Viral Video: ಮಳೆಯಿಂದಾಗಿ ಪಂದ್ಯ ರದ್ದು: ಮಳೆಯ ನಡುವೆ ಮೈದಾನದಲ್ಲೇ ಸ್ಟಾರ್ ಆಲ್​ರೌಂಡರ್​ನ ಮಸ್ತಿ | Shakib Al Hasan enjoys on wet covers after play gets called off due to rain


Viral Video: ಮಳೆಯಿಂದಾಗಿ ಪಂದ್ಯ ರದ್ದು: ಮಳೆಯ ನಡುವೆ ಮೈದಾನದಲ್ಲೇ ಸ್ಟಾರ್ ಆಲ್​ರೌಂಡರ್​ನ ಮಸ್ತಿ

Shakib Al Hasan

ಢಾಕಾದಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್ (BAN vs PAK) ಪಂದ್ಯದ 2ನೇ ದಿನದಾಟ ಮಳೆಯ ಕಾರಣ ರದ್ದುಗೊಳಿಸಲಾಯಿತು. ಭಾನುವಾರದ ದಿನದಾಟದಲ್ಲಿ ಕೇವಲ 38 ಎಸೆತಗಳ ಆಟ ಮಾತ್ರ ನಡೆಸಲು ಸಾಧ್ಯವಾಗಿತ್ತು. ಮಳೆಯಿಂದಾಗಿ ಮೊದಲ ಸೆಷನ್‌ನ ಆಟ ಸಂಪೂರ್ಣ ರದ್ದಾಗಿತ್ತು. ಸ್ಥಳೀಯ ಕಾಲಮಾನದ ಪ್ರಕಾರ ದಿನದ ಆಟ ಮಧ್ಯಾಹ್ನ 12.50ಕ್ಕೆ ಆರಂಭವಾಯಿತು. ಆದರೆ ಕೇವಲ 6.2 ಓವರ್‌ಗಳು ಆಗಿದ್ದ ವೇಳೆ ಮಳೆ ಮತ್ತೆ ಪಂದ್ಯಕ್ಕೆ ಅಡ್ಡಿಪಡಿಸಿತು. ಆ ಬಳಿಕ ಪಂದ್ಯವನ್ನು ಪ್ರಾರಂಭಿಸಲು ಸಾಧ್ಯವಾಗಲಿಲ್ಲ. ಮೊದಲ ದಿನದಾಟದ ಮೇಲೆ ಪರಿಣಾಮ ಬೀರಿದ ನಂತರ ಎರಡನೇ ದಿನ 98 ಓವರ್‌ಗಳು ನಡೆಯಬೇಕಿತ್ತು. ಆದರೆ ಮಳೆ ಮತ್ತು ಕೆಟ್ಟ ಬೆಳಕಿನಿಂದಾಗಿ ಅಂಪೈರ್ 6.2 ಓವರ್‌ಗಳ ನಂತರ ಪಂದ್ಯವನ್ನು ನಿಲ್ಲಿಸಿದರು.

ಎರಡನೆ ದಿನದ ಆಟ ಸಂಪೂರ್ಣ ಮಳೆಯಲ್ಲಿ ಕೊಚ್ಚಿ ಹೋಗಿದ್ದರೂ ಉಭಯ ದೇಶಗಳ ಕೆಲವು ಆಟಗಾರರು ಈ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡರು. ಅದರಲ್ಲೂ ಬಾಂಗ್ಲಾದೇಶದ ಸ್ಟಾರ್ ಆಲ್​ರೌಂಡರ್ ಶಕೀಬ್ ಅಲ್ ಹಸನ್ ಮಳೆಯಲ್ಲೇ ಮೋಜು ಮಸ್ತಿ ಮಾಡಿದರು. ಮಳೆಯಿಂದಾಗಿ, ವಿಕೆಟ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶವು ಕವರ್‌ಗಳಿಂದ ಮುಚ್ಚಲಾಗಿತ್ತು. ಮಳೆಯ ರಭಸಕ್ಕೆ ಕವರ್‌ಗಳ ಮೇಲೂ ನೀರು ಶೇಖರಣೆಯಾಗಿರುವುದನ್ನು ನೋಡಿದ ಶಕೀಬ್ ವಾಟರ್ ಸ್ಲೈಡ್ ಮಾಡುತ್ತಾ ಸಮಯ ಕಳೆದರು.

ಇನ್ನೊಂದೆಡೆ ಪಂದ್ಯ ರದ್ದಾದ ಕಾರಣ ಅತ್ತ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಡ್ರೆಸ್ಸಿಂಗ್ ರೂಮ್‌ನಲ್ಲಿ ಸಹ ಆಟಗಾರರೊಂದಿಗೆ ಸಿಲ್ಲಿ ಕ್ರಿಕೆಟ್ ಆಡಿದರು. ಇದೀಗ ಈ ಇಬ್ಬರು ಸ್ಟಾರ್ ಆಟಗಾರರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ಮೊದಲ ಇನಿಂಗ್ಸ್​ನಲ್ಲಿ 2 ವಿಕೆಟ್​ ಕಳೆದುಕೊಂಡು 188 ರನ್​ಗಳಿಸಿದೆ. ಇದೀಗ 2ನೇ ದಿನದಾಟ ಮಳೆಗೆ ಆಹುತಿಯಾಗಿದ್ದು, ಮೂರನೇ ದಿನದಾಟ ನಡೆಯಲಿದೆಯಾ ಕಾದು ನೋಡಬೇಕಿದೆ.

TV9 Kannada


Leave a Reply

Your email address will not be published. Required fields are marked *