Viral Video: ಮನೆಮನೆಗೆ ಹಾರಿಕೊಂಡು ಹೋದ ನವಿಲಿನ ವಿಡಿಯೋ ಪರಿಸರ ದಿನದಂದು ವೈರಲ್ | The video of the peacock flying into the house balcony went viral on Environment Day


Viral Video: ಮನೆಮನೆಗೆ ಹಾರಿಕೊಂಡು ಹೋದ ನವಿಲಿನ ವಿಡಿಯೋ ಪರಿಸರ ದಿನದಂದು ವೈರಲ್

ಮನೆಮನೆ ಹಾರಿಕೊಂಡು ಹೋದ ನವಿಲು

ದೆಹಲಿ ನಗರದ ಪ್ರದೇಶದಲ್ಲೊಂದು ಮನೆಮನೆಗೆ ಹಾರಿಕೊಂಡು ಹೋದ ನವಿಲಿನ ವಿಡಿಯೋ ಪರಿಸರ ದಿನದಂದೇ ವೈರಲ್ ಆಗುತ್ತಿದ್ದು, ವಿಡಿಯೋ 4.8 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಇಂದು ವಿಶ್ವ ಪರಿಸರ ದಿನ. ಪ್ರತಿ ವರ್ಷದ ಈ ದಿನದಂದು ಪರಿಸರ ಸಂರಕ್ಷಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಏಕೆಂದರೆ ಮಾನವ ಕುಲ ಹೆಚ್ಚುತ್ತಿದ್ದಂತೆ ಕಟ್ಟಡಗಳು ಕೂಡ ಮೇಲೆದ್ದವು. ಇದಕ್ಕಾಗಿ ಮರಗಳನ್ನು ಧರೆಗುರುಳಿಸಲಾಗುತ್ತಿದೆ. ಇದರ ಪರಿಣಾಮ ಅರಣ್ಯದಲ್ಲಿರುವ ಪ್ರಾಣಿ ಪಕ್ಷಿಗಳ ಮೇಲೂ ಬಿದ್ದಿದೆ. ಅದರಂತೆ ಕಾಡು ಪ್ರಾಣಿಗಳು ಗ್ರಾಮಕ್ಕೆ ನುಗುತ್ತಿವೆ. ಪಕ್ಷಿಗಳು ಮನೆಗಳಿಗೆ ಬರುವುದು ಸಾಮಾನ್ಯವಾಗಿದ್ದರೂ ದೆಹಲಿಯಂಥ ದೊಡ್ಡದೊಡ್ಡ ನಗರದಲ್ಲಿ ಇದು ದೊಡ್ಡ ಸಂಗತಿ. ಅದರಂತೆ ದೆಹಲಿ ನಗರದ ಪ್ರದೇಶದಲ್ಲೊಂದು ಮನೆಮನೆಗೆ ಹಾರಿಕೊಂಡು ಹೋದ ನವಿಲಿನ ವಿಡಿಯೋ ಪರಿಸರ ದಿನದಂದೇ ವೈರಲ್ ಆಗುತ್ತಿದೆ.

TV9 Kannada


Leave a Reply

Your email address will not be published.