Viral Video: ಮಾತನಾಡಲು ಅವಕಾಶ ಸಿಗಲಿಲ್ಲವೆಂದು ಟಿವಿ ಚಾನೆಲ್​ ಲೈವ್​ನಲ್ಲೇ ಎದ್ದು ಡ್ಯಾನ್ಸ್​ ಮಾಡಿದ ಪಾನಲಿಸ್ಟ್​ | Panalist make dance in live programe while not getting chance to talk


Viral Video: ಮಾತನಾಡಲು ಅವಕಾಶ ಸಿಗಲಿಲ್ಲವೆಂದು ಟಿವಿ ಚಾನೆಲ್​ ಲೈವ್​ನಲ್ಲೇ ಎದ್ದು ಡ್ಯಾನ್ಸ್​ ಮಾಡಿದ ಪಾನಲಿಸ್ಟ್​

ನೇರಪ್ರಸಾರದಲ್ಲಿ ಡ್ಯಾನ್ಸ್​ ಮಾಡಿದ ಪಾನಲಿಸ್ಟ್​

ಕೆಲವೊಮ್ಮೆ ಜನ ತಮ್ಮಡೆಗೆ ಇತರರು ಗಮನಹರಿಸಬೇಕೆಂದು ವಿಚಿತ್ರ ರೀತಿಯಲ್ಲಿ  ವರ್ತಿಸುತ್ತಾರೆ. ಅಂತಹದ್ದೇ ಒಂದು ಘಟನೆ ಟಿವಿಯೊಂದರ ನೇರಪ್ರಸಾರ ಕಾರ್ಯಕ್ರಮದಲ್ಲಿ ನಡೆದಿದೆ. ರಿಪಬ್ಲಿಕ್​ ಬಾಂಗ್ಲಾ (Republic Bangla)  ಚಾನೆಲ್​ನಲ್ಲಿ ನಡೆಯುತ್ತಿದ್ದ ನೇರ ಪ್ರಸಾರದ ಕಾರ್ಯಕ್ರಮದ ಚರ್ಚೆಯಲ್ಲಿ ಪ್ಯಾನಲಿಸ್ಟ್ (Panelist)​ ಒಬ್ಬರು ಮಾತನಾಡಲು ಅವಕಾಶ ಸಿಗಲಿಲ್ಲವೆಂದು ನೇರಪ್ರಸಾರದಲ್ಲೇ ಎದ್ದು ನಿಂತು ಡ್ಯಾನ್ಸ್ (Dance) ಮಾಡಿದ್ದಾರೆ. ಇದು ಒಂದು ವರ್ಷದ ಹಳೆಯ ವಿಡಿಯೋ. ಆದರೆ ಈಗ ವೈರಲ್​ ಆಗಿದೆ. ಎದ್ದು ನಿಂತು ಡ್ಯಾನ್ಸ್​ ಮಾಡಿದ ಪ್ಯಾನಲಿಸ್ಟ್​ ಅನ್ನು ಪರಿಸರವಾದಿ ರೋಶನಿ ಅಲಿ (Roshni Ali) ಎಂದು ಗುರುತಿಸಲಾಗಿದೆ. ದೀಪಾವಳಿಯಲ್ಲಿ ಪಟಾಕಿ ನಿಷೇಧಿಸಬೇಕು ಎನ್ನುವ ಕುರಿತಾದ ಚರ್ಚೆಯ ವೇಳೆ ಮಾತನಾಡಲು ಅವಕಾಶ  ಸಿಗಲಿಲ್ಲವೆಂದು ಎದ್ದು ನಿಂತು ಡ್ಯಾನ್ಸ್​ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.

ರೋಶನಿ ಅಲಿ ಈ ಹಿಂದೆ ಕೋಲ್ಕತ್ತಾ ಹೈಕೋರ್ಟ್​ನಲ್ಲಿ ಸಲ್ಲಿಸಿದ್ದ ದೂರಿನಲ್ಲಿ ಪಟಾಕಿಯಿಂದ ವಾಯು ಮಾಲಿನ್ಯದಿಂದ ಕೊರೋನಾ ಸೋಂಕು ಹೆಚ್ಚುತ್ತದೆ ಎಂದು ಹೇಳಿದ್ದರು. ಇದೀಗ ವಿಡಿಯೋದಲ್ಲಿ ಡಿಬೇಟ್​ ವೇಳೆ ಪಟಾಕಿಯನ್ನು ನಿಷೇಧಿಸಬೇಕು. ಅದು ಪರಿಸರಕ್ಕೆ ಮಾರಕವಾಗಿದೆ. ಅಲ್ಲದೆ ಕೊರೋನಾ ಹರಡಲೂ ಕಾರಣವಾಗುತ್ತದೆ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಲು ಬಯಸಿದ್ದರು. ಆದರೆ ಅವಕಾಶ ಸಿಗದೆ ಎದ್ದು ನಿಂತು ಡ್ಯಾನ್ಸ್​ ಮಾಡಿದ್ದಾರೆ. ರೋಶನಿ ಅವರು ಎದ್ದು ನಿಂತು ಡ್ಯಾನ್ಸ್​ ಮಾಡುತ್ತಿದ್ದಂತೆಯೆ ಉಳಿದ ಪ್ಯಾನಲಿಸ್ಟ್​ಗಳು ಗಾಬರಿಗೊಂಡಿದ್ದಾರೆ. ನಂತರ ಅವರ ವರ್ತನೆ ನೋಡಿ ಮಾತನಾಡಲು ಅವಕಾಶ ನೀಡಲಾಯಿತು. ಈ ಕುರಿತು ನ್ಯೂಸ್​ 18 ಸುದ್ದಿ ಸಂಸ್ಥೆ ವರದಿ ಮಾಡಿದೆ.

2021ರ ನವೆಂಬರ್​ನಲ್ಲಿ ಸುಪ್ರೀಮ್​ ಕೋರ್ಟ್​ ವಾಯು ಮಾಲಿನ್ಯ ಹೆಚ್ಚಿರುವ ಮತ್ತು ಕೊರೋನಾ ರೋಗಿಗಳು ಐಸೋಲೇಟ್​ ಆಗಿರುವ ಪ್ರದೇಶಗಳಲ್ಲಿ ಹಬ್ಬಗಳ ಆಚರಣೆ ಸಂದರ್ಭದಲ್ಲಿ ಪಟಾಕಿಗಳನ್ನು ನಿಷೇಧಿಸಿತ್ತು. ಉಳಿದ ಪ್ರದೇಶಗಳಲ್ಲಿಯೂ ಹಸಿರು ಪಟಾಕಿಯನ್ನು ಮಾತ್ರ ಸಿಡಿಸಲು ಅವಕಾಶ ನೀಡಿತ್ತು. ಈ ಕುರಿತು ವಾದ ಮಂಡಿಸಿದ್ದ ರೋಶನಿ ಅವರ ವಿಡಯೋವನ್ನು ಎಲಿಜಬೇತ್​ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಸಿಕ್ಕಾಪಟ್ಟೆ ವೈರಲ್​ ಆಗಿದೆ.

TV9 Kannada


Leave a Reply

Your email address will not be published. Required fields are marked *