೆ. ನನ್ನ ಮದುವೆಯಲ್ಲಿಯೂ ನಾನು ಈ ವಧುವಿನಂತೆ ನೃತ್ಯ ಮಾಡುತ್ತೇನೆ ಎಂದು ಮತ್ತೋರ್ವರು ಹೇಳಿದ್ದಾರೆ.

ಇದನ್ನೂ ಓದಿ:

Viral Video: ಮನಿಕೆ ಮಗೆ ಹಿತೆ ಹಾಡಿಗೆ ಯುವತಿಯ ಬೆಲ್ಲಿ ಡಾನ್ಸ್​; ನೆಟ್ಟಿಗರೆಲ್ಲಾ ಫಿದಾ

Viral Video: ಡಾನ್ಸ್​ ಮಾಡ್ತಾ ಮಾಡ್ತಾ ವರನನ್ನು ಬೀಳಿಸಿಯೇ ಬಿಟ್ಟನಲ್ಲಾ ಪುಣ್ಯಾತ್ಮ!

TV9 Kannada


Leave a Reply

Your email address will not be published. Required fields are marked *